ತಿಪಟೂರು :
ನವೆಂಬರ್ 23 ರಂದು ಪತ್ರಿಕೆಯಲ್ಲಿ ರಸ್ತೆ ಮಧ್ಯದಲ್ಲಿ ಗುಂಡಿ ಮುಚ್ಚುವವರೇ ಇಲ್ಲ ಎಂಬ ಅಡಿಬರಹದಲ್ಲಿ ಪ್ರಟವಾಗಿದ್ದ ಸುದ್ದಿಗೆ ಫಲಶೃತಿ ದೊರೆತಿದೆ.
ಪಟ್ಟಣದ 2ನೇ ವಾರ್ಡ್ ರಸ್ತೆಯಲ್ಲಿ ಸುಮಾರು 9 ತಿಂಗಳ ಚರಂಡಿ ನಿರ್ಮಾಣ ಮಾಡುವಾಗ ಸಾರ್ವಜನಿಕರು ಓಡಾಡುವ ರಸ್ತೆಯ ಮಧ್ಯದಲ್ಲಿ ಸ್ಲ್ಯಾಬ್ ಓಪನ್ ಮಾಡಿ ಹಾಗೆಯೆ ಬಿಟ್ಟಿದ್ದು ಇದರ ಬಗ್ಗೆ ಈ ವಾರ್ಡ್ ನಗರಸಭಾ ಸದಸ್ಯ ಡಾ.ಓಹಿಲಾ ತರಕಾರಿ ಗಂಗಾಧರ್ ಅವರು ಸಂಬಂಧಪಟ್ಟ ಎಂಜಿನಿಯರ್ ಹಾಗೂ ಎ.ಇ.ಇ ಅವರನ್ನು ಸ್ಥಳಕ್ಕೆ ಕರೆಸಿ ಇದನ್ನು ತುರ್ತಾಗಿ ಸರಿಪಡಿಸಿಕೊಡಿ ಎಂದು ಕೋರಿದ್ದರು.
ಸುಮಾರು ಬಾರಿ ಮೌಖಿಕವಾಗಿ ಹೇಳಿದರೂ ಸಹ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪತ್ರಿಕೆಯಲ್ಲಿ ಪ್ರಕಟವಾದ ಹಿನ್ನೆಲೆ ಮಂಗಳವಾರ ರಸ್ತೆಯನ್ನು ನಗರಸಭೆಯ ಅಧಿಕಾರಿಗಳು ಸರಿಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ