ತಿಪಟೂರು :
ಸೇವೆಯ ಜೊತೆಗೆ ಸೇವೆ ಮಾಡುವ ನಿಮ್ಮ ಆರೋಗ್ಯವೂ ಮುಖ್ಯವಾಗಿರಲಿ ಎನ್ನುವ ಉದ್ದೇಶದಿಂದ ಕೊರೊನಾ ಸೇನಾನಿಗಳಾದ ನಿಮ್ಮ ಸೇವೆ ಜನರನ್ನು ಕೊರೊನಾದಿಂದ ರಕ್ಷಿಸಿದೆ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.
ತಾಲ್ಲೂಕಿನ ಗ್ರಾಮಾಂತರ, ಹೊನ್ನವಳ್ಳಿ, ನೊಣವಿನಕೆರೆ ಹಾಗೂ ಕಿಬ್ಬನಹಳ್ಳಿ ಕ್ರಾಸ್ ಪೋಲೀಸ್ ಠಾಣೆಯ ಸಿಬ್ಬಂದಿಗೆಳಿಗೆ ಜೀವರಕ್ಷಕ ಸಾಧನಗಳಾದ ಮಾಸ್ಕ್, ಸ್ಯಾನಿಟೈಸರ್ ಮತ್ತು ಫೇಸ್‍ಶೀಲ್ಡ್‍ಗಳನ್ನು ವಿತರಿಸಿ ಮಾತನಾಡಿದ ಅವರು ಜನರು ಅನಗತ್ಯವಾಗಿ ರಸ್ತೆಗಿಳಿಯದಂತೆ ತಮ್ಮ ಪ್ರಾಣವನ್ನು ಮತ್ತು ಕುಟುಂಬದವರ ಆರೋಗ್ಯವನ್ನು ಮರೆತು ಕೊರೊನಾವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದೀರಿ. ಜೊತೆಗೆ ಯಾವಾಗಲು ನಿಂತುಕೊಂಡೆ ಕೆಲಸಮಾಡುದು ಮತ್ತು ಯಾವಾಗಲು ಮಲಿನ ರಸ್ತೆಗಳಲ್ಲಿ ಕೆಲಸ ಮಾಡುವ ಆರಕ್ಷಕರಿಗೆ ಹೆಚ್ಚಾಗಿ ವೆರಿಕೋಸ್‍ವೈನ್ ಮತ್ತು ಶ್ವಾಸಕೋಶ ಸಂಬಂಧಿ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಂತಹ ಸಮಯದಲ್ಲಿ ಶೀಘ್ರವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ನಿಮ್ಮ ಕುಟುಂಬಕ್ಕೆ ಆಧಾರ ಸ್ತಂಬವಾದ ನಿಮ್ಮ ಜೀವವನ್ನು ರಕ್ಷಿಸಿಕೊಳ್ಳಿ ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಕೆ.ಸಿ.ಸಿ ಹಾಗೂ ನಗರಸಭಾ ಸದಸ್ಯ ವಿ.ಯೋಗೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ಸುನಿಲ್ ಮೇಗಲಮನೆ, ಲೋಕ್‍ನಾಥ್‍ಸಿಂಗ್, ಗ್ರಾಮಾಂತರ ಸಿ.ಪಿ.ಐ ಜಯಲಕ್ಷಿ ಸದಾಶಿವ್ ಮತ್ತು ಗ್ರಾಮಾಂತರ, ಹೊನ್ನವಳ್ಳಿ, ನೊಣವಿನಕೆರೆ ಹಾಗೂ ಕಿಬ್ಬನಹಳ್ಳಿ ಕ್ರಾಸ್ ಪೋಲೀಸ್ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
