ತಿಪಟೂರು :
ಕೋವಿಡ್-19 ಪರೀಕ್ಷೆ ಮಾಡುವ ಬರದಲ್ಲಿ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಹೊನ್ನವಳ್ಳಿ ಪ್ರಾಥಮಿಕ ಆರೋಗ್ಯ ಸಿಬ್ಬಂದಿ ಎಡವಟ್ಟೊಂದನ್ನು ಮಾಡಿ ಪೇಚಿಗೆ ಸಿಲುಕಿದ್ದಾರೆ.
ತಾಲ್ಲೂಕಿನಲ್ಲಿ ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ “ವೈದ್ಯರ ನಡೆ ಹಳ್ಳಿಯ ಕಡೆ” ಎಂಬ ಕಾರ್ಯಕ್ರಮದಲ್ಲಿ ಜೂ.14 ರಂದು ಕೊನೆಹಳ್ಳಿಯಲ್ಲಿ, ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಹೊನ್ನವಳ್ಳಿ ಪ್ರಾಥಮಿಕ ಆರೋಗ್ಯ ಸಿಬ್ಬಂದಿಯು ಕೊರೊನಾ ಪರೀಕ್ಷೆ ಮಾಡುವ ಸಂದರ್ಭದಲ್ಲಿ ಯಾರು ಇಲ್ಲದ ಖಾಸಗಿ ಮನೆಯನ್ನು ಅವರ ಅನುಮತಿಯನ್ನು ಪಡೆಯದೇ ಬಳಸಿಕೊಳ್ಳುವುದಲ್ಲದೇ ಹಾಗೂ ಪರೀಕ್ಷೆಯನ್ನು ಮಾಡಿದ ನಂತರ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಸ್ಥಳವನ್ನು ಸ್ವಚ್ಚಮಾಡಿ ಕ್ರಿಮಿನಾಶಕವನ್ನು ಸಿಂಪಡಿಸದೇ ಬೇಜವಾಬ್ದಾರಿಯನ್ನು ಮೆರೆದಿದ್ದಾರೆ.
ಸದರಿ ಖಾಸಗಿ ಮನೆಯು ಕೊನೇಹಳ್ಳಿ ಸ್ಟೇಷನ್ ಆವರಣದಲ್ಲಿದ್ದು, ಸಿದ್ದಗಂಗಮ್ಮ ಎಂಬುವವರಿಗೆ ಸೇರಿರುತ್ತದೆ. ಮನೆಯವರೆಲ್ಲರು ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಈ ಕೃತ್ಯ ಎಸಗಿದ್ದು ಈ ಬಗ್ಗೆ ಸಂಬಂಧಪಟ್ಟವರನ್ನು ಕೇಳಿದರೆ ಏನು ಆಗೀಯೆ ಇಲ್ಲವೆಂಬಂತೆ ಉಡಾಫೆ ಉತ್ತರ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ