ತಿಪಟೂರು:
ಕೊರೊನ ಹಾವಳಿಯಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿದ್ದು ಜೂ.14 ರಿಂದ ಮತ್ತೆ ಶಾಲಾ ಕಾಲೇಜುಗಳಲ್ಲಿ ದಾಖಲಾತಿ ಆರಂಭವಾಗಿದೆ. ಈ ನಡುವೆ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ 8-10 ವಿದ್ಯಾರ್ಥಿಗಳು ಸೇರಿಕೊಂಡು ಕಾಲೇಜಿನ ಪ್ರವೇಶ ದ್ವಾರಕ್ಕೆ ಬೂದು ಗುಂಬಳ, ತೆಂಗಿನ ಕಾಯಿ ಹೊಡೆದು ಸ್ವಾಗತ ಕೋರಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ದ್ವಿತೀಯ ಪಿಯುಸಿ ಪರೀಕ್ಷೆ ಇಲ್ಲದೆ ತೇರ್ಗಡೆಯಾದ ಸಂಭ್ರಮಕ್ಕೆ ಕುಂಬಳ ಕಾಯಿ ಹೊಡೆದರೊ ಅಥವಾ ಇನ್ನೇನು ಕಾಲೇಜು ಆರಂಭವಾಗಲಿದ್ದು ಕೊರೊನಾ ತೊಲಗಿ ನಾವೆಲ್ಲರೂ ಕಾಲೇಜಿಗೆ ಬರುವಂತಾಗಲಿ ಎಂದು ಕುಂಬಳ ಕಾಯಿ ಹೊಡೆದು ಹೊಡೆದರೊ ಎಂಬುದು ತಿಳಿಯದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
