ಕೊವಿಡ್‍ನಿಂದ ಮೃತರಾದ ಹೈನುಗಾರರಿಗೆ 1 ಲಕ್ಷ ಪರಿಹಾರ

 ತಿಪಟೂರು : 

     ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಸರಬರಾಜು ಮಾಡುತ್ತಿದ್ದು, ಕೋವಿಡ್‍ಗೆ ತುತ್ತಾಗಿ ಮರಣ ಹೊಂದಿದ ಪ್ರತಿ ವ್ಯಕ್ತಿಗೆ ಒಕ್ಕೂಟದ ವತಿಯಿಂದ ಒಂದು ಲಕ್ಷ ರೂ.ಗಳನ್ನು ಮರಣ ಪರಿಹಾರವಾಗಿ ನೀಡಲಾಗುವುದು ಎಂದು ತುಮುಲ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ತಿಳಿಸಿದರು.

      ನಗರದ ನೌಕರ ಭವನದಲ್ಲಿ ಹಾಲು ಉತ್ಪಾದಕರ ಕಟ್ಟಡ ನಿರ್ಮಾಣ, ಮರಣ ಪರಿಹಾರ, ಮೇವಿನ ಬೀಜಗಳ ವಿತರಣೆ ಮಾಡಿ ಬಿಎಮ್‍ಸಿ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು ಕೋವಿಡ್ ಸಮಯದಲ್ಲಿ ಒಕ್ಕೂಟಕ್ಕೆ ನೀರಿಕ್ಷೆ ಮೀರಿ ಹಾಲು ಪೂರೈಕೆಯಾಗಿದ್ದು, ರೈತರಿಗೆ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ಒಕ್ಕೂಟವು ಹಾಲಿನ ರಜಾ ಮಾಡದೆ ಪ್ರತಿದಿನ ಹಾಲು ಖರೀದಿ ಮಾಡಿದೆ. ಅದೇ ಸಾರ್ವಜನಿಕ ವಲಯದಲ್ಲಿ ಎಲ್ಲಾ ನೌಕರರಿಗೆ ರಜೆ ಇದ್ದರೂ ಸಹ ನಮ್ಮ ಸಂಘದ ಸಿಬ್ಬಂದಿಗಳಿಗೆ ರಜೆಯೇ ಇಲ್ಲದೆ ಅವಿರತವಾಗಿ ದುಡಿದಿದ್ದಾರೆ. ಹಾಲು ಉತ್ಪಾದಕರು ಹಾಗೂ ಒಕ್ಕೂಟದ ಸಂಪರ್ಕ ಸೇತುವೆಯಾಗಿ ಕಾರ್ಯದರ್ಶಿಗಳು ತಮ್ಮ ತಮ್ಮ ಗ್ರಾಮಗಳಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದು ಅವರಗಳ ಸೇವೆಯ ಫಲವಾಗಿ ಇಂದು ಜಿಲ್ಲೆಯ ಹೈನುಗಾರಿಗೆಯು ಉತ್ತಮ ಸ್ಥಿತಿಯಲ್ಲಿದ್ದು ಕಾರ್ಯದರ್ಶಿಗಳ ಈ ಸೇವೆಯು ಪ್ರಶಂಸನೀಯವಾದುದು ಎಂದರು.

      ಶೇಖರಣೆ ಮತ್ತು ತ್ರಾಂತ್ರಿಕ ವ್ಯವಸ್ಥಾಪಕ ಡಾ.ನರಸಿಂಹನ್ ಮಾತನಾಡಿ ಶೀತಲೀಕರಣದ ಕೇಂದ್ರಗಳಲ್ಲಿ ಸ್ವಚ್ಚತೆ ಮತ್ತು ಗುಣಮಟ್ಟವು ಅತೀ ಮುಖ್ಯವಾಗಿದ್ದು, ಇದರ ಬಗ್ಗೆ ಕಾರ್ಯದರ್ಶಿಗಳು ಹಾಗೂ ಸಂಘದ ಅದ್ಯಕ್ಷರು ಗಮನಿಸಬೇಕು. ಹಾಲಿನ ವಾಹನದ ಚಾಲಕರು ನೀಡುವ ಆಮೀಷಗಳಿಗೆ ಕಾರ್ಯದರ್ಶಿಗಳು ಬಲಿಯಾಗದೆ ಕಾಯಕ ಮಾಡಬೇಕು ಹಾಗೂ ಅಳತೆ ಮಾಪನಗಳ ಬಗ್ಗೆ ಹದಿನೈದು ದಿನಗಳಿಗೊಮ್ಮೆ ಪರಿಶೀಲನೆ ಮಾಡುತ್ತಿರಬೇಕೆಂದರು.

      ಕಾರ್ಯಕ್ರಮದಲ್ಲಿ ಡಾllಚಂದ್ರಪ್ಪ, ತಾಲ್ಲೂಕು ಉಪ ವ್ಯವಸ್ಥಾಪಕ ಮಂಜುನಾಥ್‍ನಾಯ್ಕ, ತಾಲ್ಲೂಕು ವಿಸ್ತರಣಾಧಿಕಾರಿ ಶ್ರೀಲಕ್ಷ್ಮಿ, ಮಲ್ಲಿಕಾರ್ಜುನ್, ಸಾಗರ್, ನವೀನ, ಸಂಘದ ಅದ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link