ಮಕ್ಕಳಿಗೆ ಮಾಸ್ಕ್‍ ಇಲ್ಲ, ಅಂತರವಿಲ್ಲದೇ ಅಂಗನವಾಡಿ ಕಟ್ಟಡ ಉದ್ಘಾಟನೆ!!

 ತಿಪಟೂರು : 

      ಅಂಗನವಾಡಿಗಳು ಮಕ್ಕಳ ಮನೋವಿಕಾಸಕ್ಕೆ ರಹದಾರಿಯಾಗಿವೆ. ಈ ಅಂಗನವಾಡಿ ನೂತನ ಕಟ್ಟಡ ಮಕ್ಕಳ ಬೆಳವಣಿಗೆಗೆ ಸಹಾಯವಾಗಲಿ ಎಂದು ಶಾಸಕ ಬಿ.ಸಿ.ನಾಗೇಶ್ ಶುಭ ಹಾರೈಸಿದರು.

      ತಾಲೂಕಿನ ಕಿಬ್ಬನಹಳ್ಳಿ ಕಾಲೋನಿ (ಹಳೇಯೂರು) ಗ್ರಾಮದಲ್ಲಿ RIDF-22ಯೋಜನೆಯಡಿ ಅಂದಾಜು ಮೊತ್ತ ರೂ 9.17 ಲಕ್ಷಅನುದಾನದಲ್ಲಿ ನಿರ್ಮಾಣ ಏಜೆನ್ಸಿ ನಿರ್ಮಿತಿ ಕೇಂದ್ರದ ವತಿಯಿಂದ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಮಕ್ಕಳ ಸೃಜನಾತ್ಮಕ ಹಾಗೂಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಪೋಷಕರ ಗಮನಸೆಳೆಯಲು ಹಾಗೂ ಮಕ್ಕಳ ಸವಾರ್ಂಗೀಣ ಬೆಳವಣಿಗೆಗೆ ಕಾರ್ಯನಿರ್ವಹಿಸಲು ಅಂಗನವಾಡಿಕಾರ್ಯಕರ್ತೆಯರಿಗೆ ಮಕ್ಕಳಿಗೆ ಪ್ರಕೃತಿಯ ಪರಿಚಯವನ್ನು ಮಾಡಿಕೊಡಬೇಕು.ಚಿಕ್ಕ ಮಕ್ಕಳಿಗೆ ಈ ವಯಸ್ಸಿನಲ್ಲಿ ಹೆಚ್ಚು ಭಾಷೆಗಳನ್ನು ಗ್ರಹಿಸುವ ಮತ್ತುಕಲಿಯುವ ಬೌತಿಕತೆ ಹೆಚ್ಚಾಗಿರುತ್ತದೆ, ಮತ್ತು ಕಲಿಕಾ ಕಾರ್ಯವು ಉನ್ನತಗತಿಯಲ್ಲಿದ್ದು ಸುತ್ತುಮುತ್ತಲಿನದ್ದನ್ನು ನೋಡಿ ಕಲಿಯುವ ಕುತೂಹಲ ಹೆಚ್ಚಾಗಿರುತ್ತದೆ. ಇದನ್ನು ನಾವು, ನೀವುಗಳು ಪತ್ತೆಹಚ್ಚಿ ಮಾರ್ಗದರ್ಶನ ನೀಡಿದರೆ ಮಕ್ಕಳು ಪ್ರತಿಭಾವಂತರಾಗುತ್ತಾರೆಂದು ತಿಳಿಸಿದರು.

 ಮಕ್ಕಳಿಗೆ ಮಾಸ್ಕ್‍ ಇಲ್ಲ:

      ವಯೋವೃದ್ಧರು ಮತ್ತು 10 ವರ್ಷಕ್ಕಿಂತ ಮಕ್ಕಳು ಕೊರೊನಾ ಸಂದರ್ಭದಲ್ಲಿ ಹೊರಬಾರದೆಂದು ಸರ್ಕಾರಿಆದೇಶವಿದ್ದುಅತಿಜರೂರು ಕೆಲಸವಿದ್ದರೆ ಸೂಕ್ತ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡು ಹೊರಬರಬೇಕಾಗಿರುತ್ತದೆ. ಆದರೆ ಈ ಅಂಗನವಾಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾಸ್ಕ್‍ಇರಲಿಲ್ಲ, ಹೋಗಲಿ ಹಿರಿಯರಿಗಾದರು ಸಾಮಾಜಿಕಅಂತರವನ್ನು ಕಾಪಾಡಬೇಕಾದ ಜವಾಬ್ದಾರಿ ಎಲ್ಲಿ ಹೋಯಿತುಎಂಬುದು ತಿಳಿಯದಾಗಿದೆ.ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳೇ ಹೀಗಾದರೆ ಸಾಮಾನ್ಯಜನರಿಗೆ ಬುದ್ದಿ ಹೇಳುವವರ್ಯಾರು ಎಂದು ಪ್ರಶ್ನಿಸಿದರು.

      ಕಾರ್ಯಕ್ರಮದಲ್ಲಿ ಸಿ.ಡಿ.ಪಿ.ಓ ಪಿ ಓಂಕಾರಪ್ಪ, ನಿರ್ಮಿತಿಕೇಂದ್ರದ ಎಂಜಿನಿಯರ್ ಸಿದ್ದೇಶ್,ಪಿ.ಡಿ.ಓ ವೈ.ಬಿ.ಸಿದ್ದರಾಮಯ್ಯ, ಗ್ರಾ.ಪಂ .ಮಾಜಿಉಪಾಧ್ಯಕ್ಷ ಲೋಕೇಶ್, ರವಿ,ಪ್ರಸಾದ, ಇಲಾಖೆಯ ಮೇಲ್ವಿಚಾರಕಿ ಗೌರವ್ವ ಎಣ್ಣಿ, ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು, ಹಾಗೂ ತಾಯಂದಿರು ಮಕ್ಕಳ ಫೋಷಕರು, ಗ್ರಾಮಸ್ಥರು, ಅಂಗನವಾಡಿ ಮಕ್ಕಳು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link