ಆರ್ಥಿಕ ಸಂಕಷ್ಟದ ನಡುವೆ ಕಂದಾಯ ಕಟ್ಟಲು ಸಮಸ್ಯೆಯಾದ ವಿದ್ಯುತ್ ಅಭಾವ

 ತಿಪಟೂರು : 

      ಕೋವಿಡ್ ಸಂಕಷ್ಟದ ನಡುವೆ ಜನರು ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ನಡುವೆ ನಗರಸಭೆಯವರು ತನ್ನ ಆದಾಯ ಮೂಲವಾದ ಕಂದಾಯವನ್ನು ಕಟ್ಟಲು ಜನರು ಸರದಿಯಲ್ಲಿ ನಿಂತು ಕಾದರೂ ಸಹ ವಿದ್ಯುತ್ ಇಲ್ಲವೆಂದು ಹೇಳಿ ವಿದ್ಯುತ್ ಬರುವವರೆಗೂ ಜನರನ್ನು ಕಾಯಿಸುತ್ತಿದ್ದಾರೆ.

      ಬೆಳಗ್ಗೆಯೆ ನಗರಸಭೆಗೆ ಬಂದು ಕಂದಾಯವನ್ನು ಕಟ್ಟಿ, ತಮ್ಮ ನಿತ್ಯಕಾರ್ಯಗಳಿಗೆ ತೆರಳೋಣವೆಂದು ಚಲನ್ ಹಾಕಿಸಿಕೊಳ್ಳಲು ಬಂದರೆ ವಿದ್ಯುತ್ ಇಲ್ಲದೆ ಗಂಟೆಗಟ್ಟಲೆ ಕಾಯುವಂತಾಗಿದ್ದು ಸಾರ್ವಜನಿಕರು ಕಂದಾಯಕಟ್ಟಲು ಮುಂದೆ ಬಾರದಂತಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಕಂದಾಯ ಕಟ್ಟದಿದ್ದರೆ ನಗರಸಭೆಯವರೆ ಹುಡುಕಿಕೊಂಡು ಬಂದು ಕಟ್ಟಿಸಿಕೊಳ್ಳುತ್ತಾರೆ ಎನ್ನುತ್ತಿದ್ದಾರೆ.

     ಈ ಸಮಸ್ಯೆ ಇಂದು ನಿನ್ನೆಯದಲ್ಲ ನಗರಸಭೆಯಲ್ಲಿ ಸೂಕ್ತವಾದ ವಿದ್ಯುತ್ ಯುಪಿಎಸ್ ಇಲ್ಲದೆ ಇರುವುದು ಹಾಗೂ ಯಾವಾಗ ಕೇಳಿದರು ಯುಪಿಎಸ್ ಕೆಟ್ಟುಹೋಗಿದೆ ಎಂಬ ಉತ್ತರ ಬರುತ್ತಿದ್ದು, ವಿದ್ಯುತ್ ಬರುವವರೆಗೂ ಕಾಯುತ್ತ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರಸಭೆಯು ಶೀಘ್ರದಲ್ಲೆ ಹೊಸ ಕಟ್ಟಡಕ್ಕೆ ಬದಲಾವಣೆಯಾಗುತ್ತದೆ ಅಲ್ಲಿಯವರೆಗೂ ಈ ಪರಿಸ್ಥಿತಿ ತಪ್ಪಿದ್ದಲ್ಲ ಹಾಗೂ ಹೊಸ ಕಟ್ಟಡದಲ್ಲಾದರೂ ಸೂಕ್ತವಾದ ಯುಪಿಎಸ್ ಅಳವಡಿಸಬಹುದೇನೊ ಎಂದು ಕಾದು ನೋಡಬೇಕಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap