ತಿಪಟೂರು :
ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಕುರುಬರಹಳ್ಳಿ-ಸೂಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಾಕು ಪ್ರಾಣಿಗಳನ್ನು ತಿಂದು ಜನತೆಯಲ್ಲಿ ಆತಂಕವನ್ನುಂಟು ಮಾಡಿದ್ದ ಚಿರತೆ ಅರಣ್ಯ ಇಲಾಖೆಯ ಬೋನಿನಲ್ಲಿ ಸರೆಯಾಗಿದೆ.
ಹಲವಾರು ದಿನಗಳಿಂದ ಚಿರತೆಯ ಕಾಟದಿಂದ ಜನರು ಭಯದ ವಾತಾವರಣದಲ್ಲಿದ್ದು ಸ್ವಲ್ಪ ಕತ್ತಲಾದರು ಇಲ್ಲವೇ ಗಿಡಗಳಲ್ಲಿ ಸದ್ದಾದರು ಸಾಕು ಜನರು ಚಿರತೆ ಇರಬಹುದೇನೊ ಎಂಬ ಭಯದಿಂದ ತೋಟ ಮತ್ತು ಜಮೀನುಗಳಿಗೆ ಹೋಗಲು ಹೆದರುತ್ತಿದ್ದರು. ಈ ಬಗ್ಗೆ ಗ್ರಾಮಸ್ಥರು ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ನಿನ್ನೆ ವಲಯ ಅರಣ್ಯಾಧಿಕಾರಿ ಮಾರ್ಗದರ್ಶನದಲ್ಲಿ ಚಿರತೆಯನ್ನು ಸೆರೆಹಿಡಿಯಲು ಕುರುಬರಹಳ್ಳಿಯ ತೋಟದಲ್ಲಿ ಬೋನನ್ನು ಇರಿಸಲಾಗಿತ್ತು. ಮಂಗಳವಾರ ಬೆಳಗಿನ ಜಾವ ಐದು ವರ್ಷ ಪ್ರಾಯದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ ಎಂದು ಉಪ ಅರಣ್ಯಾಧಿಕಾರಿ ಶಿವಕುಮಾರ್ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕರಾದ ಶಿವಪ್ಪ, ಪ್ರದೀಪ್, ಚೌಡಪ್ಪ ಭಾಗವಹಿಸಿದ್ದು, ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಚಿರತೆಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ