ಕೋವಿಡ್ 3ನೇ ಅಲೆ ತಡೆಯಲು ಸನ್ನದ್ದ : ಬಿ.ಸಿ.ನಾಗೇಶ್

 ತಿಪಟೂರು:

      ಪ್ರಪಂಚಕ್ಕೆ ಕೋವಿಡ್-19 ಬಂದಾಗಯಾವುದೇ ಮುನ್ನಚ್ಚರಿಕೆಗಳು ಹಾಗೂ ಔಷಧಿ ಲಭ್ಯವಿರಲಿಲ್ಲ ಇದು ನಮ್ಮದೇಶವು ಸಹ ಹೊರತಾಗಿರಲಿಲ್ಲ ಆದರೆ ಈಗ ಪರಿಸ್ಥಿತಿ ಬದಲಾಗಿದ್ದುಕೋವಿಡ್‍ನ 3ನೇ ಅಲೆಯನ್ನುಎದುರಿಸಲುತಾಲ್ಲೂಕು ಸನ್ನದವಾಗಿದೆಎಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.

      ನಗರದ ಸಾರ್ವಜನಿಕಆಸ್ಪತ್ರೆಯಲ್ಲಿ 500 ಎಲ್.ಪಿ.ಎಂ ಆಮ್ಲಜನಕಘಟಕವನ್ನು ಉದ್ಘಾಟಿಸಿ ಮಾತನಾಡಿದಅವರುಕೋವಿಡ್ ಮೊದಲನೇ ಅಲೆ ಬಂದಾಗ ಸೂಕ್ತವಾಗಿ ಮಾಸ್ಕ್ ಸಿಗಲಿಲ್ಲ, ಪಿ.ಪಿ.ಇ ಕಿಟ್‍ಗಳ ಉತ್ಪಾದನೆಇರಲಿಲ್ಲ, ಆಸ್ಪತ್ರೆಗಳಲ್ಲಿ ಐ.ಸಿ.ಯು ಬೆಡ್‍ಗಳ ಕೊರತೆಯಿತ್ತು.ಆದರೆ ಈಗ ಪರಿಸ್ಥಿತಿ ಬದಲಾಗಿದ್ದುಕೋವಿಡ್ 3ನೇ ಅಲೆ ಬರುವುದಿಲ್ಲ, ಬಂದರೂ ಅದನ್ನು ಸೂಕ್ತವಾಗಿ ನಿಭಾಯಿಸುವ ಕೆಲಸವನ್ನುಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ಸಹಕಾರದಿಂದತಡೆಗಟ್ಟುವ ವಿಶ್ವಾಸವಿದೆಎಂದಅವರುಕೇಂದ್ರದ ಸಹಾಯದಿಂದ ಮೊದಲು 380 ಎಲ್.ಪಿ.ಎಂ ಆಮ್ಲಜನಕಘಟಕ ಮಂಜೂರಾಗಿತ್ತು, ನಾನು ಇದು ಸಾಕಾಗುವುದಿಲ್ಲವೆಂದುಕೇಂದ್ರ ಮಂತ್ರಿಗಳ ಹತ್ತಿರ ಮಾತನಾಡಿ 500 ಎಲ್.ಪಿ.ಎಂ ಮಾಡಿಸಿದೆ. ನಮ್ಮತಾಲ್ಲೂಕಿಗೆಇದು ಸಾಕಾಗುವುದಿಲ್ಲ ಮತ್ತುಆಮ್ಲಜನಕವನ್ನುಇನ್ನು ಹೆಚ್ಚು ಉತ್ಪಾದಿಸುವ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಘಗಳು, ಎನ್.ಜಿ.ಓ.ಗಳ ಸಹಕಾರದಿಂದ 500 ಎಲ್.ಪಿ.ಎಂ ಘಟಕವನ್ನು ನಿರ್ಮಿಸುತ್ತೇವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚಂದ್ರಶೇಖರ್, ತಾಲ್ಲೂಕುವೈದ್ಯಾಧಿಕಾರಿರವಿಕುಮಾರ್, ಡಾ.ಶಿವಕುಮಾರ್, ಡಾ.ರವಿ, ಪೌರಾಯುಕ್ತಉಮಾಕಾಂತ್, ಮಂತಾದವರು ಉಪಸ್ಥಿತರಿದ್ದರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap