ತಿಪಟೂರು :
ಕೊರೊನಾ ಮಹಾಮಾರಿಯು ದಿನನಿತ್ಯ ದುಡಿಯುವ ಜನರಿಗೆ ತೀವ್ರವಾದ ಸಂಕಷ್ಟವನ್ನು ತಂದೊಡ್ಡಿದ್ದು ಅವರ ರಕ್ಷಣೆ ನಮ್ಮ ಹೊಣೆ ಎಂದು ತಿಪಟೂರು ಜೆಎಂಎಫ್‍ಸಿ ಹಿರಿಯ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ನೂರುನ್ನೀಸಾ ತಿಳಿಸಿದರು.
ತಾಲ್ಲೂಕಿನ ಬೆನ್ನಾಯಕನಹಳ್ಳಿಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಕಾರ್ಮಿಕರಿಗೆ ದಿನಸಿಕಿಟ್ ವಿತರಿಸಿ ಮಾತನಾಡಿದ ಅವರು ಕೊರೊನಾ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ರೋಗ ಹರಡುವುದನ್ನು ತಡೆಯಲು ಅಂತರ, ಮಾಸ್ಕ್, ಕೈತೊಳೆಯುವುದರ ಜೊತೆಗೆ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ ಆದ್ದರಿಂದ ಎಲ್ಲರೂ ಕೊರೊನಾ ಎಸ್‍ಓಪಿ ನಿಯಮಗಳನ್ನು ಪಾಲಿಸಿ ಕೊರೊನಾದಿಂದ ದೂರವಿರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಧಿಕ ಸಿವಿಲ್ ನ್ಯಾಯಾದೀಶರಾದ ಚಂದನ್.ಎಸ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ದಯಾನಂದ್, ಕಾರ್ಯದರ್ಶಿ ಬಿ.ಎನ್.ಅಜಯ್, ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ ಮಹದೇವಪ್ಪ, ಪಿಎಸ್‍ಐ ಕೃಷ್ಣಕುಮಾರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
