ಬೇಬಿ ಟ್ಯಾಂಕರ್ ಜಾಲ ಪತ್ತೆ ಹಚ್ಚಿದ ತಿಪಟೂರು ಪೊಲೀಸರು

ತಿಪಟೂರು : 

      ಪೆಟ್ರೋಲ್ ಸರಬರಾಜು ಟ್ಯಾಂಕರ್ ಒಳಗೆ ಬೇಬಿ ಟ್ಯಾಂಕ್ ಅಳವಡಿಸಿ ಬಂಕ್ ಮಾಲೀಕರಿಗೆ ಮೋಸ ಮಾಡುತ್ತಿದ್ದ ಜಾಲವನ್ನು ಡಿವೈಎಸ್ಪಿ ಚಂದನ್‍ಕುಮಾರ್ ನೇತೃತ್ವದಲ್ಲಿ ಪತ್ತೆಹಚ್ಚಿದ್ದು, ಈ ಕಾರ್ಯವನ್ನು ಜಿಲ್ಲಾ ಎಸ್‍ಪಿ ರಾಹುಲ್‍ಕುಮಾರ್ ಶ್ಲಾಘಿಸಿದ್ದಾರೆ.

      ನಗರದ ಉಪಅಧಿಕ್ಷಕರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೇಸಿಗೆ ಕಾಲದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಆವಿಯಾಗುತ್ತವೆ ಎಂಬ ದೃಷ್ಠಿಯಿಂದ ನಿಗದಿಗಿಂತ ಹೆಚ್ಚಿನ ಪ್ರಮಾಣದ ಇಂಧನವನ್ನು ಬಂಕ್ ಮಾಲೀಕರು ತುಂಬಿಸುತ್ತಿದ್ದಾರೆ. ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಟ್ಯಾಂಕರ್ ಮಾಲೀಕರು ಬೇಬಿ ಟ್ಯಾಂಕರ್ ಅಳವಡಿಸಿ, ಬಂಕ್ ಮಾಲೀಕರಿಗೆ ಮೋಸ ಮಾಡುವ ಜಾಲವನ್ನು ತಿಪಟೂರು ಪೊಲೀಸರು ಬೇಧಿಸಿದ್ದಾರೆ.

      ಇದಕ್ಕೆ ಸಂಬಂಧಿಸಿದಂತೆ ಹಾಸನ ಮೂಲದ ಧನಲಕ್ಷ್ಮೀ ಟ್ರಾನ್ಸ್‍ಪೋರ್ಟ್‍ಗೆ ಸೇರಿದ ಕೆಎ41-ಬಿ4325 ನೇ ನಂಬರಿನ ಲಾರಿಯಿಂದ ನಗರದ ಆದಿತ್ಯ ಎಂಟರ್‍ಪ್ರೈಸಸ್ ಪೆಟ್ರೋಲ್ ಬಂಕ್‍ನವರು ತಮ್ಮ ಬಂಕ್‍ಗೆ ತೈಲ ತರಿಸುತ್ತಿದ್ದರು. ಈ ಲಾರಿಯ ಟ್ಯಾಂಕರ್‍ನಲ್ಲಿ ಬಂದ ಡೀಸೆಲ್‍ನ ಪ್ರಮಾಣ ಕಡಿಮೆ ಬಂದಿರುತ್ತದೆ ಎಂದು ಅನುಮಾನ ಬಂದು ಈ ಟ್ಯಾಂಕರ್ ಅನ್ನು ನಿಲ್ಲಿಸಿ ಪರಿಶೀಲನೆ ಮಾಡಿದಾಗ ಟ್ಯಾಂಕರ್‍ನಲ್ಲಿ ಪ್ರತ್ಯೇಕ ಮಿನಿ ಟ್ಯಾಂಕರ್ ಅನ್ನು ನಿರ್ಮಾಣ ಮಾಡಿಕೊಂಡಿರುವ ಬಗ್ಗೆ ಅನುಮಾನಗೊಂಡು ಚಾಲಕನನ್ನು ಈ ಕುರಿತು ವಿಚಾರ ಮಾಡಿದಾಗ ಯಾವುದೇ ಮಾಹಿತಿ ದೊರೆಯದ ಕಾರಣ ಈ ವಿಚಾರವನ್ನು ಡೀಸೆಲ್/ಪೆಟ್ರೋಲ್ ಪೂರೈಕೆ ಮಾಡುವ ಹಾಸನದ ಹೆಚ್‍ಪಿಸಿಎಲ್ ಟರ್ಮಿನಲ್‍ಗೆ ತಿಳಿಸಿದಾಗ ಅವರು ಈ ಟ್ಯಾಂಕರ್‍ನ ಒಳಭಾಗದಲ್ಲಿ ಪ್ರತ್ಯೇಕ ಮಿನಿ ಟ್ಯಾಂಕ್ ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಈ ಲಾರಿಯನ್ನು ಅಳತೆ ಮತ್ತು ಮಾಪನ ಇಲಾಖೆಯ ಸಿಬ್ಬಂದಿ ಪರಿಶೀಲಿಸಲಾಗಿ ಲಾರಿಯಟ್ಯಾಂಕ್‍ನ ಒಳಭಾಗದಲ್ಲಿ ಪ್ರತ್ಯೇಕ ಬೇಬಿ ಟ್ಯಾಂಕ್‍ನ್ನು ವಿನ್ಯಾಸ ಮಾಡಿಕೊಂಡುಒಂದುಟ್ರಪ್‍ಗೆ ಸಾವಿರಾರುರೂ ಮೋಸಮಾಡಿರುವುದುಕಂಡುಬಂದಿದೆ. ಈ ಸಂಬಂಧ ಲಾರಿ ಮಾಲೀಕ ಸುಂದರಮ್ಮ ಹಾಗೂ ಗುತ್ತಿಗೆದಾರ ಭಾಸ್ಕರ್ ತಲೆಮೆರೆಸಿಕೊಂಡಿದ್ದಾರೆ ಇವರಿಗೆ ಸೇರಿದಎಲ್ಲಾಟ್ಯಾಂಕರ್‍ಗಳನ್ನು ಪರಿಶೀಲಿಸಲಾಗುತ್ತಿದೆಎಂದು ತಿಳಿಸಿದರು.

      ತಿಪಟೂರು ನಗರದಲ್ಲಿ ಮಟ್ಕಾ ಮತ್ತುಗಾಂಜಾ ಹಾವಳಿ ಹೆಚ್ಚಿದೆಇದರ ಬಗ್ಗೆ ಪಾವಗಡದಲ್ಲಿಸಂಘಟಿಸಿದ ದಾಳಿಯಂತೆ ಇಲ್ಲಿಯೂ ಸಂಘಟಿಸಲಾಗುವುದೆಂದು ತಿಳಿಸಿದರು ಮತ್ತು ಹೆಚ್ಚುತ್ತಿರುವ ಮೊಬೈಲ್, ಇನ್ನಿತರ ಕಳ್ಳತನಕ್ಕೂ ಇದೇಕಾರಣವಾಗಿದೆಎಂದರು.
ಪತ್ರಿಕಾಗೋಷ್ಟಿಯಲ್ಲಿ ನಗರ ಸಿ.ಪಿ.ಐ ಶ್ರೀಶೈಲಮೂರ್ತಿ, ಚಿಕ್ಕನಾಯಕನಹಳ್ಳಿ ಸಿ.ಪಿ.ಐ ನಿರ್ಮಲ, ಪಿ.ಎಸ್.ಐ ಹರೀಶ್, ಹುಳಿಯಾರು ಪಿ.ಎಸ್.ಐ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap