ಕಾಕತಾಳೀಯ ಎಂಬಂತೆ ಫಲಿಸಿದ ಸಂಕಲ್ಪ : ಬೊಮ್ಮಾಯಿಗೆ ಸಿಎಂ ಯೋಗ

ತಿಪಟೂರು : 

      ತಾಲ್ಲೂಕಿನ ನೊಣವಿನಕೆರೆಯ ಸುಕ್ಷೇತ್ರ ಕಾಡಸಿದ್ದೇಶ್ವರ ಮಠದ ಜಾತ್ರಾ ಸಂದರ್ಭದಲ್ಲಿ ಕಾಡಸಿದ್ದೇಶ್ವರ ಶ್ರೀಗಳು ಬಸವರಾಜ ಬೊಮ್ಮಾಯಿ ಅವರಿಗೆ ನಾಡಿನ ನೇತಾರನಾಗಿ ಜನರ ಸೇವೆಮಾಡು ಎಂದು ಆಶೀರ್ವದಿಸಿದ್ದರು. ಈಗ ಆ ಆಶೀರ್ವಾದ ನಿಜವಾಗಿದ್ದು, ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿರುವುದಕ್ಕೆ ಶ್ರೀಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮಿಜಿ ಹರ್ಷವ್ಯಕ್ತಪಡಿಸಿದ್ದಾರೆ.

      ವೀರಶೈವ ಲಿಂಗಾಯತ ಸಮಾಜದ ಭವಿಷ್ಯದಲ್ಲಿ ಉತ್ತಮವಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಗುರುತಿಸಿರುವುದು ಸಂತೋಷ, ಎರಡು ತಿಂಗಳ ಹಿಂದೆಯೇ ಶ್ರೀ ಮಠಕ್ಕೆ ಬಸವರಾಜ ಬೊಮ್ಮಾಯಿ, ಶ್ರೀ ರಾಮುಲು ಭೇಟಿ ನೀಡಿ, ಶ್ರೀ ಮಠದ ದರ್ಶನ ಮಾಡಿ, ಗುರುಗಳ ಆಶೀರ್ವಾದ ಪಡೆಯುವಾಗ ಗುರುಗಳೇ ನನ್ನ ಬೆಳವಣಿಗೆಗೆ ನಿಮ್ಮ ಆಶೀರ್ವಾದ ಬೇಕು ಎಂದು ಸಂಕಲ್ಪ ಮಾಡಿದ್ದರು. ಶ್ರೀಗಳು ಭವಿಷ್ಯದಲ್ಲಿ ರಾಜ್ಯದ ನೇತಾರನಾಗು, ಉನ್ನತ ಅಧಿಕಾರ, ಆರೋಗ್ಯ, ಭಾಗ್ಯ ದೊರಕಲಿ ಎಂದು ಆಶೀರ್ವಾದ ಮಾಡಿದ್ದರು. ಕಾಕತಾಳಿಯ ಎಂಬಂತೆ ಬೊಮ್ಮಾಯಿ ಅವರು ಈಗ ರಾಜ್ಯದ ಉನ್ನತ ಅಧಿಕಾರ ಪಡೆದಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರ ಕಾಲದಿಂದಲೂ ಕೂಡ ರಾಜಕೀಯ ಅನುಭವ ಮೈಗೂಡಿಸಿಕೊಂಡಿರುವ ಇವರು ಯಡಿಯೂರಪ್ಪನವರ ಬಲಗೈ ಬಂಟನಾಗಿ, ವಿಶ್ವಾಸ ಗಳಿಸಿಕೊಂಡು ಬಂದಿದ್ದರು. ಬುಧವಾರ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡಿರುವ ಬೊಮ್ಮಾಯಿ ಅವರು ಮುಂದಿನ ದಿನಗಳಲ್ಲಿ ರೈತರ, ಬಡವ-ಬಲ್ಲಿದರ ಪ್ರೀತಿ ವಿಶ್ವಾಸಗಳಿಸಿ ದಕ್ಷತೆಯಿಂದ ಅಧಿಕಾರ ಪೂರ್ಣಗೊಳಿಸಲಿ ಎಂದು ಶ್ರೀಗಳು ಆಶಿರ್ವಾದಿಸಿದ್ದಾರೆ.

      ರಾಜಕೀಯ ಬೆಳವಣಿಗೆಯ ವ್ಯವಸ್ಥೆಯ ಅನುಭವದ ಹಾದಿಯಲ್ಲಿ ಜೀವನ ಪರ್ಯಂತ ಸಾಧನೆ ಮಾಡಿರುವ ಯಡಿಯೂರಪ್ಪ ಅವರು ನಾಲ್ಕು ಸಲ ಅಧಿಕಾರ ವಹಿಸಿಕೊಂಡರೂ ಒಂದು ಬಾರಿಯೂ ಪೂರ್ಣಾವಧಿಯಲ್ಲಿ ಇರದಿದ್ದು ದುರದೃಷ್ಟ, ನಾಲ್ಕನೇ ಸಲ ಅಧಿಕಾರವಹಿಸಿಕೊಂಡ ಬಳಿಕ ಸುನಾಮಿ, ಕೋವಿಡ್ ಇದರ ಮಧ್ಯೆ 75 ರ ವಯಸ್ಸಿನಲ್ಲೂ 25 ರ ಹುಡುಗನಂತೆ ಕೆಲಸ ಮಾಡಿದ್ದಾರೆ. ರಾಜ್ಯದ ರೈತ ಭಾಂದವರ ಬಡವ, ಬಲ್ಲಿದರ ಎಲ್ಲಾ ಮತದಾರರಲ್ಲಿ ಪ್ರೀತಿ-ವಿಶ್ವಾಸಗಳಿಸಿ, ಆರೋಗ್ಯ ಗಮನಿಸಿಕೊಂಡು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶ್ರೀಗಳು ಅಭಿಪ್ರಾಯ ಪಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link