ಸಚಿವರಾಗಿ ಆಗಮಿಸಿದ ಬಿ.ಸಿ.ನಾಗೇಶ್ ಗೆ ತಿಪಟೂರಲ್ಲಿ ಅದ್ದೂರಿ ಸ್ವಾಗತ!!

 ತಿಪಟೂರು :

     ನನ್ನ ಮೇಲೆ ವಿಶ್ವಾಸವಿಟ್ಟು 2 ಬಾರಿ ಶಾಸಕನ್ನಾಗಿ ಮಾಡಿದಿರಿ, ಇದನ್ನು ಗಮನಿಸಿ ಮಾಜಿ, ಹಾಲಿ ಮುಖ್ಯಮಂತ್ರಿಗಳು, ಪಕ್ಷದ ವರಿಷ್ಠರು ನನ್ನನ್ನು ಸಚಿವನನ್ನಾಗಿ ಮಾಡಿದ್ದಾರೆ. ಅವರ ಅಪೇಕ್ಷೆಗೆ ತಕ್ಕಂತೆ ತಾಲ್ಲೂಕು ಹಾಗೂ ರಾಜ್ಯದ ಅಭಿವೃದ್ಧಿಗಾಗಿ ದುಡಿಯುವೆ ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

      ಸಚಿವರಾಗಿ ಅಧಿಕಾರ ಸ್ವೀಕರಿಸಿ ಕಲ್ಪತರು ನಾಡಿಗೆ ಹಿಂದಿರುಗುವ ಸಂದರ್ಭದಲ್ಲಿ ಕರಡಿ ಗ್ರಾಮ ಪಂಚಾಯಿತಿ ಮೊದಲನೇ ಸುತ್ತಿನಅಟಲ್ ಭೂಜಲ ಯೋಜನೆಯ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದಅವರುನೀರಾವರಿ ಇಲಾಖೆಗೆ ಸಂಬಂದಿಸಿದಂತೆ ಹಲವು ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು.

      ತುಮಕೂರಿನಿಂದ ಪ್ರಾರಂಭವಾದ ಸಚಿವರ ಸ್ವಾಗತ ಕಾರ್ಯಕ್ರಮದ ರಸ್ತೆಯುದ್ದಕ್ಕೂ ಸಾಗಿ ತಾಲ್ಲೂಕಿನ ಪೂರ್ವ ಭಾಗದ ಮೊದಲ ಯಾತ್ರಾಸ್ಥಳ ಹತ್ಯಾಳು ನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿನೀಡಿ ಪೂಜೆಸಲ್ಲಿಸಿದರು., ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ಕೆ, ತಹಸೀಲ್ದಾರ್, ತಾ.ಪಂ ಇ.ಓ ಮತ್ತಿತರರು ಉಪಸ್ಥಿತರಿದ್ದರು.

      ಸಾವಿರಾರು ಅಭಿಮಾನಿಗಳು ನಗರದಲ್ಲಿರುವ ಕೌಸ್ತುಬ ಹೋಟೆಲ್ ಹತ್ತಿರ ಸಚಿವರ ಸ್ವಾಗತಕ್ಕಾಗಿ ಕಾದಿದ್ದರು. ಡಾ.ಕುಮಾರ್, ನಿಖಿಲ್‍ರಾಜಣ್ಣ, ತರಕಾರಿಗಂಗಾಧರ್ ಸೇರಿ ಬಿ.ಜೆ.ಪಿ ಪಕ್ಷದ ಮುಖಂಡರುಗಳು ಹಾಗೂಕಾರ್ಯಕರ್ತರು ಸಾಲುಗಟ್ಟಿನಿಂತಿದ್ದರು. ಸಚಿವರುಆಗಮಿಸುತ್ತಿದ್ದಂತೆಯೇ ಜೆ.ಸಿ.ಬಿ ಮೇಲೆನಿಂತು ಪುಷ್ಪವೃಷ್ಠಿ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ಗ್ರಾಮ ದೇವತೆಕೆಂಪಮ್ಮದೇವಿಯದೇವಾಲಯದ ಹತ್ತಿರ ಪೂರ್ಣಕುಂಬದೊಂದಿಗೆ, ತೆಂಗಿನಕಾಯಿಗಳನ್ನು ಹೊಡೆದು ಸ್ವಾಗತಿಸಲಾಯಿತು.. ದೇವಾಲಯದಲ್ಲಿ ವಿಶೇಷ ಪೂಜೆಏರ್ಪಡಿಸಲಾಗಿತ್ತು. ನಂತರಸುಕ್ಷೇತ್ರ ಕೆರೆಗೋಡಿ-ರಂಗಾಪುರ ಹಾಗೂ ಶ್ರೀ ಗುರುಕುಲಾನಂದಾಶ್ರಮಕ್ಕೆ ಭೇಟಿನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಸಾಮಾಜಿಕಅಂತರ ಮರೆತ ಅಭಿಮಾನಿಗಳು :

     ಸಚಿವ ಬಿ.ಸಿ.ನಾಗೇಶ್‍ರನ್ನು ಸಾಗ್ವತಿಸುವ ಭರದಲ್ಲಿ, ಶುಭಾಶಯವನ್ನುಕೋರುವ ನಿಟ್ಟಿನಲ್ಲಿ ಸಾವಿರಾರುಜನರು ಜಮಾಯಿಸಿದ್ದು ಸಾಮಾಜಿಕ ಅಂತರ ಮರೆಯಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap