ತಿಪಟೂರು :

ಕಾಗೆ ಹಾರುವುದಕ್ಕೂ ಕಾಯಿ ಬೀಳುವುದಕ್ಕೂ ಸರಿಯಾಯಿತು ಎನ್ನುವಂತೆ ನಗರಸಭೆ ಪೌರಾಯುಕ್ತಉಮಾಕಾಂತ್ ಉರುಳುಸೇವೆ ಮಾಡುವುದಕ್ಕೂ, ಶಾಸಕ ಬಿ.ಸಿನಾಗೇಶ್ ಸಚಿವ ಸ್ಥಾನ ಸ್ವೀಕರಿಸುವುದಕ್ಕೂ ಸಂಬಂದ ವಿದೇಯೇ ಇಲ್ಲ ಇದು ಕಾಕತಾಳಿಯವೋ ಎಂಬುದು ತಾಲೂಕಲ್ಲಿ ಚರ್ಚೆಯಾಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಲ್ಪತರು ನಾಡುತಿಪಟೂರಿನ ಶಾಸಕ ಬಿ.ಸಿ.ನಾಗೇಶ್ಗೆ ಬುಧವಾರ ಸಚಿವ ಸ್ಥಾನ ಘೋಷಣೆಯಾಗುತ್ತಿದಂತೆ ಇತ್ತ ತಿಪಟೂರು ಪೌರಾಯುಕ್ತರುಗ್ರಾಮದೇವತೆ ಸನ್ನಿಧಿಯಲ್ಲಿ ಉರುಳು ಸೇವೆ ಮಾಡಿರುವುದು ಒಂದೇ ಸಮಯದಲ್ಲಿ ನಡೆದಿದ್ದು ಪೌರಾಯುಕ್ತರುಏತಕ್ಕಾಗಿ ಉರುಳು ಸೇವೆ ಮಾಡಿದರ. ಇಲ್ಲಿ ಸ್ವಾಮಿಕಾರ್ಯ ಮಾಡಿದರೋ, ಇಲ್ಲ ಸ್ವಕಾರ್ಯಕ್ಕಾಗಿ ಮಾಡಿದರೋ ಎಂದುಜನರುಚರ್ಚಿಸುತ್ತಿದ್ದಾರೆ.
ತಿಪಟೂರು ನಗರದ ಪೌರಾಯುಕ್ತಉಮಾಕಾಂತ್ ನಗರದಗ್ರಾಮದೇವತೆ ಸನ್ನಿಧಾನದಲ್ಲಿ ಉರುಳುಸೇವೆ ಮಾಡಿರುವ ವಿಡಿಯೋವನ್ನು ಹಾಗೂ ನಮ್ಮಮ್ಮ ನಂಬಿದ ಮಕ್ಕಳನ್ನು ಎಂದುಕೈಬಿಡುವುದಿಲ್ಲ ಎಂದುಅವರೇ ಹೇಳಿದ್ದನ್ನು ಸಾಮಾಜಿಕಜಾಲತಾಣದಲ್ಲಿಹಾಕಿಕೊಂಡಿದ್ದರು. ಪೂಜೆ ಮುಗಿಸಿದ ನಂತರ ಪ್ರಸಾದ ಹಾಗೂ ಬಾಳೆಹಣ್ಣನ್ನು ಅವರೇ ವಿತರಿಸಿದ್ದಾರೆಂದು ಮಾತನಾಡಿಕೊಳ್ಳುತ್ತಿದ್ದು ನಾಗೇಶ್ಗೆ ಸಚಿವ ಸ್ಥಾನ ಸಿಕ್ಕಿದ್ದಕ್ಕಾಗಿಯೋ ಇಲ್ಲ ಪೌರಾಯುಕ್ತರು ಬೇರೆಯಾವುದಾದರು ಹರಕೆಯನ್ನುಇದೇ ಸಂದರ್ಭದಲ್ಲಿ ತೀರಿಸಿದರೋ ಎಂದುತಿಳಿದಿಲ್ಲ.
ಸಚಿವರಆಪ್ತಕಾರ್ಯದರ್ಶಿಯಾಲು ಪೂಜೆ ಸಲ್ಲಿಸಿದರೆ : ಪೌರಾಯುಕ್ತಉಮಾಕಾಂತ್ತಿಪಟೂರು ನಗರಸಭೆಯ ಪೌರಾಯುಕ್ತ್ರಾಗುವುದಕ್ಕೆ ಮೊದಲು ಹಲವಾರುಜನ ಸಚಿವರಿಗೆಆಪ್ತ ಕಾರ್ಯದರ್ಶಿಯಾಗಿ ಕೆಲಸಮಾಡಿರುವ ನೈಪುಣ್ಯತೆಯನ್ನು ಪಡೆದುಕೊಂಡಿದ್ದಾರೆ. ಈಗ ಬಿ.ಸಿ.ನಾಗೇಶ್ ಸಚಿವರಾದರೆ ಅವರಿಗೆ ನಾನು ಆಪ್ತ ಕಾರ್ಯದರ್ಶಿಯಾಗಲಿ ಎಂದು ಪೂಜೆ ಸಲ್ಲಿದ್ದಾರೆಂದು ಸಹ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ನಾನು ದೈವಭಕ್ತನಾಗಿದ್ದು, ಧಾರ್ಮಿಕಆಚರಣೆಅದರ ಭಾಗವಾಗಿದೆ. ಬುಧವಾರ ಏಕಾದಶಿ ಇದ್ದ ಪ್ರಯುಕ್ತ ನಾನು ಉರುಳುಸೇವೆಯನ್ನು ಮಾಡಿದ್ದೇನೆ, ನಾನು ಕರ್ತವ್ಯಕ್ಕೆಯಾವುದೇ ಸ್ಥಳಕ್ಕೆ ಹೋದರು ಅಲ್ಲಿನ ಗ್ರಾಮದೇವತೆಗೆ ಪೂಜೆ ಸಲ್ಲಿಸಿಯೇ ನನ್ನಕಾರ್ಯವನ್ನು ಮಾಡುತ್ತೇನೆ. ಮತ್ತು ವರ್ಗಾವಣೆಯಾದರೂ ಸಹ ನಾನು ಗ್ರಾಮದೇವತೆಗೆ ಪೂಜೆ ಸಲ್ಲಿಸಿಯೇ ಹೋಗುತ್ತೇನೆ.
-ಉಮಾಕಾಂತ್, ನಗರಸಭೆ ಪೌರಾಯುಕ್ತ, ತಿಪಟೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








