ಪಠ್ಯ ಪುಸ್ತಕಗಳನ್ನು ಸುಸ್ಥಿಯಲ್ಲಿ ಮರಳಿಸಿ, ಪರಿಸರ ಉಳಿವಿಗೆ ಸಕರಿಸಿ

ತಿಪಟೂರು :

     ಶಿಕ್ಷಣವೆಂದರೆ ಏಕ ಮುಖ ಸಂವಹನವಲ್ಲ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನೇರವಾದ ಸಂವಹನದಿಂದ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

      ನಗರದ ಬಾಲಕರ ಪ.ಪೂ ಕಾಲೇಜಿನಲ್ಲಿ ಪಠ್ಯಪುಸ್ತಕ ವಿತರಿಸಿ ಮಾತನಾಡಿದ ಅವರು, ತಜ್ಞರು ಶಾಲೆ ತೆರೆಯಿರಿ ಎಂದು ಅಭಿಪ್ರಾಯಪಟ್ಟರೂ ಸಹ ನಮ್ಮನ್ನು ಹಲವಾರು ಸಮಸ್ಯೆಗಳು ಕಾಡಿದವು, ಅವನ್ನೆಲ್ಲ ಮೆಟ್ಟಿ ಶಾಲೆಯನ್ನು ಆರಂಭಿಸಿದ್ದೇವೆ. ಆನ್‍ಲೈನ್ ಶಿಕ್ಷಣ ಎಲ್ಲರನ್ನು ತಲುಪಲುತ್ತಿರಲಿಲ್ಲ ಜೊತೆಗೆ ಶಿಕ್ಷಕರೊಂದಿಗೆ ದ್ವಿಮುಖ ಸಂವನ ನಡೆಯದೇ ಎಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾದರೂ ಕಲಿಕೆಯು ಕಡಿಮೆಯಾಗುತ್ತಿತ್ತು. ಆದರೆ ಆಫ್‍ಲೈನ್ ಶಿಕ್ಷಣದಲ್ಲಿ ಶಿಕ್ಷಕರ ಜೊತೆ ನೇರ ಸಂವಾದದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು. ತರಗತಿಗೆ ಬರಬೇಕೆಂದು ಕಡ್ಡಾಯವಿಲ್ಲ ಆದರೂ ನಿಮ್ಮ ಸ್ನೇಹಿತರನ್ನು ಶಾಲೆಗೆ ಬರುವಂತೆ ತಿಳಿಸಿ, ನೀವೆಲ್ಲರೂ ಮಾಸ್ಕ್ ಧರಿಸಿ ಕಡ್ಡಾಯವಾಗಿ ಅಂತರ ಕಾಪಾಡಿಕೊಂಡು ಯಾವುದೇ ಭಯವಿಲ್ಲದೇ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

     ಶಾಲೆಯ ಆರಂಭಕ್ಕೆ ಮೊದಲೇ ಪುಸ್ತಕ ಕೊಡಬೇಕಾಗಿತ್ತು ಆದರೆ ಕೋವಿಡ್‍ನಿಂದ ಎಲ್ಲಾ ಮುದ್ರಣಾಲಯಗಳು ಮುಚ್ಚಿದ್ದರಿಂದ ಪುಸ್ತಕ ಹಂಚುವುದು ತಡವಾಗಿದೆ. ಶೀಘ್ರ ಪುಸ್ತಕ ಹಂಚಲೇಬೇಕೆಂದು ಹಗಲು ರಾತ್ರಿ ಕೆಲಸಮಾಡುತ್ತಿದ್ದು, ಈ ತಿಂಗಳಲ್ಲಿ ಶೇ.80 ಹಾಗೂ ಸೆ.15ರೊಳಗೆ ಶೇ.100ರಷ್ಟು ಪುಸ್ತಕ ವಿತರಿಸಲಾಗುವುದು. ಈಗಾಗಲೇ ಹಲವಾರು ಶಾಲೆಗಳಲ್ಲಿ ಹಿಂದಿನ ವರ್ಷದ ಮಕ್ಕಳ ಪುಸ್ತಕಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿದೆ ಎಂದರು.

ರಾಜ್ಯ ಸರ್ಕಾರ ಉಚಿತವಾಗಿ ಪುಸ್ತಕಗಳನ್ನು ಕೊಡುತ್ತಿದ್ದು, ಶೈಕ್ಷಣಿಕ ವರ್ಷದ ನಂತರ ಪುಸ್ತಕಗಳು ಗುಜರಿ ಅಂಗಡಿಯನ್ನು ಸೇರುತ್ತಿವೆ. ಪ್ರತಿವರ್ಷ ಪುಸ್ತಕಗಳನ್ನು ತಯಾರು ಮಾಡಲು ಸಾಕಷ್ಟು ಪರಿಸರ ಹಾಳಾಗುತ್ತದೆ, ಆದ್ದರಿಂದ ವಿದ್ಯಾರ್ಥಿಗಳು ಪುಸ್ತಕಗಳನ್ನು ಸ್ವಚ್ಚವಾಗಿ ಇಟ್ಟುಕೊಂಡು ವರ್ಷದ ಕೊನೆಯಲ್ಲಿ ಶಾಲೆಗಳಿಗೆ ಹಿಂತಿರುಗಿಸಿದರೆ ಪರಿಸರವು ಉಳಿಯುತ್ತದೆ ಜೊತೆಗೆ ಸರ್ಕಾರಕ್ಕೂ ಹೊರೆ ಕಡಿಮೆಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link