ತಿಪಟೂರು :
ತೆಂಗಿನಕಾಯಿ ಎಂದರೆ ತಟ್ಟನೆ ನೆನಪಾಗುವುದೇ ತಿಪಟೂರು. ತಾಲ್ಲೂಕು ವಿಶ್ವಮಟ್ಟದಲ್ಲಿ ಕೊಬ್ಬರಿ ಮಾರುಕಟ್ಟೆಗೆ ಹೆಸರಾಗಿದೆ. ವಿಪರ್ಯಾಸವೆಂದರೆ ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯ ಮುಂಭಾಗದ ರಸ್ತೆಯು ಹಾಳಾಗಿದ್ದು, ಯಮಪುರಿಗೆ ರಹದಾರಿಯಾಗಿದ್ದು ಸ್ವಲ್ಪ ಹೆಚ್ಚು ಕಡಿಮೆಯಾದರೂ ದೇವರೇ ಗತಿ ಎನ್ನುವಂತಾಗಿದೆ.
ತಿಪಟೂರಿನ ಕೊಬ್ಬರಿ ಮಾರುಕಟ್ಟೆಗೆ ದಿನಿನತ್ಯ ಹೊರ ರಾಜ್ಯಗಳಿಂದ ಹಾಗೂ ಸುತ್ತಮುತ್ತಲ ತಾಲ್ಲೂಕುಗಳಿಂದ ಸಹಸ್ರಾರು ವಾಹನಗಳು ಬರುತ್ತಲೇ ಇರುತ್ತವೆ. ಈ ರಸ್ತೆಯು ತುರುವೇಕೆರೆ, ಚನ್ನರಾಯಪಟ್ಟಣಕ್ಕೆ ಹೋಗುವ ಮುಖ್ಯ ರಸ್ತೆಯೂ ಆಗಿದ್ದು, ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ ಎಂದು ಗೊರಗೊಂಡನಹಳ್ಳಿಯಿಂದ-ಸರ್ವೋದಯ ಶಾಲೆಯವರಗೆ ರಸ್ತೆಯನ್ನು ವಿಸ್ತರಿಸಲಾಗಿದೆ. ರಸ್ತೆಯನ್ನು ವಿಸ್ತರಿಸುವ ಸಂದರ್ಭದಲ್ಲೂ ಸೂಕ್ತವಾಗಿ ಕಾಮಗಾರಿ ಮಾಡದ ಕಾರಣ ಇಂದು ರಸ್ತೆಯ ಒಂದು ಭಾಗ ಸಂಪೂರ್ಣವಾಗಿ ಕುಸಿದು ದಿನನಿತ್ಯ ಅಪಘಾತಗಳು ಸಂಭವಿಸುತ್ತಲೇ ಇವೆ. ಈ ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಮದ್ಯೆ ಬರುವ ಸೇತುವೆಯನ್ನು ಸಹ ವಿಸ್ತರಿಸಿಲ್ಲ. ಈ ವಿಶಾಲವಾದ ರಸ್ತೆಯಲ್ಲಿ ಸಂಚರಿಸುವಾಗ ಸವಾರರಿಗೆ ದುತ್ತನೆ ಎದುರಾಗುವ ಕಿರಿದಾದ ಸೇತುವೆಗೆ ಯಾವುದೇ ತಡೆಗೋಡೆ ಇಲ್ಲದೇ ರಸ್ತೆಗೆ ಸಮಾನಾಂತರವಾಗಿದ್ದು, ಪ್ರಾಣಾಪಾಯವಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸೇತುವೆಗೆ ತಕ್ಷಣ ತಡೆಗೋಡೆ ಇಲ್ಲವೇ ಸೂಚನಾ ಫಲಕವನ್ನು ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
