ತಿಪಟೂರು :

ಕೋವಿಡ್‍ನಿಂದ ಸಂಕಷ್ಟಕ್ಕಿಡಾಗಿದ್ದ ಅಸಂಘಟಿತ ಬಡಕಾರ್ಮಿಕರಿಗೆ ವಿತರಣೆಯಾಗಬೇಕಾದ ಪಡಿತರ ಕಿಟ್‍ಗಳು ಇನ್ನೂ ಮಿನಿ ವಿಧಾನಸೌದಲ್ಲೇ ದಾಸ್ತಾನಿದ್ದು ಹುಳು ಹಿಡಿಯುತ್ತಿವೆ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಾಂತ್‍ಕುಮಾರ್ ಆರೋಪಿಸಿದರು.
ನಗರದ ಕಾರ್ಮಿಕ ನಿರೀಕ್ಷಕರ ಕಛೇರಿ ಮುಂದೆ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಕಾರ್ಮಿಕರಿಗೆ ಹಂಚಬೇಕಾದ ಆಹಾರ ಕಿಟ್‍ಗಳನ್ನು ಸಮರ್ಪಕವಾಗಿ ಹಂಚದೇ ತಮಗೆ ಬೇಕಾದವರಿಗೆ, ರಾಜಕೀಯ ದಲ್ಲಾಳಿಗಳು ಹೇಳುವವವರಿಗೆ ಮಾತ್ರ ವಿತರಣೆ ಮಾಡಿ ನಿಜವಾದ ಕಾರ್ಮಿಕರಿಗೆ ಅನ್ಯಾಯವೆಸಗಲಾಗಿದೆ. ತಾಲ್ಲೂಕಿನಲ್ಲಿ ಸುಮಾರು 5 ಸಾವಿರ ಆಹಾರಕಿಟ್ ಕೊಡುವ ಸಂದರ್ಭದಲ್ಲಿ ತಮಗೆ ಬೇಕಾದವರಿಗೆ ಕೊಟ್ಟು ತಾರತಯ್ಯ ಎಸಗಿದ್ದಾರೆ. ಇನ್ನೂ 1800 ಆಹಾರದ ಕಿಟ್‍ಗಳನ್ನು ವಿತರಿಸದೇ ಮಿನಿ ವಿಧಾನಸೌಧದ ಮೂಲೆಯಲ್ಲಿ ಹಾಕಿ ಹುಳು ಹಿಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸದಾ ಬಾಗಿಲು ಮುಚ್ಚಿರುವ ಕಛೇರಿ :
ತಾಲ್ಲೂಕಿನಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಆದರೇ ಕಾರ್ಮಿಕರ ಕಛೇರಿಯಲ್ಲಿ ಕುಳಿತುಕೊಳ್ಳಲು 2 ಕುರ್ಚಿ ಇಲ್ಲ ಎಂದರೆ ನಮ್ಮ ಕಾರ್ಮಿಕ ಇಲಾಖೆ ಹೇಗೆ ಕೆಲಸ ಮಾಡುತ್ತಿದೆ ಎಂಬುದು ತಿಳಿಯುತ್ತದೆ. ಕಾರ್ಮಿಕರು ತಮ್ಮ ಸೌಲಭ್ಯಕ್ಕಾಗಿ ಕಾರ್ಡ್ ಮಾಡಿಸಿಕೊಳ್ಳುವುದೇ ಸಾಹಸವಾಗಿದ್ದು ಇನ್ನು ಲೇಬರ್‍ಇನ್ಸ್‍ಪೆಕ್ಟರ್‍ಗೆ 2 ತಾಲ್ಲೂಕಿನ ಜವಾಬ್ದಾರಿ ಇದ್ದು ಯಾವಾಗಲೂ ಕಛೇರಿಯನ್ನು ಮುಚ್ಚಿಯೇ ಇರುತ್ತಾರೆ. ಜಿಲ್ಲಾ ಕೇಂದ್ರವಾಗುವ ಹೊಸ್ತಿಲಲ್ಲಿ ನಿಂತಿರುವ ತಾಲ್ಲೂಕಿನಲ್ಲಿ ಕಾರ್ಮಿಕ ಇಲಾಖೆಯ ಕಛೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸುದರ್ಶನ್, ಯೋಗೀಶ್, ಮಂಜಣ್ಣ, ಗಂಗಾಧರ್, ಮೋಹನ್ ಬಾಬು ಮತ್ತಿತರರು ಹಾಜರಿದ್ದರು.
ಕಾರ್ಮಿಕರ ಆಹಾರಕಿಟ್ ವಿತರಣೆ ನನಗೆ ಸಂಬಂಧಿಸಿಲ್ಲ, ಕಿಟ್ ವಿತರಿಸುವುದಕ್ಕೆ ಶಾಸಕರೆ ಜವಬ್ದಾರಿಯಾಗಿದ್ದಾರೆ ಅವರನ್ನೆ ಕೇಳಿ.
-ಜಯಪ್ರಕಾಶ್, ಲೇಬರ್ ಇನ್ಸ್‍ಪೆಕ್ಟರ್
ದಲ್ಲಾಳಿಗಳ ಅರ್ಜಿಗೆ ಅನುಮೋದನೆ :
ಬಿದರೆಗುಡಿ ಸಿಎಸ್‍ಸಿ ಸೆಂಟರ್‍ನ ರಮೇಶ್ ಮಾತನಾಡಿ ನಾವು ಕಾರ್ಮಿಕರ ಕಾರ್ಡ್‍ಗೆ ಅರ್ಜಿಗಳನ್ನು ಹಾಕಿದರೂ ಸಹ ಅವುಗಳು ಅನುಮೋದನೆ ಆಗುತ್ತಿರಲಿಲ್ಲ. ಅದೇ ದಲ್ಲಾಳಿಗಳು ಅರ್ಜಿಯನ್ನು ಕೊಟ್ಟರೆ ತಕ್ಷಣವೇ ಅರ್ಜಿ ಅನುಮೋದನೆಯಾಗಿ ಕಾರ್ಡ್ ಬರುತ್ತಿತ್ತು. ಹಿಂದಿನ ಲೇಬರ್‍ಇನ್ಸ್‍ಪೆಕ್ಟರ್ ಹಣವನ್ನು ಪಡೆದು ತಮಗೆ ಬೇಕಾದವರಿಗೆ ಕಾರ್ಡ್‍ಗಳನ್ನು ಮಾಡಿಕೊಟ್ಟಿದ್ದಾರೆ. ಈಗ ಇರುವ ಲೇಬ ಪೆಕ್ಟರ್ ಹೇಗೆ ಮಾಡುತ್ತಿದ್ದಾರೋ ತಿಳಿದಿಲ್ಲವೆಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








