ತಿಪಟೂರು : ಮುಚ್ಚಿಹೋಗಿದ್ದ ಬಾವಿ ಸ್ವಚ್ಚಗೊಳಿಸಿದ ನಗರಸಭೆ

 ತಿಪಟೂರು : 

      ನಗರದ ಕಾರೋನೇಷನ್ ರಸ್ತೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಆಸ್ತಿಯೊಂದನ್ನು ನಗರಸಭೆ ಅಧಿಕಾರಿಗಳು ಹಾಗು ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕ್ಷಿಪ್ರಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡರು.

      ಇಲ್ಲಿನ ಸಾರ್ವಜನಿಕ ಬಾವಿಯನ್ನು ತ್ಯಾಜ್ಯಗಳನ್ನು ಹಾಕಿ ಮುಚ್ಚಲಾಗಿತ್ತು. ಶನಿವಾರ ದೀಢೀರ್ ಕಾರ್ಯಚರಣೆ ನಡೆಸಿ ಬಾವಿಯಲ್ಲಿ ತುಂಬಾಲಾಗಿದ್ದ ತ್ಯಾಜ್ಯವನ್ನು ಹೊರತೆಗೆದು ಪುನರುತ್ತಾನಗೊಳಿಸಲಾಗಿದೆ.

      ನಗರದ ವಿವಿಧ ಸ್ಥಳಗಳಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಲ್ಯಾಣಿ, ಬಾವಿಗಳಿದ್ದು, ಅವುಗಳನ್ನು ಸ್ವಚ್ಛಗೊಳಿಸಿ ಸಂರಕ್ಷಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿದೆ. ಇದರಿಂದಾಗಿ ತಿಪಟೂರಿನ ಪೂರ್ವದ ಅನೇಕ ಕುರುಹುಗಳು ಉಳಿಯುವ ಜತೆಗೆ ಪುರಾತನ ನೆನಪುಗಳನ್ನು ಉಳಿಸಲು ಬಹುದಾಗಿದೆ.

      ನಗರದಲ್ಲಿ ಇಂತಹ ಹಲವಾರು ಪ್ರಾಚೀನ ಕುರುಗಳಿವೆ ಅವುಗಳನ್ನು ಹೆಕ್ಕಿತೆಗೆಯಬಹುದು ಮತ್ತು ಇದರಿಂದ ನಮ್ಮ ನಗರದ ಇತಿಹಾಸದ ಜೊತೆಗೆ ಹಲವಾರು ಮಾಹಿತಿಗಳು ದೊರೆಯುತ್ತವೆ, ಸಾರ್ವಜನಿಕರಿಗೆ ಗೊತ್ತಿರುವ, ಮುಚ್ಚಿಹೋಗಿರುವ ಕಲ್ಯಾಣಿಗಳು, ಬಾವಿಗಳು ಇದ್ದರೆ ತಿಳಿಸಿ ಎಂದು ನಗರಸಭೆ ಅಧ್ಯಕ್ಷ ಪಿ.ಜೆ. ರಾಮಮೋಹನ್ ತಿಳಿಸಿದ್ದಾರೆ.

      ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸುತ್ತಿದ್ದಂತೆ ತಿಪಟೂರಿನ ಗುರುತಾಗಿದ್ದ ಬಿ.ಹೆಚ್.ರಸ್ತೆಯ ಚಿಕ್ಕಮಗಳೂರು ಕಾಫಿ ಡಿಪೋ ಪಕ್ಕದಲ್ಲಿದ್ದ ಕಲ್ಲುಬಾವಿ (ಕಲ್‍ಬಾವಿ)ಯ ಬಗ್ಗೆ ಹಲವಾರು ಪ್ರತಿಕ್ರಿಯಿಸಿದ್ದಾರೆ.

      ಇದೇರೀತಿ ಆಯುಕ್ತರು ಮತ್ತು ನೂತನವಾಗಿ ನಗರಸಭೆಯ ಅಧ್ಯಕ್ಷರಾಗಿರುವ ರಾಮ್‍ಮೋಹನ್, ಉಪಾಧ್ಯಕ್ಷ ಸೊಪ್ಪು ಗಣೇಶ್‍ರವರ ಸದಸ್ಯರ ತಂಡ ನಗರದಲ್ಲಿ ಒತ್ತುವರಿಯಾಗಿರುವ ಜಾಗಗಳು, ಅತಿಕ್ರಮಿಸಿರುವ ಕಟ್ಟಡಗಳು, ರಾಜಾಕಾಲುವೆಗಳನ್ನು ತೆರವುಗೊಳಿಸಿ ಜನರಿಗೆ ಅನುಕೂಲಮಾಡಿಕೊಡುತ್ತಾರೋ ಕಾಯ್ದು ನೋಡಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link