ಮಳೆಗೆ ಕುಸಿದ ಮನೆ : ಲಕ್ಷಾಂತರ ರೂ ನಷ್ಟ!!

ತಿಪಟೂರು :

      ತಾಲೂಕಿನ ಸಾರ್ಥವಳ್ಳಿ ಗ್ರಾಮದ ಪುಟ್ಟಸ್ವಾಮಿ ಲಿಂಗರಾಜಶಾಸ್ತ್ರಿ ಅವರ ವಾಸದ ಮನೆಗೆ ಹೊಂದಿಕೊಂಡ ಮನೆಯು ಗುರುವಾರ ರಾತ್ರಿ ಸುರಿದ ಮಳೆಗೆ 2 ಮನೆಗಳ ಗೋಡೆ ಹಾಗೂ ಚಾವಣಿ ಕುಸಿದಿದ್ದು, ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ಪುಟ್ಟಸ್ವಾಮಿ ತಿಳಿಸಿದರು.

      ಗೋಡೆ ಬಿದ್ದ ಪರಿಣಾಮ ಪುಟ್ಟಸ್ವಾಮಿ ಅವರಿಗೆ ಸೇರಿದ ಹಸು-ಕರುಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಸ್ವಲ್ಪದರಲ್ಲೆ ಪ್ರ್ರಾಣಾಪಯದಿಂದ ಪಾರಾಗಿವೆ. ಮನೆಲ್ಲಿ ತುಂಬಿದ್ದ ಕೊಬ್ಬರಿ, ದಿನಸಿ ಸೇರಿದಂತೆ ದಿನನಿತ್ಯ ಬಳಸುವ ವಸ್ತುಗಳು ಮಣ್ಣುಪಾಲಾಗಿವೆ.

     ಸುದ್ದಿ ತಿಳಿದ ತಕ್ಷಣ ಗ್ರಾಪಂ ಮಾಜಿ ಅಧ್ಯಕ್ಷೆ ಮಮತ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟವರ ಗಮನಕ್ಕೆ ಈ ವಿಚಾರವನ್ನು ತಂದರು. ಆಗ ಸಾರ್ಥವಳ್ಳಿ ವೃತ್ತದ ಕಂದಾಯ ಆಧಿಕಾರಿ ಜಯಲಕ್ಷ್ಮೀ ಹಾಗೂ ಗ್ರಾಮ ಸಹಾಯಕ ಕಾಂತರಾಜು ಸ್ಥಳಕ್ಕೆ ಆಗಮಿಸಿ ಹಾನಿಗೊಳಗಾದ ಮನೆಯಯನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link