ಯಶಸ್ವಿಯಾಗದ ಸಂಧಾನ : ಪದವೀದರರು, ದಂಪತಿಗಳು ಚುನಾವಣೆಗೆ ಸ್ಫರ್ಧೆ

ತಿಪಟೂರು :

      ದಿನೇದಿನೇ ಗ್ರಾಮಪಂಚಾಯಿತಿ ಚುನಾವಣೆಗೆ ರಂಗೇರುತ್ತಿದ್ದು ಹೊನ್ನವಳ್ಳಿ ಗ್ರಾಮಪಂಚಾಯಿತಿಯಲ್ಲಿ ಮಾತ್ರ ಇದುವರೆಗೂ ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ. ಅಲ್ಲದೇ ತಾಲ್ಲೂಕಿನಲ್ಲಿ 26 ಗ್ರಾಮ ಪಂಚಾಯತಿಗಳಿಂದ ಒಟ್ಟು 167 ಕ್ಷೇತ್ರಗಳಿದ್ದು 449 ಸ್ಥಾನಗಳಿವೆ ಇವುಗಳಲ್ಲಿ ಈಗಾಗಲೇ 859 ನಾಮಪತ್ರಗಳು ಸಲ್ಲಿಕೆಯಾಗಿದೆ.

      ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಬಿಸಿ ಏರುತ್ತಿದ್ದು ಎಲ್ಲಾ ಕಡೆಯು ಜಿದ್ದಾಜಿದ್ದಿನಿಂದ ನಾಮಪತ್ರಿಕೆ ಸಲ್ಲಿಸಲಾಗುತ್ತಿದೆ ಆದರೆ, ಹೊನ್ನವಳ್ಳಿಯಲ್ಲಿ ಚುನಾವಣೆಗೆ ಮತ ಬಹಿಷ್ಕಾರದ ಬೀತಿ ಎದುರಾಗಿದ್ದು ಇದುವರೆಗೂ ಒಂದು ಮತಪತ್ರಿಕೆಯನ್ನು ಸಲ್ಲಿಸಲು ಯಾರು ಮುಂದೆ ಬಂದಿಲ್ಲ. ಈ ಮದ್ಯೆ ತಹಸೀಲ್ದಾರ್, ಡಿ.ವೈ.ಎಸ್ಪಿ ಹಾಗೂ ತಾಲ್ಲೂಕು ಪಂಚಾಯಿತಿ ಇ.ಓ ಮದ್ಯಸ್ಥಿಕೆಯಲ್ಲಿ ಮತ ಬಹಿಷ್ಕಾರ ಮಾಡಿರುವವರ ನಡುವೆ ಮನವೊಲಿಸಲು ಸಭೆ ನಡೆಸಿದರು ಸಭೆಯು ಯಶಸ್ವಿಯಾಗಿಲ್ಲ.

      ಕಡೇ ದಿನಾಂಕ ಬಂದು ಹೊನ್ನವಳ್ಳಿಯಲ್ಲಿ ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ ಅದರಂತೆಯೇ ಗುಡಿಗೊಂಡನಹಳ್ಳಿ, ಗುಂಗರಮೆಳೆ, ಸಾಧರ್ಥವಳ್ಳಿ, ಕರಡಿ, ಅರಳಗುಪ್ಪೆ, ಈಚನೂರು, ಮತ್ತೀಹಳ್ಳಿ, ಗುರುಗದಹಳ್ಳಿ, ತಡಸೂರು ಹಾಗೂ ರಂಗಾಪುರ ಕ್ಷೇತ್ರಗಳಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 

ದಂಪತಿಗಳು ಚುನಾವಣಾ ಸ್ಪರ್ಧೆಗೆ :

     ತಾಲ್ಲೂಕಿನ ನೊಣವಿನಕೆರೆಯಲ್ಲಿ ಕಳೆದ ಬಾರಿ ಚುನಾಯಿತ ಅಭ್ಯರ್ಥಿಯಾಗಿ ಜಯಶಾಲಿಯಾಗಿದ್ದ ಪ್ರಸನ್ನ ವಾರ್ಡ್‍ನಂ : 3 ರಿಂದ ಈ ಬಾರಿಯು ಸ್ಪರ್ಧಿಸಿದ್ದು, ಇವರ ಪತ್ನಿ ಲೀಲಾವತಿ ವಾರ್ಡ್ ನಂ : 4 ರಿಂದ ಸ್ಪರ್ಧಿಸಿದ್ದು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ತಾಲ್ಲೂಕಿನಲ್ಲಿ ಮೊದಲ ದಂಪತಿಗಳಾಗಿ ಸ್ಪರ್ಧಿಸಿದ್ದಾರೆಂಬ ಮಾಹಿತಿ ದೊರೆತಿದೆ. 

ಚುನಾವಣೆಗೆ ಪದವೀದರರ ದಂಡು :

       ಈ ಬಾರಿ ಚುನಾವಣೆಗೆ ಹೆಚ್ಚಾಗಿ ಯುವಕರೇ ಸ್ಫರ್ಧಿಸುತ್ತಿದ್ದು ಅದರಲ್ಲಿ ಹೆಚ್ಚಿನದಾಗಿ ಪದವೀದರರು ಸ್ಪರ್ಧಿಸುತ್ತಿದ್ದಾರೆ ಧಸರೀಘಟ್ಟ ಪಂಚಾಯಿತಿಯ ಹೊಘವನಘಟ್ಟ ಕ್ಷೇತ್ರದಿಂದ ಸಂತೋಷ್ ಶಂಕರಲಿಂಗಪ್ಪ ಸ್ಪರ್ಧಿಸಿದ್ದು ಇವರು ರಾಜ್ಯಶಾಸ್ತ್ರ್ತದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ಪದವೀದರರಾಗಿದ್ದು ಚುನಾವಣೆಯಲ್ಲಿ ಜಯಶಾಲಿಯಾಗಿ ತನ್ನ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಪಣ ತೊಟ್ಟಿದ್ದಾರೆ.

      ಹಿಂಡಿಸ್ಕೆರೆ ಗ್ರಾಮಪಂಚಾಯಿತಿಗೆ ಬೀರಸಂದ್ರವಾರ್ಡ್ ನಿಂದ ಸ್ಫರ್ಧಿಸಿರುವ ಕುಮಾರ್ ಬಿ.ಎ., ಬಿ.ಇಡಿ, ತಡಸೂರು ಪಂಚಾಯಿತಿಯ ಬನ್ನಿಹಳ್ಳಿಯಿಂದ ಸ್ಪರ್ಧಿಸಿರುವ ನಾಗೇಶ್ ವಕೀಲರಾಗಿದ್ದಾರೆ, ಇನ್ನು ಹಿಂಡಿಸ್ಕೆರೆ ಪಂಚಾಯಿತಿಗೆ ಬೀರಸಂದ್ರದಿಂದ ಸ್ಪರ್ಧಿಸಿರುವ ಸತೀಶ್, ಹುಚ್ಚಗೊಂಡನಹಳ್ಳಿ ಪಂಚಾಯಿತಿಯ ಆದಿಲಕ್ಷಿನಗರದಿಂದ ಭರತ್.ಆರ್, ರಂಗಾಪುರ ಪಂಚಾಯಿತಿಯಲ್ಲಿ ಲಕ್ಷ್ಮೀಕಾಂತ್, ದಸರೀಘಟ್ಟ ಪಂಚಾಯಿತಿಯ ನಾರಸೀಕಟ್ಟೆ-ಹೊಗವನಘಟ್ಟ ಕ್ಷೇತ್ರದಿಂದ ರಾಘವೇಂದ್ರ, ದಾಸನಕಟ್ಟೆ ಪ್ರೇಮ ಇವರುಗಳು ಪದವೀದರರಾಗಿದ್ದಾರೆ ಇದರಂತೆ ಬಿಳಿಗೆರೆ ಪಂಚಾಯಿತಿಯ ಕಿಬ್ಬನಹಳ್ಳಿ ಕ್ಷೇತ್ರದಿಂದ 1ನೇ ವಾರ್ಡ್‍ನಿಂದ ಮನು.ಕೆ.ಬಿ, ಯತೀಶ್ ಹಿಂಡಿಸ್ಕೆರೆ, ಅಶೋಕ್ ಬೆಸಗೆ, ಸಂತೋಷ್ ಸಾಸಲಹಳ್ಳಿ, ರಂಗಾಪುರ ಕ್ಷೇತ್ರದ ಬಳ್ಳೇಕಟ್ಟೆಯಿಂದ ಸ್ಪರ್ಧಿಸಿರುವ ಎಸ್.ಆರ್.ಗೌತಮಿ, ಗ್ರಾಮಗಳಿಂದ ಸ್ಪರ್ಧಿಸಿದ್ದು ಜಯಶಾಲಿಯಾಗಿ ಎನ್ನಾದರು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ.

      ನಾಮಪತ್ರ ಸಲ್ಲಿಸಲು ಕೊನೆಯ ದಿನವೂ ಸಮೀಪಿಸುತ್ತಿದ್ದು ಇನ್ನೆಷ್ಟು ನಾಮಪತ್ರಗಳು ಬರುತ್ತವೆ ಂದು ಕಾಯ್ದು ನೋಡಬೇಕಾಗಿದ್ದೆ. ಇನ್ನು ಹೊನ್ನವಳ್ಳಿಗೆ ಸಂಬಂಧಿಸಿದಂತೆ ಇದುವರೆಗೂ ಯಾರು ನಾಮಪತ್ರ ಸಲ್ಲಿಸಿಲ ನಾಳೆಯೇ ನಾಮಪತ್ರಸಲ್ಲಿಸಲು ಕೊನೆಯದಿನವಾಗಿದ್ದು ನಾಮಪತ್ರ ಸಲ್ಲಿಸುತ್ತಾರೋ ಇಲ್ಲ ಸಂಪೂರ್ಣವಾಗಿ ಚುನಾವಣೆಯನ್ನು ಬಹಿಷ್ಕರಿಸುತ್ತರೋ ಎಂಬುದು ನಾಳೆ ಸಂಜೆಯವೇಳೆಗೆ ತಿಳಿದು ಬರಲಇದೆ. ತಾಲ್ಲೂಕಿನಲ್ಲಿ ಒಟ್ಟು 46 ಸ್ಥಾನಗಳಿಗೆ ನಾಮಪತ್ರವನ್ನು ಸಲ್ಲಿಸಿಲ್ಲ ಹಾಗೂ ಕೊನೆ ದಿನವಾದ ಇಂದು ನಾಮಪತ್ರ ಸಲ್ಲಿಸಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap