ತಿಪಟೂರು :
ತಾಲ್ಲೂಕಿನ 26 ಗ್ರಾಮ ಪಂಚಾಯತಿಗಳಿಂದ ಒಟ್ಟು 167 ಕ್ಷೇತ್ರಗಳಿದ್ದು 419 ಸ್ಥಾನಗಳಿಗೆ 1341 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.
26 ಗ್ರಾಮ ಪಂಚಾಯಿತಿಗಳಿಂದ ಇದರಲ್ಲಿ ಹೊನ್ನವಳ್ಳಿಯಲ್ಲಿ ಚುನಾವಣಾ ಬಹಿಷ್ಕಾರವಾಗಿರುವುದನ್ನು ಬಿಟ್ಟು 405 ಸ್ಥಾನಗಳಿಗೆ ಅಭ್ಯರ್ಥಿಗಳು ತಮ್ಮ 4341 ನಾಮಪತ್ರವನ್ನು ಸಲ್ಲಿಸಿದ್ದು ಇದರಲ್ಲಿ ಪರುಷ ಅಭ್ಯರ್ಥಿಗಳು : 715, ಹಾಗೂ ಮಹಿಳಾ ಅಭ್ಯರ್ಥಿಗಳು 626 ಜನರು ಚುನಾವಣೆಯಲ್ಲಿ ಗೆಲ್ಲಲು ಕಸರತ್ತು ನಡೆಸಿದ್ದಾರೆ. ತಾಲ್ಲೂಕಿನ ದೊಡ್ಡ ಗ್ರಾಮ ಪಂಚಾಯಿತಿಯಾದ ಮತ್ತಿಹಳ್ಳಿ ಪಂಚಾಯ್ತಿಯಲ್ಲಿ 24 ಸ್ಥಾನಗಳಿಗೆ ಒಟ್ಟು 92 ಅಭ್ಯರ್ಥಿಗಳು ನಾಮಪತ್ರಸಲ್ಲಿಸಿದ್ದಾರೆ. ಹಾಗೆಯೇ ನೊಣವಿನಕೆರೆ 19 ಸ್ಥಾನಗಳಿಗೆ 83, ಬಿಳಿಗೆರೆ 19 ಸ್ಥಾನಗಳಿಗೆ 74, ಸಾರ್ಥವಳ್ಳಿ 16 ಸ್ಥಾನಗಳಿಗೆ 67, ತಡಸೂರು 16 ಸ್ಥಾನಗಳಿಗೆ 68 ನಾಮಪತ್ರ ಸಲ್ಲಿದ್ದು ಕಡಿಮೆ ಎಂದರೆ 12 ಸ್ಥಾನಗಳನ್ನು ಹೊಂದಿರುವ ಗುಂಗರಮಳೆಯಲ್ಲಿ 34 ನಾಮಪತ್ರಗಳು ಸಲ್ಲಿಕೆಯಾಗಿವೆ
ಅಭ್ಯರ್ಥಿಗಳು ತಮ್ಮ ಮನೆದೇವರ ಪೂಜೆ ಸಲ್ಲಿಸಿ, ಜ್ಯೋತಿಷಿಗಳು ಮತ್ತು ಸ್ವಾಮೀಜಿಗಳಿಂದ ಶುಭ ದಿನ ಕೇಳಿ ಆ ದಿನ, ಸಮಯಕ್ಕೆ ಸರಿಯಾಗಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನಾನು ಕಳೆದ ಬಾರಿ ಸೋತಿದ್ದೇನೆ, ಈ ಬಾರಿಯಾದರೂ ನಿಮ್ಮ ಮತ ನೀಡಿ ಗೆಲ್ಲಿಸಿಕೊಡಿ ಎಂದು ಅಭ್ಯರ್ಥಿಗಳು ಕೇಳಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಗೆದ್ದ ಅಭ್ಯರ್ಥಿ ನಾನು ಅಷ್ಟು ಕೆಲಸಮಾಡಿಸಿದ್ದೇನೆ, ಅವರಿಗೆ ಗ್ರಾಂಟ್ ಮನೆ, ಶೌಚಾಲಯ ಮಾಡಿಸಿಕೊಟ್ಟಿದ್ದೇನೆ, ಅಲ್ಲಿ ರಸ್ತೆ ಮಾಡಿದ್ದೇನೆ ಎಂದು ಹೇಳಿ ಮತವನ್ನು ಯಾಚಿಸುತ್ತಿದ್ದಾರೆ. ಗೆಲ್ಲಲೇ ಬೇಕು ಎಂದು ದೇವರಿಗೆ ಹರಕೆಯನ್ನು ಮಾಡಿಕೊಂಡವರಿದ್ದಾರೆ. ಇನ್ನು ಜ್ಯೋತಿಷಿಗಳ ಭವಿಷ್ಯ ಕೇಳಿ ಗೆಲ್ಲವ ವಿಶ್ವಾಸದಿಂದ ಸ್ಪರ್ಧೆ ಮಾಡಿದವರಿದ್ದಾರೆ.
ಇನ್ನು ಡಿಸೆಂಬರ್ 19 ನಾಮ ಪತ್ರಗಳನ್ನು ಹಿಂಪಡೆಯವ ದಿನವಾದ್ದರಿಂದ ಎಷ್ಟು ಜನರು ತಮ್ಮ ನಾಮಪತ್ರಗಳನ್ನು ಹಿಂಪಡೆಯುತ್ತಾರೋ ಕಾಯ್ದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ