ತಿಪಟೂರು :
ಗ್ರಾಮ ಪಂಚಾಯಿತಿ 2ನೇ ಹಂತದ ಚುನಾವಣೆ ಡಿಸೆಂಬರ್ 27ರಂದು ನಡೆಯುತ್ತಿರುವ ಸಲುವಾಗಿ ತಾಲ್ಲೂಕಿನ ಬಿಳಿಗೆರೆ ಪಂಚಾಯ್ತಿ ಹಾಗೂ ಕಿಬ್ಬನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಸ್.ಪಿ ಡಾ.ವಂಶಿಕೃಷ್ಣ ನೇತೃತ್ವದಲ್ಲಿ ಕೆ.ಬಿ.ಕ್ರಾಸ್‍ನಲ್ಲಿ ಪೊಲೀಸ್ ಪಥಸಚಲನ ನಡೆಸಲಾಯಿತು.
ನಂತರ ಬಿಳಿಗೆರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಎಸ್ಪಿ, ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ, ಚುನಾವಣಾ ಕ್ರಮಗಳು, ಮತದಾರರಿಗೆ ಬೆದರಿಕೆ ಮುಖ್ಯವಾಗಿ ಆಮೀಷಗಳನ್ನು ಒಡ್ಡಬಾರದೆಂದು ಎಚ್ಚರಿಸಿದ ಅವರು ಶಾಂತಿಯುತ ಮತದಾನಕ್ಕೆ ಸಹಕರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಿಪಟೂರು ಡಿವೈಎಸ್ಪಿ ಚಂದನ್‍ಕುಮಾರ್, ಗ್ರಾಮಾಂತರ ವೃತ್ತದ ಸಿ.ಪಿ.ಐ ಜಯಲಕ್ಷ್ಮಮ್ಮ, ಕಿ.ಬಿ.ಕ್ರಾಸ್ ಪಿ.ಎಸ್.ಐ ವಿಜಯಕುಮಾರಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
