ತಿಪಟೂರು : ಗ್ರಾಪಂಗೆ ಶೇ.88.95ರಷ್ಟು ಮತದಾನ

 ತಿಪಟೂರು :

      ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಯ ಕಾವೇರಿದ್ದರು ಮತದಾನದ ಪ್ರಕ್ರಿಯೆಗೆ ಮಾತ್ರ ಚಳಿಯು ಹಿನ್ನೆಡೆಯನ್ನು ಮಾಡಿತು. ಆದರೆ ಬಿಸಿಲೇರಿದಂತೆ ಮತದಾನದ ಚರುಕು ಕಂಡಿತು.

      ತಾಲ್ಲೂಕಿನ 25 ಗ್ರಾಮ ಪಂಚಾಯಿತಿ ಚುನಾವಣೆಗಾಗಿ 188 ಮೂಲ ಹಾಗೂ 14 ಆಕ್ಸಿಲರಿ ಮತಗಟ್ಟೆಗಳು ಸೇರಿಒಟ್ಟು 202 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಇವುಗಳಲ್ಲಿ 135 ಸಾಮಾನ್ಯ, 25 ಸೂಕ್ಷ್ಮ, 28 ಅತಿಸೂಕ್ಷ್ಮ ಮತಗಟ್ಟೆಗಳು ಎಂದುಗುರುತಿಸಲಾಗಿದ್ದು ಎಲ್ಲಾ ಮತಗಟ್ಟೆಗಳಲ್ಲು ಬೆಳೆಗೆ 7ರಿಂದಲೇ ಮತದಾನ ಪ್ರಕ್ರಿಯೆ ಆರಂಭವಾದರೂ ಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಮತದಾನ ಮಂದಗತಿಯಲ್ಲಿ ಆರಂಭವಾಯಿತು.

      ಬೆಳಿಗ್ಗೆ 9 ಗಂಟೆಯ ವೇಳೆಗೆ ಶೇ 6.46ರಷ್ಟು ಹಾಗೂ 11 ಗಂಟೆಯ ವೇಳೆಗೆ ಶೇ 21.94ರಷ್ಟು ಮಾತ್ರ ಮತದಾನ ನಡೆಯಿತು. ಮಧ್ಯಾಹ್ನ 1ರ ವೇಳೆಗೆ ಶೇಕಡ 45.96 ಮತದಾನವಾಗಿ ಬಿಸಿಲೇರಿದಂತೆ ಮತದಾನ ಚುರುಕುಕೊಂಡು ಸಂಜೆಯ ವೇಳೆಗೆ ಶೇಕಡ 88.95ರಷ್ಟು ಮತ ದಾಖಲಾಯಿತು.

      ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಗೆ ಇರುವ ಒಟ್ಟು 130233 ಮತದಾರರಲ್ಲಿ 63767 ಪುರುಷರು 66465 ಮಹಿಳೆಯರು ಹಾಗೂ ಇತರೆ 1 ಮತದಾರರಿದ್ದು ಇವರಲ್ಲಿ 58037 ಪುರುಷರು ಹಾಗೂ 57809 ಮಹಿಳೆಯರು ಮತದಾನ ಮಾಡಿದ್ದು ಒಟ್ಟು ಪುರುಷರು ಶೇಕಡ 91.01 ಹಾಗೂ ಮಹಿಳೆಯರು ಶೇಕಡ 86.95ರಷ್ಟು ಒಟ್ಟಾರೆಯಾಗಿ ಶೇಕಡ 88.95ರಷ್ಟು ಮತದಾನವಾಗಿದೆ.
ಹೊನ್ನವಳ್ಳಿಯಲ್ಲಿ ಮೌನ ಗ್ರಾಮ ಪಂಚಾಯ್ತಿ ಪ್ರತಿನಿಧಿಯ ಆಯ್ಕೆಯ ಉತ್ಸಾಹ ವಿವಿಧ ಗ್ರಾಮಗಳಲ್ಲಿ ಕಂಡುಬಂದರೆ, ನೀರಿಗಾಗಿ ಮತ ಬಹಿಷ್ಕಾರ ಮಾಡಿರುವ ಹೊನ್ನವಳ್ಳಿಯಲ್ಲಿ ಮಾತ್ರ ಮೌನ ಆವರಿಸಿದಂತೆ ಕಂಡುಬಂದಿತು.

      ಮದ್ಯ ಸೇವಿಸಿದ್ದ ಕೆಲವರು ಮತದಾನ ಕೇಂದ್ರದ ಹತ್ತಿರವೇ ಕುಡಿದು ತೂರಾಡುತ್ತಿದ್ದದು ತಾಲ್ಲೂಕಿನ ಹಲವಾರು ಮತಗಟ್ಟೆಗಳ ಹತ್ತಿರಕಂಡು ಬಂದಿತು. ಕೋವಿಡ್ ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಸೂಚನೆಯಿದ್ದರೂ ಕೆಲವು ಕಡೆಗಳಲ್ಲಿ ಮತದಾರರು ನಿಯಮದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಮತದಾನಕ್ಕಾಗಿ ಸರತಿಯ ಸಾಲಿನಲ್ಲಿ ನಿಲ್ಲುವಾಗಅಂತರ ಕಾಯ್ದುಕೊಳ್ಳಲಿಲ್ಲ. ಪೋಲೀಸರು ಮತ್ತು ಮತಗಟ್ಟೆ ಸಿಬ್ಬಂದಿ ಪದೇ ಪದೇ ಸೂಚನೆ ನೀಡುತ್ತಿದ್ದುದು ಕಂಡುಬಂತು. ಚಿಕ್ಕರಂಗಾಪುರ ಬೋವಿಕಾಲೋನಿ ಗೊಲ್ಲರಹಟ್ಟಿ ಗ್ರಾಮದ ಮತಗಟ್ಟೆಯಲ್ಲಿ ಮತದಾರರು ಯಾವುದೇ ಸಾಮಾಜಿಕ ಅಂತರವಿಲ್ಲದೇ ಸರದಿಸಾಲಿನಲ್ಲಿ ನಿಂತಿದ್ದರು.

       ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಹಲವಾರು ರೀತಿಯ ಆಮೀಷಗಳನ್ನು ಚುನಾವಣಾ ಅಭ್ಯರ್ಥಿಗಳು ಒಡ್ಡಿದ್ದರು, ಕೆಲವರು ಉಡುಗೊರೆಗಳನ್ನು ಹಂಚಿದರೆ ಕೆಲವರು ಹಣವನ್ನು ನೀಡಿದ್ದಾರೆಂಬುದು ಎಲ್ಲರಿಗೂ ಗೊತ್ತು. ಆದರೆ ಇದನ್ನೆ ಬಂಡವಾಳ ಮಾಡಿಕೊಂಡು ಪಾತ್ರೆ ವ್ಯಾಪಾರಿಯೊಬ್ಬರು ತಮ್ಮ ವಾಹನದಲ್ಲಿ ಪಾತ್ರಗಳನ್ನು ತುಂಬಿಕೊಂಡು ಗ್ರಾಮಗಳಲ್ಲಿ ಸಂಚರಿಸಿ ಚುನಾವಣೆ ನೆನಪಿನಲ್ಲಿ ಪಾತ್ರಗಳನ್ನು ಖರೀದಿಸುತ್ತಾರೆ ಎಂದು ಪಾತ್ರೆ ವ್ಯಾಪಾರಿ ತಿಳಿಸಿದರು.

     ಚುನಾವಣಾ ಕಾವು ಈಗ ಕಡಿಮೆಗಿದ್ದು ಈಗೇನಿದ್ದರೂ ಚುನಾವಣೆಲ್ಲಿ ಸೋಲುಗೆಲುವಿನ ಲೆಕ್ಕಾಚಾರದಲ್ಲಿರುವ ಅಭ್ಯರ್ಥಿಗಳು ಮತ್ತು ಹಿಂಬಾಲಕರು ನಾಳೆಯಿಂದ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ನೀವುಗೆಲುತ್ತೀರ ಎಂಬಂತೆ ಬಾಜಿಕಟ್ಟಲು ತಯಾರಾಗುತ್ತಿದ್ದಾರೆ.

Recent Articles

spot_img

Related Stories

Share via
Copy link