ತಿಪಟೂರು :
ನಗರಸಭೆಯ ಅಧ್ಯಕ್ಷರು, ಪೌರಾಯುಕ್ತರು ಹಾಗೂ ಸಿಬ್ಬಂದಿವರ್ಗದವರು ನಗರ ಜಲಕಾಯಗಳ ಸಂರಕ್ಷಣಾ ಆಂದೋಲನಾ ಎಂಬ ಕಾರ್ಯಕ್ರಮದಡಿ ಬಾವಿಗಳನ್ನು ಹಡುಕುತ್ತಿರುವುದು ಉತ್ತಮವಾದ ಕಾರ್ಯವಾಗಿದೆ.
ಇದರ ಜೊತೆಗೆ ನಗರದ ಅಭಿವೃದ್ಧಿ, ಬೀದಿ ದೀಪ ಹಾಗೂ ಒತ್ತುವರಿಯಾಗಿರುವ ರಾಜಕಾಲುವೆಗಳ ಸ್ಥಿತಿಗತಿಯನ್ನು ಪರಿಶೀಲಿಸಬೇಕಾಗುತ್ತದೆ ಎಂಬುದು ನಾಗರೀಕರ ಅಪೇಕ್ಷೆಯಾಗಿದೆ.
ನಗರದಲ್ಲಿ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಗಳಾದ ರಸ್ತೆ, ಬೀದಿ ದೀಪ, ಸ್ವಚ್ಚತೆ, ಪಾದಾಚಾರಿ ಮಾರ್ಗ, ಅನಧಿಕೃತ ಕಟ್ಟಡಗಳು, ಮುಖ್ಯವಾಗಿ ಬೃಹತ್ ಕಟ್ಟಡಗಳನ್ನು ಕಟ್ಟಿರುವ ಮಾಲೀಕರು ಬಾಡಿಗೆಪಡೆಯುತ್ತಿದ್ದಾರೆಯೇ ವಿನಹಃ ವ್ಯಾಪಾರಕ್ಕೆ ಬರುವಗ್ರಾಹಕರಿಗೆ ವಾಹನನಿಲುಗಡೆಗೆ ನೀಡಬೇಕಾದ ಜಾಗವನ್ನು ಸಹ ಬಾಡಿಗೆಗೆ ಕೊಟ್ಟಿರುವ ಬಗ್ಗೆಯೂ ಗಮನಹರಿಸುವಂತಾಗಲಿ ಎಂಬುದು ಜನರ ಒತ್ತಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ