ತಿಪಟೂರು :
ಕೌಟುಂಬಿಕ ಕಲಹ ಹಾಗೂ ಕುಡಿದು ಬಂದು ಮನೆಗೆ ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆ ಹಾಗೂ ಸಹೋದರ ಇಬ್ಬರು ಸೇರಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಚೌಡ್ಲಾಪುರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಕೊಲೆಯಾದ ವ್ಯಕ್ತಿ ನಿರಂಜನಮೂರ್ತಿ (38 ವರ್ಷ). ಕೊಲೆ ಮಾಡಿದ ನಿರಂಜನಮೂರ್ತಿಯ ತಂದೆ ಮಹಾದೇವಯ್ಯ ಹಾಗೂ ಸಹೋದರ ಚನ್ನಕೇಶವನನ್ನು ಕಿಬ್ಬನಹಳ್ಳಿ ಪೋಲೀಸರು ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿ.ವೈ.ಎಸ್ಪಿ ಚಂದನಕುಮಾರ್, ಗ್ರಾಮಾಂತರ ಸಿ.ಪಿ.ಐ ಜಯಲಕ್ಷ್ಮೀ, ಕೆ.ಬಿ.ಕ್ರಾಸ್ ಪೋಲೀಸ್ ಠಾಣೆ ಸಬ್‍ಪಿ.ಎಸ್.ಐ ವಿಜಯಲಕ್ಷ್ಮಿ ಭೇಟಿ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ