ತಿಪಟೂರು : ಕಲ್ಪತರು ವಿದ್ಯಾಸಂಸ್ಥೆಗೆ ಆಡಳಿತಾಧಿಕಾರಿ ನೇಮಕ

 ತಿಪಟೂರು : 

      ನಗರದ ಕಲ್ಪತರು ವಿದ್ಯಾಸಂಸ್ಥೆಗೆ ರಾಜ್ಯಪಾಲರ ಆದೇಶದಂತೆ ಆಡಳಿತಾಧಿಕಾರಿಯನ್ನು ನೇಮಿಸಿರುವುದು ಸ್ವಾಗತಾರ್ಹವೆಂದು ಮಾಜಿ ಖಜಾಂಚಿ ಹಾಗೂ ಕಾರ್ಯದರ್ಶಿ ಬಿ.ಆರ್.ವಿಶ್ವನಾಥ್ ಹೇಳಿದ್ದಾರೆ.

      ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಪತರು ವಿದ್ಯಾಸಂಸ್ಥೆಯನ್ನು 1962ರಲ್ಲಿ ಸಾರ್ವಜನಿಕರ, ರೈತರದೇಣಿಗೆಯಿಂದ ಸಂಸ್ಥಾಪಕರಾದ ಪಲ್ಲಾಘಟ್ಟಿ ಅಡವಪ್ಪ ಮತ್ತು ಪ್ರಾಂಶುಪಾಲ ಜೆ.ಆರ್.ಮಹಲಿಂಗಪ್ಪರವರು ನಮ್ಮ ಊರಿನ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇರೆಬೇರೆ ಕಡೆ ಹೋಗುವದನ್ನು ನೋಡಲಾಗರದೆ ಇಲ್ಲಿನ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸ್ಥಾಪಿಸಿದ್ದರು.

      ಬೇರಬೇರೆ ಕಡೆಗಳಲ್ಲಿ ಶಾಖೆಗಳನ್ನು ತೆರೆಯಬೇಕಾಗಿದ್ದ ಈ ಸಂಸ್ಥೆಯು 2014ರ ನಂತರ ಸ್ವಾರ್ಥ, ಆಡಳಿತದಲ್ಲಿ ಒತ್ತುಕೊಟ್ಟು ಭ್ರಷ್ಟಾಚಾರದ ಕೂಪವಾಗಿ ಪರಿಣಮಿಸಿದೆ. ಇದರ ಬಗ್ಗೆ ನಾನು ರಾಜ್ಯಪಾಲರಿಗೆ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿ ಸಂಸ್ಥೆಯನ್ನು ಉಳಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದೆ ಎಂದರು.

      ಈಗ ನನ್ನ ಮನವಿಯನ್ನು ಪುರಸ್ಕರಿಸಿ ಸಂಸ್ಥೆಗೆ ಆಡಳಿತಾಧಿಕಾರಿಗಳನ್ನು ನೇಮಿಸಿದ್ದು ಸಂಸ್ಥೆಯಲ್ಲಿ ಆಗಿರ ಬಹುದಾದ ಭ್ರಷ್ಟಚಾರವನ್ನು ಸರಿಪಡಿಸಿ ಮತ್ತೆ ಕಲ್ಪತರು ವಿದ್ಯಾಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸುವ ಕಾರ್ಯವಾಗುತ್ತದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link