ತಿಪಟೂರು : ಗ್ರಾ.ಪಂ ನಂತರ ಹಾಲು ಉತ್ಪಾದಕರ ಸಂಘದ ಚುನಾವಣೆ ಬಹಿಷ್ಕಾರ

ತಿಪಟೂರು  :

      ಹೊನ್ನವಳ್ಳಿ ಭಾಗದ ನೀರಿನ ಶಾಪ ವಿಮೋಚನೆಯಾಗುವುದೇ ಎಂದು ಹೊನ್ನವಳ್ಳಿ ಭಾಗದ ಜನರು ಕಾಯುತ್ತಿದ್ದಾರೆ. ಹಲವಾರು ವರ್ಷಗಳಿಂದ ನೀರಿಗಾಗಿ ಹಪಹಪಿಸುತ್ತಿದ್ದಾರೆ.

      ತಾಲ್ಲೂಕಿನ ಹೊನ್ನವಳ್ಳಿ ಭಾಗದ ಜನರು ಹಿಂದೆ ಮೈಸೂರು ಮಹಾರಾಜರಿಗೆ ತುಂಬಾ ನಿಕಟವರ್ತಿಗಳಾಗಿದ್ದು ಇಲ್ಲಿನ ಗಂಗಾಪಾಣಿ ಎಂಬ ಎಳನೀರನ್ನು ಮೈಸೂರು ದಸರಾ ಸಂದರ್ಭದಲ್ಲಿ ತರಿಸಿಕೊಳ್ಳುತ್ತಿದ್ದರು. ಆಗಿನ ಗಂಗಾಪಾಣಿಯ ತಳಿ ಈಗ ಸಂಪೂರ್ಣವಾಗಿ ನಶಿಸುವುದರ ಜೊತೆಗೆ ಅಲ್ಲೊಂದು ಇಲ್ಲೊಂದು ಮರವಿರಬಹುದು. ಆಕಾಲದಲ್ಲಿ ಉತ್ತಮ ಮಳೆ ಬೀಳುತ್ತಿತ್ತ. ಈಗ ಮಳೆ ಅಭಾವವಾಗಿ ಅದರೊಂದಿಗೆ ಗಂಗಾಪಾಣಿ ತಳಿ ತೆಂಗು ಕೂಡಾ ನಶಿಸುತ್ತಿದೆ. ಈಗ ಇಲ್ಲಿನ ಜನರೂ ನೀರಿನ ಸಮಸ್ಯೆ ಎದುರಿಸುವಂತಾಗಿದೆ.

      ಹೊನ್ನವಳ್ಳಿ ಭಾಗದ ಜನರ ನೀರಿನ ಸಮಸ್ಯೆ ರಾಜಕಾರಣಿಗಳ ಚುನಾವಣೆಯ ಅಕ್ಷಯ ಪಾತ್ರೆಯಂತಾಗಿದ್ದು, ಚುನಾವಣೆ ಸಮಯದಲ್ಲಿ ನೀರು ತರುವ ಬಗ್ಗೆ ದಾಳಗಳನ್ನು ಉರುಳಿಸಿ ಚುನಾವಣೆಗಳಲ್ಲಿ ಗೆಲ್ಲುವ ಜನಪ್ರತಿನಿಧಿಗಳು ನಂತರ ಅತ್ತ ಹೆಚ್ಚು ತಲೆಯನ್ನೇ ಕೆಡೆಸಿಕೊಳ್ಳುವುದಿಲ್ಲ. ಇವೆಲ್ಲದರ ನಡುವೆ ರೋಸಿ ಹೋಗಿರುವ ಜನರು ಮೊನ್ನೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿ, ನೀರು ಸಿಗುವರೆಗೂ ನಾವು ಯಾವುದೇ ಚುನಾವಣೆಗಳಲ್ಲಿ ಭಾಗವಹಿಸುವುದಿಲ್ಲವೆಂಬ ಮುನ್ಸೂಚನೆಯನ್ನು ನೀಡಿದ್ದರು. ಅದರಂತೆಯೇ ಈಗ ನಡೆಯಬೇಕಾಗಿದ್ದ ಹಾಲು ಉತ್ಪದಾಕರ ಸಹಕಾರ ಸಂಘದ ಚುನಾವಣೆಗೂ ಸಹ ಯಾವುದೇ ಅಭ್ಯರ್ಥಿಗಳು ನಾಮಪತ್ರಸಲ್ಲಿಸದೇ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೂ ನಮ್ಮ ಒಗ್ಗಟ್ಟನ್ನು ಮುರಿಯಲು ಸಾಧ್ಯವಿಲ್ಲವೆಂಬಂತೆ ಪಕ್ಷಾತೀತವಾಗಿ ಹೊನ್ನವಳ್ಳಿ ಜನರು ಸಂಘಟನೆ ತೋರಿಸಿಕೊಟ್ಟಿದ್ದಾರೆ.

ನೀರಿಗಾಗಿ ಮೈಸೂರು ಮಹಾರಾಜರಿಗೆ ಪತ್ರ:

      ದಿನಾಂಕ: 09-08-1951 ರಂದು ಹೊನ್ನವಳ್ಳಿಯ ಜನತೆ ಆಗಿನ ಮೈಸೂರು ರಾಜರಾದ ಜಯಚಾಮರಾಜೇಂದ್ರ ಬಹದ್ದೂರ್ ದಿವ್ಯ ಸನ್ನಿದಿಯಲ್ಲಿ ಎಂದು ನೀರಿಗಾಗಿ ಅವಲತ್ತುಕೊಂಡಿರುವ ಮೈಸೂರು ಮಹಾರಾಜರಿಗೆ ಬರೆದಿರುವ ಪತ್ರವೂ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಸೃಷ್ಠಿಸಿದೆ. ಹೊನ್ನವಳ್ಳಿ ಭಾಗದ ಜನರ ಸಮಸ್ಯೆ ನಿನ್ನೆ ಮೊನ್ನೆಯದಲ್ಲ ಇದು 70 ದಶಕಗಳ ಸಮಸ್ಯೆ ಎಂದು ರುಜುವಾತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link