ತಿಪಟೂರು :
ತಿಪಟೂರು ತಾಲ್ಲೂಕು ಕಸಬಾ ಹೋಬಳಿ, ಕೋಟನಾಯಕನಹಳ್ಳಿ ಗ್ರಾಮದ ವೀರಾಂಜನೇಯ ಹೋಟೆಲ್‍ನ ಆವರಣದಲ್ಲಿರುವ ಮಿಸ್ಟ್ ಕೂರ್ಗ್ ಸ್ಪೈಸಸ್ ಎಂಬ ಅಂಗಡಿ ಮಳಿಗೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ವಿವಿಧ ನಮೂನೆಯ ಒಟ್ಟು 62.250 ಲೀಟರ್ ಹೋಮ್ ಮೇಡ್ ವೈನ್ ಅನ್ನು ಜಪ್ತು ಪಡಿಸಿ ಮಿಸ್ಟ್ ಕೂರ್ಗ್ ಸ್ಪೈಸಸ್ ಎಂಬ ಅಂಗಡಿ ಮಾಲೀಕರು ಹಾಗೂ ಮಳಿಗೆ ಕಟ್ಟಡದ ಮಾಲೀಕರ ವಿರುದ್ದ ಪ್ರಕರಣ ದಾಖಲುಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕೆ.ಬಿ.ಕ್ರಾಸ್‍ನ ಮಯೂರ ಹೋಟೆಲ್ ಮುಂಭಾಗದ ಮಳಿಗೆ ನ್ಯೂ ಕೂರ್ಗ್ ಸ್ಪೈಸಸ್ ಅಂಗಡಿಯ ಮೇಲೆ ದಾಳಿ ನಡೆಸಿ 10 ಲೀಟರ್ ಹೋಂ ಮೇಡ್ ವೈನ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದೆ.
ತಿಪಟೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರು ತಿಪಟೂರು ವಲಯ ಹಾಗೂ ಸಿಬ್ಬಂದಿ ತಿಪಟೂರು ಅಕ್ರಮವಾಗಿ ಹೋಂ ಮೇಡ್ ವೈನ್ ಹೆಸರಿನಲ್ಲಿ ವೈನ್ ಮಾರಾಟದ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿಮಾಡಿದರು. ಈ ಸಂದರ್ಭದಲ್ಲಿ ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ ವಿಜಯ್‍ಕುಮಾರ್.ಜಿ.ವಿ. ಅಬಕಾರಿ ನಿರೀಕ್ಷಕ ವಿಜಯಕುಮಾರ್.ಕೆ.ಟಿ, ಅಬಕಾರಿ ಉಪನಿರೀಕ್ಷಕ ಜಿ.ಆರ್.ನಾಗರಾಜು, ಹಾಗೂ ಅಬಕಾರಿ ಕಾನ್ಸ್‍ಟೇಬಲ್‍ಗಳಾದ ಪ್ರಸನ್ನ.ಎಸ್. ಜಿ.ಆರ್.ಸ್ವಾಮಿ, ಶಿವಶಂಕರಯ್ಯ, ರೇವಣ್ಣ, ಯತೀಶ್, ಮುಸ್ತಾಕ್, ರಾಜೇಶ್ವರಿ ಹಾಗೂ ವೀಣಾ ರವರು ಪಾಲ್ಗೊಂಡಿರುತ್ತಾರೆ.
ಈ ರೀತಿ ಹೋಮ್ ಮೇಡ್ ವೈನ್ ಹೆಸರಿನಲ್ಲಿ ನಾನ್ ಆಲ್ಕೋಹಾಲಿಕ್ ಎಂದು ಲೇಬಲ್‍ನಲ್ಲಿ ನಮೂದಿಸಿ ಯುವಜನರನ್ನು ಮದ್ಯವ್ಯಸನದ ಕಡೆಗೆ ಸೆಳೆಯುವ ಇಂತಹ ಕೃತ್ಯಗಳು ಅಪರಾದವಾಗಿದ್ದು ಈ ರೀತಿ ಕೃತ್ಯ ಸಾರ್ವಜನಿಕರ ಗಮನಕ್ಕೆ ಬಂದರೆ ತಕ್ಷಣವೇ ನಿರೀಕ್ಷಕರ ದೂರವಾಣಿ ಸಂಖ್ಯೆ: 9620379070 ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
