ತಿಪಟೂರು : ರಸ್ತೆ ಅಪಘಾತ ತಡೆಯಲು ಸುರಕ್ಷತಾ ನಿಯಮ ಪಾಲಿಸಿ

ತಿಪಟೂರು : 

    ರಾಜ್ಯದಲ್ಲಿ ರಸ್ತೆ ಅಪಘಾತಗಳಾಗುವ ಪಟ್ಟಿಯಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನದಲ್ಲಿರುವುದು ವಿಷಾದಕರ, ಆದರೆ ಈ ಬಾರಿ ನಾವು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ಕಡಿಮೆ ಮಾಡುವ ಜವಾಬ್ದಾರಿಯನ್ನು ತೆದುಕೊಳ್ಳಬೇಕು ಎಂದು ಡಿ.ವೈ.ಎಸ್ಪಿ ಚಂದನ್ ಕುಮಾರ್ ಕರೆನೀಡಿದರು.

      ನಗರದ ಗ್ರಾಮ ದೇವತೆ ಕೆಂಪಮ್ಮ ದೇವಿ ಸನ್ನಿಧಾನದಲ್ಲಿ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸಡಕ್ ಸುರಕ್ಷಾ–ಜೀವನ್ ರಕ್ಷಾ ಎಂಬ ಧ್ಯೇಯ ವಾಕ್ಯದೊಂದಿಗೆ ಮನೆಮನೆಗೆ ತರಳಿ ಮಾಹಿತಿಯನ್ನು ಕಲೆಹಾಕಲಾಗುವುದು. ಮೊದಲ ಬಾರಿಗೆ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ಅರಿವು ಮೂಡಿಸುವುದು, ಪ್ರತಿ ಮನೆಯಲ್ಲಿ ಇರುವ ಚಾಲನ ಪರವಾನಗಿ, ವಾಹನ ಮಾಲೀಕರ ಮತ್ತು ವಾಹನದ ಮಾಹಿತಿ ಕಲೆಹಾಕಿ ಅವರಿಗೆ ಚಾಲನ ಪರವಾನಗಿ ಅಥವಾ ವಾಹನದ ವಿಮೆ ಇಲ್ಲದಿದ್ದರೆ ಒಂದು ಕಡೆ ಸೇರಿಸಿ ಅವರಿಗೆ ಸೂಕ್ತ ಕಂಪನಿಯಿಂದ ವಾಹನ ವಿಮೆ ಜೊತೆಗೆ ನಾವು ತಿಳಿಸಿದ ದಿನ ಸೂಕ್ತ ದಾಖಲೆಗಳೊಂದಿಗೆ ಬಂದರೆ ಚಾಲನ ಪರವಾನಗಿ ಮಡಿಸುವ ವ್ಯವಸ್ಥೆಯನ್ನು ಮಾಡುವುದರ ಜೊತೆಗೆ ಪೀಣ್ಯಾದ ಕಂಪನಿಯೊಂದರೆ ಜೊತೆಗೆ ಹೆಲ್ಮೆಟ್ ಖರೀದಿಸುವ ಬಗ್ಗೆ ಮಾತುಕತೆ ನಡೆಸುತ್ತಿದ್ದು ಅತ್ಯಂತ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಉತ್ತಮ ಗುಣ ಮಟ್ಟದ ಹೆಲ್ಮೆಟ್ ಕೊಡಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು. ಮುಖ್ಯವಾಗಿ ನಾವು ದಂಡವನ್ನು ವಿಧಿಸುವುದು ಸರ್ಕಾರಕ್ಕೆ ಆದಾಯ ಬರಲೆಂದಲ್ಲ ಇದರಿಂದ ಕಾನೂನಿನ ಪಾಲನೆಮಾಡಿ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಅಪಘಾತ ಸಂದರ್ಭದಲ್ಲಿ ತುರ್ತು ಸೇವೆಯನ್ನು ನೀಡುತ್ತಿರುವ ಖಾಸಗಿ ಆಂಬುಲೆನ್ಸ್ ಚಾಲರ ಜೊತೆಗೆ ಜಗದೀಶ್ ರಾವ್ಸೇರಿಂದತೆ 6 ಜನರನ್ನು ಸನ್ಮಾನಿಸಲಾಯಿತು.

      ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶರು ನಾವು ಯಾವುದಾದರು ಶಾಲೆ ಕಾಲೇಜಿಗೆ ಹೋದರೆ ಯಾರು ಯಾರು ವಾಹನ ಚಲಾವಣೆ ಮಾಡುತ್ತೀರ ಎಂದರೆ ಎಲ್ಲರೂ ಕೈ ಎತ್ತುತ್ತಾರೆ ಆದರೆ ಯಾರ ಹತ್ತಿರ ಚಾಲನಾ ಪರವಾನಗಿ ಇದೆ ಅವರು ಕೈ ಎತ್ತಿ ಎಂದರೆ ಯಾರು ಕೈ ಎತ್ತುವುದಿಲ್ಲ. ಇದರ ಬಗ್ಗೆ ಸಾರಿಗೆ ಅಧಿಕಾರಿಗಳು ಹಾಗೂ ಆರಕ್ಷಕರು ಕ್ರಮ ತೆಗೆದುಕೊಂಡು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ತಿಳಿಸಿದರು.

      ಹಾಲಿ ಮತ್ತು ಮಾಜಿ ಶಾಸಕರ ರೈಡ್: ಕಾರ್ಯಕ್ರಮದಲ್ಲಿ ಹೆಲ್ಮೆಟ್ ಷೋ ಡ್ರೈವ್‍ನಲ್ಲಿ ಹಾಲಿ ಶಾಸಕ ಬಿ.ಸಿ.ನಾಗೇಶ್ ಆರಕ್ಷಕರ ನಿರ್ಭಯ ದ್ವಿಚಕ್ರವಾಹನವನ್ನು ಚಲಾಯಿಸಿದರೆ ಮಾಜಿ ಶಾಸಕರಾದ ಕೆ.ಷಡಕ್ಷರಿಯವರು ಹಿಂದೆ ಕುಳಿತಿದ್ದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರುಗಳು, ತಹಸೀಲ್ದಾರ್ ಚಂದ್ರಶೇಖರ್, ಪೌರಾಯುಕ್ತ ಉಮಾಕಾಂತ್, ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಗರಸಭಾ ಸದಸ್ಯರುಗಳು, ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಎನ್.ಹೆಚ್.ಐ ಅಧಿಕಾರಿಗಳೊಂದಿಗೆ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ವೃತ್ತದ ಆರಕ್ಷಕರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap