ತಿಪಟೂರು :
ನಗರದಲ್ಲಿ ಸೂಕ್ತವಾದ ದೋಭಿಘಾಟ್ ನಿರ್ಮಸಿಕೊಡದಿದ್ದರೆ ಮಡಿವಾಳ ಜನಾಂಗದವರು ನಗರಸಭೆ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಮಡಿವಾಳ ಸಂಘದ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಗರದ ನಗರಸಭೆ ಹಿಂಭಾಗದಲ್ಲಿರುವ ದೋಬಿಘಾಟ್ ಅನ್ನು ಅಂದಿನ ಶಾಸಕರಾದ ಟಿ.ಎಂ.ಮಂಜುನಾಥ್, ಪುರಸಭೆ ಅಧ್ಯಕ್ಷ ತಿಪ್ಪೆರುದ್ರಪ್ಪನವರು ಹಾಗೂ ನಾರಾಯಣ ಗೌಡರು ಮಡಿವಾಳ ಜನಾಂಗದ ಮೂಲ ಕಸುಬನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುವ ಜನರಿಗೆ ಅನುಕೂಲವಾಗಲೆಂದು ಜಾಗವನ್ನು ಗುರುತಿಸಿ ದೋಬಿ ಘಾಟ್ ನಿರ್ಮಿಸಿದ್ದರು. ಕಲ್ಲು ಚಪ್ಪಡಿ ಕಾಂಪೌಂಡ್ ಬಟ್ಟೆ ಒಗೆಯಲು ತೊಟ್ಟಿಗಳನ್ನು ಕಟ್ಟಿಸಿ, ಪುರಸಭೆಯಿಂದ ನೀರು ದೊರಕಿಸಿ ಕೊಟ್ಟಿದ್ದರು. ಆದರೆ ಈ ದೋಬಿಘಾಟ್ ಕೆರೆಯ ಪಕ್ಕದ ಲಿಂಕ್ ರಸ್ತೆ ಮಾಡುವಾಗ ನಿಮಗೆ ಪಕ್ಕದಲ್ಲಿಯೇ ಬಾಂಬೆ ತರಹ ದೋಬಿಘಾಟ್ ಮಾಡಿಕೊಡುತ್ತೇವೆ ಮಡಿವಾಳ ಜನಾಂಗದವರು ಲಿಂಕ್ ರೋಡ್ ಮಾಡಲು ತೊಂದರೆ ಕೊಡಬೇಡಿ ಎಂದು ತಿಳಿಸಿದ್ದರು.
ಶಾಸಕ ಕೆ.ಷಡಕ್ಷರಿ ಲಿಂಕ್‍ರಸ್ತೆ ಮಾಡಿಸಿದಾಗ ಹೇಗೂ ಹೊಸ ದೋಬಿಘಾಟ್ ಮಾಡಿಕೊಡ್ತಾರೆ ಅಂತ ನಾವುಗಳು ಲಿಂಕ್ ರೋಡ್ ಜಾಗಬಿಟ್ಟೆವು. ರಸ್ತೆ ಆದ ಮೇಲೆ ದೋಬಿಘಾಟ್ ಹಾಳಾಗಿ ಸಾವಿರಾರು ಮಡಿವಾಳ ಕುಟುಂಬಗಳು ಕೆಲಸವಿಲ್ಲದೆ, ಬೀದಿಗೆ ಬಿದ್ದೆವು. ಯಾರು ನಮ್ಮ ನೆರವಿಗೆ ಬರಲಿಲ್ಲ. ಮಡಿವಾಳ ಜನಾಂಗದ ನಾವುಗಳು ದೋಬಿಘಾಟ್ ಇಲ್ಲದ ಜೀವನ ನಡೆಸಲು ತೊಂದರೆಯಾಗಿದೆ. ಹೊಸ ದೋಬಿಘಾಟ್ ಕಟ್ಟಿಸಿಕೊಡಬೇಕೆಂದು ಮಡಿವಾಳ ಸಂಘದ ಅಧ್ಯಕ್ಷರಾದ ಮಂಜುನಾಥ್ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
