ತಿಪಟೂರು :
ನಗರದಲ್ಲಿ ಬೆಳಗದ ಬೀದಿ ದೀಪಗಳಿಗೆ ತಿಂಗಳೊಂದಕ್ಕೆ ಲಕ್ಷಾಂತರ ರೂ.ಗಳನ್ನು ವ್ಯಯಿಸಿರುವ ಬಗ್ಗೆ ನಗರಸಭೆಯಲ್ಲಿ ಗಂಭೀರವಾದ ಚರ್ಚೆಯಾಯಿತು.
ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸಗರಸಭಾ ಸದಸ್ಯೆ ಗಂಗಾ ಮಾತನಾಡಿ, ನಮ್ಮ ವಾರ್ಡ್ನಲ್ಲಿ ರಾತ್ರಿ ಸಮಯದಲ್ಲಿ ಓಡಾಡಲು ಸಾಧ್ಯವಾಗದಷ್ಟು ಕತ್ತಲೆ ಇದೆ. ವಿದ್ಯುತ್ ದೀಪವಿಲ್ಲದೆ ಜನ ಓಡಾಡಲು ತುಂಬಾ ಕಷ್ಟವಾಗುತ್ತಿದೆ. ಇದಕ್ಕೆ ಪರಿಹಾರವೇ ಇಲ್ಲವೇ ನಾನು ಕಳೆದ ಬಾರಿಯೂ ಸಾಮಾನ್ಯ ಸಭೆಯಲ್ಲೂ ಪ್ರಶ್ನಿಸಿದ್ದರು.
ಧನಿಗೂಡಿಸಿದ ಸದಸ್ಯ ಟಿ.ಎನ್.ಪ್ರಕಾಶ್, ನಗರದಲ್ಲಿ ವಿದ್ಯುತ್ ದೀಪಗಳ ಸೂಕ್ತ ನಿರ್ವಣೆ ಇಲ್ಲದೇ ಸೊರಗುತ್ತಿದೆ. ಅಷ್ಟೇ ಏಕೆ, ನಗರಸಭೆಯ ಮುಂಭಾಗವೇ ಕತ್ತಲೆ ಇದೆ. ಇದರ ಮಧ್ಯೆ ಗುತ್ತಿಗೆದಾರನಿಗೆ ಮಾತ್ರ ತಿಂಗಳಿಗೆ ಸುಮಾರು 2 ಲಕ್ಷದಷ್ಟು ಹಣ ವೆಚ್ಚವಾಗುತ್ತಿದ್ದು, ಬೆಸ್ಕಾಂಗೆ ತಿಂಗಳಿಗೆ 75 ಸಾವಿರದಷ್ಟು ಹಣವನ್ನು ನಗರಸಭೆಯ ಹಣದಲ್ಲಿ ಭರಿಸಲಾಗುತ್ತಿದ್ದರು ಸಹ ನಗರದಲ್ಲಿ ಅಂಧಕಾರ ತುಂಬಿದೆ ಎಂದು ಆರೋಪಿಸಿದರು.
ನಗರಸಭೆಯ ಅಧಕ್ಷ ರಾಮ್ಮೋಹನ್ ಉತ್ತರಿಸಿ, ನಮಗೂ ಇದರ ಬಗ್ಗೆ ತಿಳಿದಿದ್ದು ಗುತ್ತಿಗೆದಾರನಿಗೆ ನಾವು ಅಧಿಕಾರವನ್ನು ವಹಿಸಿಕೊಂಡಾಗಿನಿಂದಲೂ ಯಾವುದೇ ಬಿಲ್ ಮಾಡದೇ ಪೆಂಡಿಂಗ್ ಇಟ್ಟಿದ್ದೇವೆಂದು ತಿಳಿಸಿದರು.
ಕಳೆದ ಬಾರಿಯ ಸಭೆಯಲ್ಲಿ ಚರ್ಚೆಯಾಗಿದ್ದ ಬಿ.ಎಂ.ಸಿ. ಲೇಔಟ್ಗೆ ಏಕೆ ಅನುದಾನ ಹಾಕುತ್ತಿದ್ದೀರ ಎಂದಿದ್ದಕ್ಕೆ ಅವರು ಲಾಯರ್ ನೋಟೀಸ್ ನೀಡಿದ್ದಾರೆ ಎಂದಿದ್ದರು. ಅದಕ್ಕೆ ಈ ಬಾರಿಯ ಸಭೆಯಲ್ಲಿ ವಾರ್ಡ್ ನಂ 7ರ ಸದಸ್ಯ ಯೋಗೀಶ್ ನಮ್ಮ ಒಂದು ಲೇಔಟ್ನವರು ನಗರಸಭೆಗೆ ಅಭಿವೃದ್ಧಿ ಶುಲ್ಕ ಕಟ್ಟಿದ್ದಾರೆ. ನಾನು ಲಾಯರ್ ನೋಟೀಸ್ ಕೊಡಿಸುತ್ತೇನೆ ನನಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ಅನುದಾನವನ್ನು ಬಿಡುಗಡೆಮಾಡಿ ಎಂದು ಆಗ್ರಹಿಸಿದರು.
ನಾವು ಏನನ್ನಾದರು ಮಾಹಿತಿಯನ್ನು ಕೇಳಿದರೆ ನೀವು ಕಾನೂನು ರೀತಿಯಲ್ಲಿ ಬನ್ನಿ ಆಗ ನಿಮಗೆ ಮಾಹಿತಿಯನ್ನು ಕೊಡಬೇಕೆನ್ನುವ ಅಧಿಕಾರಿಗಳಿಗೆ ಕಾನೂನಿನ ಪ್ರಕಾರ ಟಿಪ್ಪಣಿಗಳನ್ನು ಹಾಕಲು ಬರುವುದಿಲ್ಲವೆ ಎಂದು ನಗರಸಭೆ ಸದಸ್ಯ ಟಿ.ಎನ್.ಪ್ರಕಾಶ್ ಆರೋಪಿಸಿದರು. ಈ ಸಂದರ್ಭದಲ್ಲಿ ಶಾಸಕ ಬಿ.ಸಿ.ನಾಗೇಶ್ ಮದ್ಯೆಪ್ರವೇಶಿದ ನಗರದ ಅಭಿವೃದ್ಧಿಗಾಗಿ ಈ ಬಾರಿ ಅವಕಾಶ ಮಾಡಿಕೊಡಿ ಇಲ್ಲದಿದ್ದರೆ ಅನುದಾನ ವಾಪಸ್ ಹೋಗುತ್ತದೆ ಎಂದು ತಿಳಿಸಿದಾಗ ಪ್ರಕಾಶ್ ಮಾತನಾಡಿ, ನಮಗೂ ನಗರದ ಅಭಿವೃದ್ಧಿಯಾಗಬೇಕೆಂಬ ಆಸೆ ಇದೆ.
ಆದರೆ ನಮಗೆ ಕಾನೂನು ತಿಳಿದಿಲ್ಲವೆಂದು ಅಂದುಕೊಂಡಿರುವುದು ಅಧಿಕಾರಿಗಳ ತಪ್ಪು ಎಂದು ಅಧಿಕಾರಿಗಳನ್ನು ಚೇಡಿಸಿದರು.
ನಗರಸಭೆಯ ದೊಡ್ಡ ದುರಂತವೆಂದರೆ ಬೀದಿದೀಪ ನಿರ್ವಹಣೆಯ ಗುತ್ತಿಗೆದಾರನಿಗೆ ಪ್ರತಿತಿಂಗಳು ಸುಮಾರು 2 ಲಕ್ಷ ರೂಗಳು ಸಂದಾಯವಾಗುತ್ತಿದೆ. ಇದಕ್ಕಾಗಿ ಸಾರ್ವಜನಿಕರ ಹಣ ವ್ಯರ್ಥವಾದರೂ ಸಹ ಬೀದಿದೀಪಗಳು ಬೆಳಕನ್ನು ನೀಡುತ್ತಿಲ್ಲ. ಯಾವಯಾವ ಬೀದಿದೀಪಗಳನ್ನು ದುರಸ್ತಿಮಾಡಲಾಗಿದೆ ಎನ್ನುವುದಕ್ಕೂ ದಾಖಲೆಗಳಿಲ್ಲ, ಇನ್ನೂ ಕುಡಿಯುವ ನೀರಿನ 100 ಬೋರ್ವೆಲ್ಗಳ ನಿರ್ವಹಣೆಗಾಗಿ ಕಳೆದ ಬಾರಿ 22 ಲಕ್ಷಕ್ಕೆ ಟೆಂಡರ್ ಆಗಿತ್ತು. ಆದರೆ ಈ ಬಾರಿ ಅದು 40 ಲಕ್ಷಕ್ಕೆ ಹೆಚ್ಚಾಗಿರುವುದಾರು ಹೇಗೆ ಮತ್ತು ಇದರ ಬಗ್ಗೆ ದಾಖಲೆಗಳನ್ನು ಒದಗಿಸುವುಂತೆ ವಾರ್ಡ್ ನಂರ 14ರ ಯೋಗೇಶ್ ಕೇಳಿದರು.
ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಸೊಪ್ಪು ಗಣೇಶ್, ಪೌರಾಯುಕ್ತ ಉಮಾಕಾಂತ್ ನಗರಸಭೆಯ ಸದಸ್ಯರುಗಳು, ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ