ತಿಪಟೂರು :

ರಾಜ್ಯದಲ್ಲೇ ಮೊದಲ ಬಾರಿಗೆ ತಿಪಟೂರಿನಲ್ಲಿ ಪೊಲೀಸ್ ಇಲಾಖೆ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿಸಾರ್ವಜನಿಕರಿಗೆ ಅಪಘಾತ ತಡೆ ಸಂಬಂಧ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದೇ ಫೆಬ್ರವರಿ 15 ರಂದು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಸರಕಾರಿ ದರದಲ್ಲಿ ಚಾಲನಾ ಪರವಾನಗಿ, ವಾಹನದ ದೃಢತೆ ಪ್ರಮಾಣಪತ್ರ, ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಹೆಲ್ಮೆಟ್ ಹಾಗೂ ತಮಗೆ ಉತ್ತಮವೆನಿಸುವ ಕಂಪನಿಗಳಲ್ಲಿ ವಿಮೆ (ಇನ್ಸೂರೆನ್ಸ್) ಮಾಡಿಸಿಕೊಡುವ ಕಾರ್ಯವನ್ನು ಆರಕ್ಷಕ ಇಲಾಖೆ ಹಮ್ಮಿಕೊಂಡಿರುತ್ತದೆ. ಇದರಿಂದ ಕೇವಲ ದಂಡಹಾಕುವುದು ಆರಕ್ಷರರ ಕೆಲಸವಲ್ಲ ನಾವು ನಿಮ್ಮ ಜೀವ ಮತ್ತು ಕುಟುಂಬದ ರಕ್ಷಕರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದ್ದು ನಿಮ್ಮೊಂದಿಗೆ ನಾವಿದ್ದೇವೆ ಆದರೆ ನೀವು ಕಾನೂನಿನ ಎಲ್ಲಾ ರೀತಿರಿವಾಜುಗಳನ್ನು ಪಾಲಿಸಿ ನಮಗೆ ಸಹಕರಿಸಿ ಎಂಬ ಆರಕ್ಷಕರು ಜನಸ್ನೇಹಿಯಾಗುತ್ತಿದ್ದಾರೆ.
ದಂಡ ಹಾಕುವ ಮೊದಲು ದಾಖಲೆ ಸರಿಪಡಿಸಿಕೊಳ್ಳಲು ಅವಕಾಶ:’

ಶನಿವಾರ ಸಂಜೆ ವಾಹನಗಳನ್ನು ತಪಾಸಣೆ ಮಾಡಿಸೂಕ್ತ ದಾಖಲೆ, ವಿಮೆ, ಹಾಗೂ ಶಿರಸ್ತ್ರಾಣ ಧರಿಸದ ವಾಹನ ಸವಾರರ ವಾಹನಗಳನ್ನು ವಶಕ್ಕೆ ಪಡೆದಿರುವ ಆರಕ್ಷಕರು ಸೋಮವಾರ ಬೆಳಗ್ಗೆ ನಿಮ್ಮ ದಾಖಲೆಗಳನ್ನು ಸಲ್ಲಿಸಿ ನಿಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಬಹುದು ಉದಾಹರಣೆಗೆ ವಾಹನದ ವಿಮೆ ಇಲ್ಲದಿದ್ದರೆ ಮಾಡಿಸಿ, ಹೆಲ್ಮೆಟ್ ರಿಯಾಯಿತಿ ದರದಲ್ಲಿ ಸಿಗುತ್ತದೆ ಜೊತೆಗೆ ಚಾಲನ ಪರವಾನಗಿ ಇಲ್ಲದಿದ್ದರೆ ಅದನ್ನು ಮಾಡಿಸಿಕೊಳ್ಳಿ ಎಂದು ತಿಳಿಸಿದ್ದು ಮುಂದೆ ಕಾನೂನು ಬಿಗಿಯಾಗಲಿದ್ದು ಈ ಸಂದರ್ಭದಲ್ಲಿ ತಮ್ಮ ವಾಹನಗಳ ದಾಖಲೆಗಳನ್ನು ಸರಿಪಡಿಸಿಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ದಂಡ ಕಟ್ಟಲೇಬೇಕಾದ ಎಂದು ಎಚ್ಚರಿಸಿದ್ದಾರೆ.
ವಿದ್ಯಾರ್ಥಿ, ಯುವಕರು ಒಂದೇ ವಾಹನದಲ್ಲಿ 3-4 ಜನ ಕುಳಿತುಕೊಂಡು ಪ್ರಯಾಣಿಸುವುದು, ಅತಿವೇಗದ ಚಾಲನೆ, ವ್ಹೀಲಿಂಗ್ ಮಾಡಲು ಹೋಗಿ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಇಂತಹವರ ಬಗ್ಗೆ ಪೋಷಕರು ಎಚಚರವಹಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀ ಕಲ್ಪಶ್ರೀ ಸಂಜೀವಿನಿ ಸೇವಾಟ್ರಸ್ಟ್ ಸಹಕಾರ :ರಸ್ತೆ ಸುರಕ್ಷತಾ ಪ್ರಚಾರ ಕಾರ್ಯಕ್ರಮ ಭಾರತೀಯ ರಸ್ತೆಗಳಲ್ಲಿ ಪ್ರತಿದಿನ ಸಂಭವಿಸುವ ರಸ್ತೆ ಅಪಘಾತಗಳಿಂದ ಮಾನವನ ಪ್ರಾಣ ಮತ್ತು ಕೈಕಾಲುಗಳನ್ನು ಕಳೆದುಕೊಳ್ಳುವುದನ್ನು ಸಂಪೂರ್ಣವಾಗಿ ತಪ್ಪಿಸಬಹುದಾಗಿದೆ.
ಭಾರತದಲ್ಲಿ ಪ್ರತಿ ನಿಮಿಷಕ್ಕೆ ಒಂದು ರಸ್ತೆ ಅಪಘಾತ ಮತ್ತು ಪ್ರತಿ 4 ನಿಮಿಷಕ್ಕೆ ಒಂದು ಮಾರಣಾಂತಿಕ ಅಪಘಾತ ಸಂಭವಿಸುತ್ತದೆ. ಅಪಘಾತವು ಅನಿರೀಕ್ಷಿತವಾಗಿ ಸಂಭವಿಸುವ ಘಟನೆಯಾಗಿದ್ದು, ಶೇಕಡ 90ರಷ್ಟು ಮರಣಗಳು ಅಪಘಾತದಿಂದಾಗಿ ಸಂಭವಿಸುತ್ತವೆ ಹಾಗೂ ಈ ಅಪಘಾತದಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ಕೊಡುಗೆ ಪ್ರತಿಶತ 50 ರಷ್ಟುಇರುತ್ತದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 1.50 ಲಕ್ಷದಷ್ಟು ಜನರು ರಸ್ತೆ ಅಪಘಾತಗಳಲ್ಲಿ ಮೃತರಾಗಿದ್ದು, ಇದರಿಂದಾಗಿ ಮೃತರ ಅವಲಂಬಿತ ಕುಟುಂಬಗಳು ಆರ್ಥಿಕ ಹೊರೆ ಮತ್ತು ಚಿಂತಾಜನಕ ಪರಿಸ್ಥಿತಿಯನ್ನು ಅನುಭವಿಸುತ್ತಿರುತ್ತಾರೆ. ಆದ್ದರಿಂದ ರಸ್ತೆಯ ಅಪಘಾತಗಳನ್ನು ತಪ್ಪಿಸಲು ನಿಯಮಗಳನ್ನು ಪಾಲಿಸಿ ಎಂದು ಶ್ರೀ ಕಲ್ಪಶ್ರೀ ಸಂಜೀವಿನಿ ಸೇವಾಟ್ರಸ್ಟ್ ಸಹಕಾರ ಹಳ್ಳಿಹಳ್ಳಿಗಳಿಗೆ ತೆರಳಿ ಪ್ರಚಾರಮಾಡುವುದಾಗಿ ಸಂಸ್ಥೆ ತಿಳಿಸಿದೆ.

ಎಲ್ಲಾ ವಿಮಾಕಂಪನಿಗಳು ವಿದೇಶದವುಗಳಾಗಿದ್ದು ಎಲ್ಲಾ ಗೂಗಲ್ ಮತ್ತು ಅಂತರ್ಜಾಲದಲ್ಲೇ ನೋಡುತ್ತಾರೆ ಮೊದಲಾದರೆ ನಾವುಗಳು ನಾಗರೀಕರ ಗೋಳನ್ನು ನೋಡಲಾಗದೇ ವಾಹನಗಳನ್ನು ಅದಲು ಬದಲು ಮಾಡಿ ಅನುಕೂಲವನ್ನು ಮಾಡಿಕೊಡುತ್ತಿದ್ದ ಕಾಲವೊಂದಿತ್ತು ಆದ್ದರಿಂದ ಎಲ್ಲರೂ ವಿಮೆಯನ್ನು ಮಾಡಿಸುವುದರ ಜೊತೆಗೆ ನಮ್ಮ ವಾಹನ ದದೃಢತೆಯ ಪ್ರಮಾಣವನ್ನುಇ ಟ್ಟುಕೊಂಡಿದ್ದರೆ ಮಾತ್ರ ವಿಮೆ ಬರುತ್ತದೆ ಎಂದು ತಿಳಿಸಿದರು.
-ಲೋಕೇಶ್ವರ್ ನಿವೃತ್ತ ಎ.ಸಿ.ಪಿ
ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಎಲ್ಲರೂ ಚಾಲನ ಪರವಾನಗಿ, ವಾಹನದ ವಿಮೆ, ವಾಹನದ ದೃಢತೆ ಪ್ರಮಾಣ ಪತ್ರವನ್ನು ಇಟ್ಟುಕೊಂಡು ರಸ್ತೆ ಸುಕ್ಷತಾ ನಿಮಯವನ್ನು ಪಾಲಿಸಿ ಅಪಘಾತವನ್ನು ಕಡಿಮೆ ಮಾಡಿಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ, ಆ ನಿಟ್ಟಿನಲ್ಲಿ ಇಂತಹ ವಿನೂತನ ಕಾರ್ಯಕ್ರಮ ಮಾಡುತ್ತಿದ್ದೇವೆ.
-ಚಂದನ್‍ಕುಮಾರ್, ಡಿ.ವೈ.ಎಸ್ಪಿ, ತಿಪಟೂರು
ಹೆಚ್ಚಿನ ಅಪಘಾತಗಳಲ್ಲಿ ಮನೆಯು ದುಡಿಯುವ ವ್ಯಕ್ತಿಯನ್ನು ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ ಅಪಘಾತದ ನಂತರ ಆಮನೆಯ ಪರಿಸ್ಥಿತಿಯನ್ನು ನೋಡಲಾಗುವುದಿಲ್ಲ ಆದರಿಂದ ಜಾಗೃತೆಯಾಗಿ ವಾಹನ ಚಲಾಯಿಸುವುದರ ಜೊತೆಗೆ ವಿಮೆ ಮತ್ತು ವಾಹನದ ದೃಢತೆ ಪ್ರಮಾಣ ಪತ್ರವು ಸರಿಯಾಗಿರಬೇಕು.
-ಕೃಷ್ಣಕುಮಾರ್, ಪಿ.ಎಸ್.ಐ, ತಿಪಟೂರು ಗ್ರಾಮಾಂತರಠಾಣೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








