ತಿಪಟೂರು : ರಿಪ್ರೆಶರ್ ಪ್ರೋಗ್ರಾಮ್‍ನಿಂದ ಜ್ಞಾನಶಕ್ತಿ ಹೆಚ್ಚಳ

 ತಿಪಟೂರು : 

      ರಿಪ್ರೆಶರ್ ಪ್ರೋಗ್ರಾಮ್‍ನಂತಹ ಕಾರ್ಯಕ್ರಮಗಳು ಇಂಜಿನಿಯರ್ ಕಾಲೇಜಿನ ಉಪನ್ಯಾಸಕರುಗಳಿಗೆ ಬಹಳ ಉಪಯೋಗವಾಗುತ್ತವೆ ಮತ್ತು ಈ ಕಾರ್ಯಕ್ರಮದಿಂದ ನುರಿತ ಉಪನ್ಯಾಸ ನೀಡುವುದರಿಂದ ಉಳಿದ ಉಪನ್ಯಾಸಕರುಗಳು ಕೂಡ ತಮ್ಮ ಜ್ಞಾನಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ ಎಂದು ಐ.ಐ.ಟಿ ಧಾರವಾಡದ ರಿಜಿಸ್ಟ್ರಾರ್ ಡಾ.ಬಸವರಾಜಪ್ಪ ತಿಳಿಸಿದರು.

      ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದಿಂದ 4 ವಾರಗಳ ಕಾಲ ನಡೆದ ಎಐಸಿಟಿಇ-ಐಎಸ್‍ಟಿಇ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ತನ್ನ ಉಪನ್ಯಾಸಕರುಗಳಿಗೆ ತಮ್ಮ ವಿಷಯವಾರು ಬೋದಿಸಲು ಸಹಕಾರ ಮಾಡಿಕೊಡುತ್ತದೆ. ಇದಕ್ಕೆ ಸಂಸ್ಥೆ, ಕಾಲೇಜು ಮತ್ತು ವಿಭಾಗವನ್ನು ಅಭಿನಂದಿಸಿದರು.

     ಪ್ರೊ ವಿಜಯ್ ಡಿ ವೈದ್ಯ ಮಾತನಾಡಿ, ನವದೆಹಲಿಯಿಂದ ಆನ್‍ಲೈನ್ ಮೂಲಕ ಹಾಜರಾಗಿ ಎಐಸಿಟಿಇ-ಐಎಸ್‍ಟಿಇ ರೀತಿಯ ಅನುದಾನವನ್ನು ಪ್ರತಿ ವರ್ಷವು ಪ್ರತಿ ಕಾಲೇಜಿಗೆ ಕೊಡುತ್ತಾ ಬಂದಿದ್ದು ಇದರ ಅನುದಾನ ಅಡಿಯಲ್ಲಿ ಕಲ್ಪತರು ತಾಂತ್ರಿಕ ಮೆಕ್ಯಾನಿಕಲ್ ವಿಭಾಗವು ಆಯ್ಕೆಯಾಗಿ ಇದನ್ನು ಯಶಸ್ವಿಯಾಗಿ ಮುಗಿಸಲಿ ಎಂದು ಹಾರೈಸಿ, ಈ ಕಾರ್ಯಕ್ರಮ ಯುವ ಉಪನ್ಯಾಸಕರುಗಳಿಗೆ ತುಂಬಾ ಸಹಕಾರಿಯಾಗುತ್ತದೆ ಎಂದು ತಿಳಿಸಿದ ಅವರು ಇದರ ಉಪಯೋಗವನ್ನು ದೇಶದ ಪ್ರತಿಯೊಬ್ಬ ಉಪನ್ಯಾಸಕರು ಉಪಯೋಗ ಪಡೆದುಕೊಳ್ಳುವಂತಾಗಲಿ ಎಂದರು.

      ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ತಿಪ್ಪೇರುದ್ರಪ್ಪ ಮಾತನಾಡಿ, ಮೆಕ್ಯಾನಿಕಲ್ ವಿಭಾಗವು ಉಪನ್ಯಾಸಕರುಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಈ ಕಾರ್ಯಕ್ರಮದಲ್ಲಿ ದೇಶವಿದೇಶದ ಪ್ರತಿಭಾನ್ವಿತ ಉಪನ್ಯಾಸಕರು ಭಾಗವಹಿಸುತ್ತಿದ್ದಾರೆ ಇವರಿಂದ ವಿಷಯಗಳನ್ನು ವಿನಮಯಮಾಡಿಕೊಂಡು ವಿದ್ಯಾರ್ಥಿಗಳನ್ನು ದೇಶದ ಸಂಪನ್ಮೂಲ ವ್ಯಕ್ತಿಗಳಾಗಿ ಮಾಡಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸವನ್ನು ಉಪನ್ಯಾಸಕರು ಮಾಡಬೇಕೆಂದು ಕರೆನೀಡಿದರು.

     ಸಂಸ್ಥೆಯ ಕಾರ್ಯದರ್ಶಿ ಪ್ರೊ. ರಾಜ್‍ಕುಮಾರ್ ಮಾತನಾಡಿ, ಎಐಸಿಟಿಇ-ಐಎಸ್‍ಟಿಇ ಯ ಅನುದಾನಕೊಟ್ಟಿರುವುದಕ್ಕೆ ಅಭಿನಂದಿಸಿ ಥರ್ಮಲ್ ಇಂಜಿನಿಯರಿಂಗ್ ವಿಭಾಗವು ಮೆಕ್ಯಾನಿಕಲ್ ಭಾಗವಾಗಿದ್ದು ಈ ವಿಷಯವು ರಿಫ್ರಿಜಿರೇಟರ್, ವಿದ್ಯುತ್ ಉತ್ಪಾದನೆ, ಹವಾನಿಯಂತ್ರಿತ ತಂತ್ರಜ್ಞಾನದಲ್ಲಿ ಬಹಳ ಉಪಯೋಗವಾಗುತ್ತದೆ ಇದನ್ನು ಉಪನ್ಯಾಸಕರಾಧಿಯಾಗಿ ಎಲ್ಲಾ ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಂಡು ಕಾಲೇಜಿಗೆ ಮತ್ತು ದೇಶಕ್ಕೆ ಕೀರ್ತಿತರಬೇಕೆಂದರು.

      ಕಾರ್ಯಕ್ರಮದಲ್ಲಿ ಖಜಾಂಚಿ ಶಿವಪ್ರಸಾದ್, ಕಾರ್ಯದರ್ಶಿ ಟಿ.ಯು. ಜಗದೀಶ್‍ಮೂರ್ತಿ, ಪ್ರಾಂಶುಪಾಲ ಡಾ. ಜಿ.ಡಿ.ಗುರುಮೂರ್ತಿ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ.ವಿಶ್ವನಾಥ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap