ತಿಪಟೂರು :
ಬಿಸಿಲಿರಲಿ, ಮಳೆಬರಲಿ, ಬರಗಾಲವಿರಲಿ ಕೊರೊನಾದಂತಹ ಕಡುಗಾಲದಲ್ಲೂ ನಮ್ಮ ನಿಮ್ಮ ಕೈಹಿಡಿದ ಕಾಮಧೇನು ಹೈನುಗಾರಿಕೆ ಎಂದು ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದರು.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ಕೆರೆಬಂಡಿಪಾಳ್ಯದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಣ್ಣನ್ನು ನಂಬಿ ಕೆಟ್ಟವರಿಲ್ಲ ಎಂಬ ಗಾದೆ ಮಾತಿನಂತೆ ಇಂದು ಇದಕ್ಕೆ ಪೂರಕವಾಗಿ ಕಾಮಧೇನುವನ್ನು ನಂಬಿ ಕೆಟ್ಟವರಿಲ್ಲವೆನ್ನು ಮಾತು ಕೇಳಿಬರುತ್ತಿದೆ. ನೀವು ಸುಮಾರು 5 ವರ್ಷದಲ್ಲಿ ಸಂಘ ಸ್ಥಾಪಿಸಿ, ನೂತನ ಕಟ್ಟಡದ ಪ್ರಾರಂಭೋತ್ಸವ ಪಾಡುತ್ತಿರುವುದು ತಾಲ್ಲೂಕಿನಲ್ಲೇ ಮೊದಲ ಸಂಘವಾಗಿದೆ. ಹಾಗೂ ನಿಮ್ಮ ಸಂಘದಿಂದ ಉತ್ತಮ ಗುಣಮಟ್ಟದ ಹಾಲನ್ನು ಕಳುಹಿಸುತ್ತಿದ್ದೀರಿ ಮುಂದೆಯೂಇ ದೇರೀತಿ ಹೈನುಗಾರಿಕೆಯನ್ನು ಮಾಡುತ್ತಾ ನೀವು ಬೆಳೆಯುವದೊಂದಿಗೆ ಸಂಘವನ್ನು ಬೆಳೆಸಿ ಎಂದರು.
ಇದೇ ಸಂದರ್ಭದಲ್ಲಿ ಕಟ್ಟಡವನ್ನು ಕಟ್ಟಿದ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶಾಂತಾನಾಯಕ್, ಕೆ.ಎಂ.ಎಫ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕ ಡಾ. ಸುಬ್ರಾಯ್‍ಭಟ್ ಹಾಗೂ ತಾಲ್ಲೂಕು ವಿಸ್ತರಣಾಧಿಕಾರಿಗಳು, ಕೆರೆಬಂಡಿಪಾಳ್ಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಯಣ್ಣ, ಕಾರ್ಯನಿರ್ವಹಣಾಧಿಕಾರಿ ನಟೇಶ್ ಹಾಗೂ ಮತ್ತಿತರರು. ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
