ತಿಪಟೂರು :  ಚಾನಲ್‍ನಲ್ಲಿ ಅಕ್ರಮ ಮರಳು ಸಾಗಾಟ

 ತಿಪಟೂರು : 

     ಇತ್ತೀಚಿನ ದಿನಗಳಲ್ಲಿ ಮರಳು ಸಿಗುವುದು ಅಪರೂಪ. ಆದರೆ ಇದಕ್ಕಾಗಿ ಮರಳು ದಂಧೆಕೋರರು ಹೊಸ ಹಾದಿಯನ್ನು ಹಿಡಿದಿದ್ದು ಈಗ ಹೇಮಾವತಿ ಚಾನಲ್‍ನಲ್ಲಿ ಸಂಗ್ರಹವಾಗಿರುವ ಮರಳನ್ನು ತೆಗೆಯಲು ಹೊರಟಿದ್ದಾರೆ.

      ಕಲ್ಪತರು ನಾಡಿನ ಜೀವನದಿಯಾದ ಹೇಮಾವತಿಯಿಂದ ತುಮಕೂರು ಜಿಲ್ಲೆಯ ತಿಪಟೂರು, ಕುಣಿಗಲ್, ತುರುವೇಕೆರೆ, ಶಿರಾ, ಗುಬ್ಬಿ ಹಾಗೂ ತುಮಕೂರು ನಗರಕ್ಕೆ ನೀರೊದಗಿಸುವ ಹೇಮಾವತಿನಾಲೆಯಲ್ಲಿ ಸದ್ಯಕ್ಕೆ ನೀರು ಹರಿಯುತ್ತಿಲ್ಲ. ನೀರು ಹರಿಯಬೇಕಾದರೆ ಚಾನೆಲ್‍ನ ತಳಭಾಗದಲ್ಲಿ ಸಂಗ್ರಹವಾಗುವ ಮರಳಿನ ಗುಡ್ಡೆಗಳನ್ನು ಮಾಡಿ ರಾತ್ರೋರಾತ್ರಿ ಟ್ರ್ಯಾಕ್ಟರ್‍ಅನ್ನು ಚಾನೆಲ್ ಒಳಗೆ ಇಳಿಸಿ ಅಕ್ರಮವಾಗಿ ಮರಳನ್ನು ಸಂಗ್ರಹಮಾಡುತ್ತಿದ್ದು ಇದರಿಂದ ಚಾನೆಲ್‍ಗೆ ಧಕ್ಕೆಯಾಗುತ್ತದೆಂದು ಸ್ಥಳಿಯರು ತಿಳಿಸಿದ್ದಾರೆ.

     ಈ ಅಕ್ರಮ ಮರಳು ದಂಧೆ ತಿಪಟೂರು ತಾಲೂಕಿನ ನರಸಿಕಟ್ಟೆ ಹತ್ತಿರದ ಹೇಮಾವತಿ ನಾಲೆಯಲ್ಲಿ ನಡೆಯುತ್ತಿದ್ದು, ಮರಳು ಲೂಟಿ ಮಾಡಿ ಬೇರೆ ಹಳ್ಳಿ ಹಾಗೂ ನಗರಗಳಿಗೆ ಮಾರಾಟ ಮಾಡುತ್ತಿದ್ದಾರೆ. ಮನೆ ಮುಂದೆ ಲೋಡುಗಟ್ಟಲೆ ಮರಳು ಕೂಡಿ ಹಾಕಿಕೊಂಡಿದ್ದಾರೆ. ಇದನ್ನು ನೋಡಿದ ಅಧಿಕಾರಿಗಳು ಏನು ಮಾಡುತ್ತಿಲ್ಲವೆಂದು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳದೆ ಹೋದರೆ ಬಾರಿ ಅನಾಹುತ ಆಗುವುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link