ತಿಪಟೂರು :
ಒಂದು ಕಡೆ ಶಿವರಾತ್ರಿಯ ಆಚರಣೆಯಲ್ಲಿ ತೊಡಗಿದ್ದ ಭಕ್ತರು ಹೂವು, ಹಣ್ಣು, ಎಳನೀರು, ಮತ್ತಿರ ವಸ್ತುಗಳನ್ನು ಕೊಳ್ಳುತ್ತಿದ್ದರೆ, ಇತ್ತ ನಗರದ ತ್ರಿಮೂರ್ತಿ ಚಿತ್ರಮಂದಿರದಲ್ಲಿ ಚಿತ್ರನಟ ದರ್ಶನ್ ಭಾವಚಿತ್ರ ಅಭಿಮಾನಿಗಳು ಮದ್ಯಾಭಿಷೇಕ ಮಾಡಿ ಕೆಲವರಿಗೆ ಮುಜುಗರ ಉಂಟುಮಾಡಿದರು.
ಚಲನ ಚಿತ್ರ ನಟನ ಅಭಿಮಾನಕ್ಕಿಂತ ಅಂಧಾಭಿಮಾನವನ್ನು ತೋರಿಸಲು ಹೋಗಿ ಅತಿರೇಖದ ವರ್ತನೆಯಿಂದ ಟೀಕೆಗೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಭಾವಚಿತ್ರಕ್ಕೆ ಮದ್ಯಾಭಿಷೇಕ ಮಾಡಿದ್ದನ್ನು ಸಾರ್ವಜನಿಕರು ಟೀಕಿಸಿದ್ದಾರೆ.
ಥಿಯೇಟರ್ ಬಳಿಯೇ ಕುಡಿದು ದರ್ಶನ್ ಭಾವಚಿತ್ರಕ್ಕೆ ಬಿಯರ್ನಿಂದ ಅಭೀಷೇಕ ಮಾಡಿ ಅಭಿಮಾನಿಗಳು ವಿಕೃತಿಯನ್ನು ಮೆರೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ