ತಿಪಟೂರು ; ಧರಣಿ ಮಾಡಿದವರಿಗೆ ಈ- ಸ್ವತ್ತು

 ತಿಪಟೂರು : 

      ನಗರಸಭೆಯಲ್ಲಿ ಈ- ಸ್ವತ್ತು ಪಡೆಯಲು ಹರಸಾಹಸ ಪಡುತ್ತಿದ್ದ ಜನತೆಗೆ ಅಣ್ಣಾಪುರ ವಾಸಿ ರಮೇಶ್ ಎಂಬ ವ್ಯಕ್ತಿಯು ಧರಣಿ ಪ್ರಾರಂಭಿಸಿದ ಕೆಲಹೊತ್ತಿನಲ್ಲೆ ಈ- ಖಾತೆಯನ್ನು ಪಡೆದು ನಗರದ ನಾಗರಿಕರಿಗೆ ಹೊಸ ದಾರಿಯನ್ನು ಹುಡುಕಿಕೊಟ್ಟಿದ್ದಾರೆ.

      ಸೋಮವಾರ ಬೆಳಗ್ಗೆ ನಗರಸಭೆ ಆವರಣದಲ್ಲಿ ಈ- ಸ್ವತ್ತು ಖಾತಾಗಾಗಿ ಸ್ವತ್ತಿನ ಮಾಲೀಕ ರಮೇಶ್ ತನ್ನ ಹೆಂಡತಿ ಮಕ್ಕಳೊಂದಿಗೆ ಮೌನ ಪ್ರತಿಭಟನೆ ಮಾಡಿದರು. ತಿಪಟೂರು ನಗರಸಭೆ ವ್ಯಾಪ್ತಿ ವಾರ್ಡ ನಂ-11 ಅಣ್ಣಾಪುರ ವ್ಯಾಪ್ತಿ ನಿವೇಶನ ಸಂಖೈ 28-3-253 ಸ್ವತ್ತಿಗೆ ಕೇಳಿದ ದಾಖಲೆಗಳನ್ನು ಕೊಟ್ಟು 3 ತಿಂಗಳುಗಳು ಕಳೆದರು ಸಹ ಈ- ಸ್ವತ್ತು ಖಾತೆಯನ್ನು ಮಾಡಿಕೊಟ್ಟಿರಲಿಲ್ಲ. ಇದರ ಬಗ್ಗೆ ಹಲವಾರು ಬಾರಿ ಖಾತಾ ಮಾಡಿಕೊಡಲು ಸತಾಯಿಸುತ್ತಿದ್ದು, ತನ್ನ ವೈಯಕ್ತಿಕ ಸಾಲ ಸಮಸ್ಯೆ ಹಾಗೂ ಮತ್ತಿತರ ಕಾರಣಗಳಿಂದ ನೊಂದು ನಗರ ಸಭೆ ಕಛೇರಿ ಆವರಣದಲ್ಲಿ ತಮ್ಮ ಕುಟುಂಬ ಸಮೇತ ಮೌನ ಪ್ರತಿಭಟನೆ ಮಾಡಲು ಪ್ರಾರಂಭಿಸಿದ್ದರು. ಅವರು ಪ್ರತಿಭಟನೆ ಪ್ರಾರಂಭಿಸಿದ ಕೆಲಹೊತ್ತಿನಲ್ಲೇ ಸ್ಥಳಕ್ಕೆ ಪೌರಯುಕ್ತ ಉಮಾಕಾಂತ್, ನಗರಸಭೆ ಅಧ್ಯಕ್ಷ ರಾಮ್ ಮೋಹನ್ ಭೇಟಿ ನೀಡಿ ಸಮಾಧಾನ ಪಡಿಸಿ ಕೆಲವೇ ನಿಮಿಷದಲ್ಲಿ ಈ ಖಾತಾ ಮಾಡಿಸಿಕೊಟ್ಟಿರುವ ಕುರಿತು ಪ್ರತಿಭಟನಾ ನಿರತ ರಮೇಶ್ ತಿಳಿಸಿದ್ದಾರೆ.

      ಈ ಬಗ್ಗೆ ಉತ್ತರಿಸಿದ ನಗರಸಭೆ ಆಯುಕ್ತ, ನಾವು ಯಾವುದೇ ಇ ಖಾತೆಯನ್ನು ಸುಖಾಸುಮ್ಮನೆ ಇಟ್ಟುಕೊಳ್ಳುವುದಿಲ್ಲ. ನಮಗೂ ಕೆಲಸದ ಹೊರೆಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ ಕೆಲವು ಕಾರ್ಯಭಾರಗಳ ಒತ್ತಡದಿಂದ ಹಾಗೂ ಸೂಕ್ತ ದಾಖಲೆ ಮತ್ತು ಮಾಹಿತಿ ಕೊರತೆ ಇರುವ ಈ ಸ್ವತ್ತುಗಳನ್ನು ಮಾಡಲಾಗಿಲ್ಲ ಎಂದು ತಿಳಿಸಿದ ಅವರು, ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಈ ರೀತಿಯಾಗುತ್ತಿದೆ. ಏನೆ ಸಮಸ್ಯೆ ಇದ್ದರೂ ನೇರವಾಗಿ ನಮ್ಮನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

     ಪ್ರತಿಭಟನೆಯ ಸ್ಥಳದಲ್ಲಿದ್ದ ನಾಗರಿಕರು ನಗರಸಭೆಯ ಕಛೇರಿಯಲ್ಲಿ ಸಾವಿರಾರು ಈ ಖಾತಾಗಳು ಬಾಕಿ ಇದ್ದು, ಎಲ್ಲರೂ ಹೀಗೆಯೆ ಧರಣಿ ಕೂತರೆ ಈ ಖಾತಾ ಸಿಗುತ್ತದೆ, ನಾವೂ ಕೂಡ ಇದೇ ರೀತಿ ಧರಣಿ ಕುಳಿತು ಈ ಖಾತೆ ಮಾಡಿಸಿಕೊಳ್ಳಬೇಕೆಂದು ಮಾತನಾಡಿಕೊಳ್ಳುತ್ತಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link