ತಿಪಟೂರು :  ಕೊನೆಗೂ ಸಿಕ್ಕಿಬಿದ್ದ ಚಾಲಾಕಿ ಚಾಲಕ

 ತಿಪಟೂರು : 

     ಹಲವಾರು ಗ್ರಾಮಗಳಲ್ಲಿನ ಡೈರಿಗಳಿಂದ ಹಾಲು ಸಂಗ್ರಹಿಸಿ ತಾನು ಹಣ ಮಾಡಿಕೊಳ್ಳುವ ಉದ್ದೇಶದಿಂದ ರೈತರಿಂದ ಸಂಗ್ರಹವಾದ ಹಾಲಿಗೆ ನೀರು ಬೆರಸಲು ಹೋದ ಸಂದರ್ಭದಲ್ಲಿ ರೈತರ ಕೈಗೆ ಸಿಕ್ಕ ಘಟನೆ ತಾಲ್ಲೂಕಿನಲ್ಲಿ ಜರುಗಿದೆ.

      ತಾಲ್ಲೂಕಿನ ಖಾಸಗಿ ಹಾಲಿನಡೇರಿಯ ವಾಹನದ ಸಂಖ್ಯೆ ಕೆ.ಎ13 ಸಿ 7073 ಎಂಬ ವಾಹನದಲ್ಲಿ ಸುಮಾರುಐದು ತಿಂಗಳಿಂದ ಹಲವಾರುಹಾಲಿನ ಡಬ್ಬದಿಂದ ಹಾಲನ್ನುತೆಗೆದುಯಾರಿಗೂ ತಿಳಿಯದಂತೆ ಅಷ್ಟೇ ಪ್ರಮಾಣದನೀರನ್ನು ಬೆರಸಿ ಮತ್ತೊಂದು ಹೊಸದಾದಗ್ರಾಮದ ಹೆಸರಿನಲ್ಲಿಗ್ರಾಮದ ಹೆಸರಿಗೆಒಂದುಕ್ಯಾನ್‍ಮಾಡಿಕೊಂಡುಪ್ರತಿದಿನ ಸುಮಾರು 25 ರಿಂದ 30 ಲೀಟರ್ ಹೆಚ್ಚುವರಿ ಹಾಲು ಕಲಬೆರೆಕೆ ಮಾಡಿಕೊಂಡಿರುತ್ತಾನೆ. ಇದರಿಂದ ಹಲವಾರುಗ್ರಾಮಗಳ ಶೇಖರಣೆದಾರರಿಗೆ ಮೋಸ ಮಾಡುತ್ತಿದ್ದು ಲಕ್ಷಾಂತರರೂಪಾಯಿ ನಷ್ಟ ಮಾಡಿರುತ್ತಾನೆ.

      ಗ್ರಾಮಗಳಲ್ಲಿ ಹಾಲು ಖರೀದಿಸಿ ವಾಹನಕ್ಕೆ ಕಳುಹಿಸಿದ ಮೇಲೆ ವಾಹನದ ಚಾಲಕಿ ಚಾಲಕನು ಹಾಲು ಖರೀದಿಯಕೊನೆಯಗ್ರಾಮದಲ್ಲಿ ಹಾಲಿನ ಡಬ್ಬದಲ್ಲಿಇರುವ ಹಾಲು ತೆಗೆದುನೀರು ಹಾಕುತ್ತಿರುವಾಗಅಂಚೆಕೊಪಲು ಗ್ರಾಮಸ್ಥರಿಗರ ಸಿಕ್ಕಿಬಿದ್ದಿದ್ದಾನೆ.

      ಈ ಬಗ್ಗೆ ಹಾಲು ಶೇಖರಣೆದಾರಕಿರಣ್‍ತಿಳಿಸುವಂತೆ ಕೊರೊನಾಕಷ್ಟಕಾಲದಲ್ಲಿರೈತರಕೈಹಿಡಿದಿರುವ ಹೈನುಗಾರಿಕೆಯಲ್ಲಿಇಂತಹ ಮೋಸಗಳಾದರೆ ರೈತರು ಬದುಕುವುದಾದರು ಹೇಗೆ, ನಾವು ನಿತ್ಯರೈತರಿಂದಉತ್ತಮಗುಣಮಟ್ಟದ ಹಾಲು ಖರೀದಿ ಮಾಡಿ ವಾಹನದಲ್ಲಿ ಕಳುಹಿಸುತ್ತಿದ್ದೆವು ಆದರೂ ಸಹ ಮೇಲಾಧಿಕಾರಿಗಳು ಹಾಲಿನ ಗುಣಮಟ್ಟ ಕಳಪೆ ಇದೆಎಂದು ಪ್ರತಿ ಲೀಟರ್‍ಗೆ 4 ರಿಂದ 5 ರೂಗಳನ್ನು ಹಣ ಸಂದಾಯ ಮಾಡುತ್ತಿದ್ದರುಇದರಿಂದ ನಾವುಗಳು ಬೇಸತ್ತು ಹೋರಟಾಗಚಾಲಕನೇ ಕಳ್ಳತನ ಮಾಡುತ್ತಿರುವುದುಕಂಡುಬಂದಿದೆ. ಇದರಿಂದ ನಾವುಗಳು ಸುಮಾರು ಲಕ್ಷಾಂತರ ರೂಪಾಯಿಗಳ ನಷ್ಟವನ್ನು ಅನುಭವಿಸಿದ್ದೇವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link