ತಿಪಟೂರು :

ನಗರಸಭೆಯ 31ನೇ ವಾರ್ಡ್ನಲ್ಲಿ ಕಳೆದ 3 ಚುನಾವಣೆಯಗಳಲ್ಲೂ ಜೆ.ಡಿ.ಎಸ್. ವಿಜಯವಾಗಿತ್ತು. ಆದರೆ ಈ ಬಾರಿ ಈ ವಾರ್ಡ್ನಲ್ಲಿ ಜೆ.ಡಿ.ಎಸ್ ಭದ್ರಕೋಟೆಯನ್ನು ಭೇದಿಸಲು ಕೈ, ಕಮಲ ತಯಾರಾಗಿದ್ದು ಯಾರು ಗೆಲ್ಲುತ್ತಾರೆ ಎಂಬುದನ್ನು ಕಾಯ್ದು ನೋಡಲಾಗಿದೆ.
ತಿಪಟೂರು ನಗರಸಭೆಯ 31ನೇ ವಾರ್ಡ್ನಲ್ಲಿ ಉಪಚುನಾವಣೆಗೆ 931 ಮತಗಳನ್ನು ಹೊಂದಿದ್ದು 2019ರಲ್ಲಿ ನಡೆದ ಚುನಾವಣೆಯಲ್ಲಿ ಇಲ್ಲಿಂದ ಸ್ಪರ್ಧಿಸಿದ್ದ ಜೆ.ಡಿ.ಎಸ್ನ ಸರೋಜಮ್ಮನವರ ಅಕಾಲಿಕ ನಿಧನದಿಂದ ಮತ್ತೆ ಮರುಚುನಾವಣೆ ನಡೆಯಿತು ಇದಲ್ಲದೇ ಕಳೆದ 2 ಬಾರಿಯು ಜೆ.ಡಿ.ಎಸ್ ತನ್ನ ಹಿಡಿತದಲ್ಲೇ ಇಟ್ಟುಕೊಂಡಿದ್ದು ಜೆ.ಡಿ.ಎಸ್ ಈ ಕ್ಷೇತ್ರದಲ್ಲಿ ಹೆಚ್ಚಿನದಾಗಿದ್ದೆ ಎಂದು ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಶಿವಸ್ವಾಮಿ ತಿಳಿಸಿರುತ್ತಾರೆ.
ನಾವಿಕನಿಲ್ಲದ ದೋಣಿಯಂತಾದ ಜೆ.ಡಿ.ಎಸ್ :
ಈ ಬಾರಿ ಚುನಾವಣೆಯನ್ನು ಎದುರಿಸಿದ ಜೆ.ಡಿ.ಎಸ್ ನಾವಿಕನಿಲ್ಲದ ದೋಣಿಯಂತಾಗಿರುವುದಲ್ಲದೇ ಕಳೆದ ಬಾರಿ ಜೆ.ಡಿ.ಎಸ್ ನಾಯಕರಾಗಿದ್ದ ಲೋಕೇಶ್ವರ್ ಈಗ ಬಿ.ಜೆ.ಪಿ ಮುಖಂಡರಾಗಿದ್ದಾರೆ. ಇವರ ಜೊತೆ ಇದ್ದು ನಗರಸಭೆ ಚುನಾವಣೆಯಲ್ಲಿ ಗೆದ್ದಿದಂತಹ ಜೆ.ಡಿ.ಎಸ್.ನ ನಗರಸಭೆ ಸದಸ್ಯರುಗಳು ಈಗ ಲೋಕೇಶ್ವರ್ರವರ ಹಿಂದೆ ಹೋಗಿ ಬಿ.ಜೆ.ಪಿಗೆ ಸೇರ್ಪಡೆಯಾಗಿದ್ದು ಬಿ.ಜೆ.ಪಿ ಅಭ್ಯರ್ಥಿಯ ಪರವಾಗಿ ಮತಯಾಚನೆಯಲ್ಲಿ ತೊಡಗಿದ್ದರು. ಇನ್ನು ಜೆ.ಡಿ.ಎಸ್ ಅಧ್ಯಕ್ಷರಾಗಿದ್ದ ತರಕಾರಿ ನಾಗರಾಜು ಬಿ.ಜೆ.ಪಿ ಜತೆಹೋಗಿ ಎ.ಪಿ.ಎಂ.ಸಿ ಉಪಾಧ್ಯಕ್ಷರಾಗಿದ್ದಾರಲ್ಲದೇ ಜೆ.ಡಿ.ಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಇದಲ್ಲದರ ನಡುವೆಯು 31ನೇ ವಾರ್ಡ್ನ ಚುನಾಣೆಗೆ ತಮ್ಮ ಪಕ್ಷದ ಅಭಿವೃದ್ಧಿಯನ್ನೇ ನಂಬಿಕೊಂಡಿರುವ ದೀಪಿಕಾ ನಟರಾಜ್ ಇನ್ನು ಹೆಚ್ಚಿನ ಅಭಿವೃದ್ಧಿಗಾಗಿ ಜೆ.ಡಿ.ಎಸ್ಗೆ ಮತನೀಡಿ ಎಂದು ಮತಬೇಡಿದರು.
ಸ್ಥಾನಕ್ಕಾಗಿ ಕೈ, ಕಮಲ ಪೈಪೋಟಿ :
ಗೊರಗೊಂಡನಹಳ್ಳಿಯ 31ನೇ ವಾರ್ಡ್ ಚುನಾವಣೆ ನಗರಸಭೆ ಆಡಳಿತ ಪಕ್ಷ ಬಿ.ಜೆ.ಪಿ ಗೆ ಪ್ರತಿಷ್ಠೆಯ ಕಣವಾಗಿದ್ದು ಗೆಲ್ಲಲ್ಲೇಬೇಕೆಂದು ಶಾಸಕ ಬಿ.ಸಿ.ನಾಗೇಶ್ ಹಾಗೂ ಬಿ.ಜೆ.ಪಿ ಮುಖಂಡ ಲೋಕೇಶ್ವರ್ ಬಿರುಸಿನ ಪ್ರಚಾರವನ್ನು ನಡೆಸಿದ್ದಲ್ಲದೇ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರುಗಳು ಮತದಾನ ಕೇಂದ್ರದಬಳಿ ಮೊಕ್ಕಾಂ ಹೂಡಿದ್ದು ಮತಸೆಳೆಯುತ್ತಿದ್ದುದು ಸಾಮಾನ್ಯವಾಗಿತ್ತು.
ಇನ್ನೂ ಕಾಂಗ್ರೆಸ್ ಮಾಜಿ ಶಾಸಕರಾದ ಕೆ.ಷಡಕ್ಷರಿ, ತಾ.ಪಂ ಅಧ್ಯಕ್ಷ ಶಿವಸ್ವಾಮಿ, ತಾ.ಪಂ ಹಾಗೂ ನಗರಸಭೆ ಸದಸ್ಯರುಗಳು ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಕಿರಿಯ ಸದಸ್ಯರೆಲ್ಲರೂ ಸೇರಿ ಮತ ಬೇಟಿಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ ಆಡಳಿತದಿಂದ ಜನರು ರೋಸಿಹೋಗಿದ್ದು. ಕಾಂಗ್ರೆಸ್ ಪಕ್ಷದ ಜನೋಪಯೋಗಿ ಕಾರ್ಯಗಳನ್ನು ಮತ್ತು ಅನ್ನಭಾಗ್ಯ ಯೋಜನೆಯನ್ನು ನೆನೆಯುವದರೊಂದಿಗೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ನಗರಕ್ಕೆ ಸಮರ್ಪಕ ಕುಡಿಯುವ ನೀರಿನ ಯೋಜನೆಯನ್ನು ತಂದಿದ್ದೆ.
ಮತದಾನಕ್ಕೆ ಸೂಕ್ತ ವ್ಯವಸ್ಥೆ :
ಕೊರೊನಾ ಹಾವಳಿಯ ನಡುವೆ ರಾಜ್ಯಸರ್ಕಾರದ ನಿರ್ದೇಶನದಂತೆ ಸೂಕ್ತ ವ್ಯವಸ್ಥೆಯೊಂದಿಗೆ ಮಾಸ್ಕ್ಧರಿಸಿದವರಿಗೆ ಮಾತ್ರ ಮತಕೇಂದ್ರದೊಳಕ್ಕೆ ಬಿಡುವ ಮೊದಲು ಸ್ಯಾನಿಟೈಸಿಂಗ್ ಸರ್ಮಾಡಿ, ಥರ್ಮಲ್ಸ್ಯಾನ್ ಮಾಡುವ ಮುಖಾಂತರ ಮತಚಲಾವಣೆಗೆ ಅವಕಾಶಮಾಡಿಕೊಡಲಾಯಿತು. ವಾರ್ಡ್ನಂ 31ರ ಗೊರಂಡನಹಳ್ಳಿಯಲ್ಲಿ ಶೇಕಡ 86.27ಮತ ಚಲಾವಣೆಯಾಗಿದೆ ಎಂದು ತಮ್ಮ ಅಭಿಪ್ರಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








