ತಿಪಟೂರು : ವಾಟ್ಸ್‍ಆಪ್ ನಿಂದ 9 ದಿನಗಳಿಂದ ತಪ್ಪಿಸಿಕೊಂಡಿದ್ದ ಅಜ್ಜಿ ಪತ್ತೆ!!

 ಹೊನ್ನವಳ್ಳಿ : 

      ಕಳೆದ 9 ದಿನಗಳಿಂದ ತಪ್ಪಿಸಿಕೊಂಡಿದ್ದ ಅಜ್ಜಿ ಯೊಬ್ಬರು ವಾಟ್ಸ್ ಆಪ್‍ನಲ್ಲಿ ಸಂದೇಶ ಕಳುಹಿಸಿದ 4 ಗಂಟೆಗಳಲ್ಲಿ ಅಜ್ಜಿ ಪತ್ತೆಯಾಗಿ ತನ್ನ ಕುಟುಂಬ ಸೇರಿಕೊಂಡ ಘಟನೆ ಜರುಗಿದೆ.

      ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾವಗಲ್ ಹತ್ತಿರದ ಮಾಹುತಹಳ್ಳಿಯ 79 ವರ್ಷದ ನಂಜಮ್ಮ ಕಳೆದ ದಿನಗಳ ಹಿಂದೆ ವೃದ್ದಾಪ್ಯ ವೇತನ ತರುವುದಾಗಿ ಹೇಳಿ ಬ್ಯಾಂಕಿಗೆ ಹೋದ ಸಂದರ್ಭದಲ್ಲಿ ದಾರಿ ತಪ್ಪಿಸಿಕೊಂಡು ಊರೂರು ಅಲೆಯುತ್ತಿತ್ತು.ಈ ಸಂದರ್ಭದಲ್ಲಿ ಮನೆಯವರು ಪತ್ತೆ ಹಚ್ಚುವಲ್ಲಿ ವಿಫಲವಾಗಿ ಇನ್ನೇನು ಸುಮ್ಮನಾಗ ಬೇಕು ಎನ್ನುವ ಹೊತ್ತಿನಲ್ಲಿ ಹೊನ್ನವಳ್ಳಿಯ ನಂಜಪ್ಪ ಹೀಗೊಂದು ಪ್ರಯತ್ನ ಮಾಡೋಣ ಎಂದು ಅಜ್ಜಿಯ ಪೋಟೊ ಮತ್ತು ತನ್ನ ಮೊಬೈಲ್ ನಂಬರ್ ಕಳುಹಿಸಿ ವಾಟ್ಸ್‍ಆಫ್ ಸಂದೇಶವನ್ನು ಕಳುಹಿಸಿದರು.

      ಸಂದೇಶ ಹೋಗುತ್ತಿದ್ದಂತೆಯೆ ನಿನ್ನೆ ಹೊನ್ನವಳ್ಳಿಯಲ್ಲೇ ಇತ್ತು ಇಂದು ಎಲ್ಲಿಹೋಯಿತು ಎಂದು ತಿಳಿಯಷ್ಟರಲ್ಲಿ ತಿಪಟೂರಿನ ಗೋವಿನಪುರದ ಪುಣ್ಯ ಹೋಟೆಲ್‍ನ ಹತ್ತಿರ ಅಜ್ಜಿ ಇದೆ ಎಂದು ಹೋಟೆಲ್ ಮಾಲೀಕ ರೇವಣಸಿದ್ದಯ್ಯ ಅಜ್ಜಿಗೆ ಊಟೋಪಚಾರಮಾಡಿಸಿ ಪತ್ರಕರ್ತ ನಂಜಪ್ಪನಿಗೆ ಕರೆಮಾಡಿ ತಿಳಿಸಿದರು.ತಕ್ಷಣ ಕುಟುಂಬಸ್ಥ ರೊಂದಿಗೆ ಆಗಮಿಸಿ ಅಜ್ಜಿಯನ್ನು ಕುಟುಂಬಸ್ಥರಿಗೆ ಸೇರಿಸಿದ್ದಾರೆ. ಈ ಕಾರ್ಯವು ವಾಟ್ಸ್‍ಆಪ್‍ನಲ್ಲಿ ವೈರಲ್‍ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link