ತಿಪಟೂರು :
ತಾಲ್ಲೂಕಿನಲ್ಲಿ ಬುದವಾರದಿಂದ ಉತ್ತಮ ಮಳೆಯಾಗುತ್ತಿದ್ದು ತಿಪಟೂರು 31.10,ಎಂ.ಎಂ. ಕಸಬಾ 40.15,ಎಂ.ಎಂ. ಹೊನ್ನವಳ್ಳಿ 18.08, ಎಂ.ಎಂ.ಕಿಬ್ಬನಹಳ್ಳಿ 37.33, ಎಂ.ಎಂ.ಹಾಗೂ ನೊಣವಿನಕೆರೆ ಹೋಬಳಿಯಲ್ಲಿ 30.41 ಎಂ.ಎಂ, ಮಳೆಯಾಗಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಮಳೆ ಬಂದು ಒಂದು ಕಡೆ ಹರ್ಷವಾದರೆ ಕಸಬಾ ಹೋಬಳಿ ಶಿವರ ಗ್ರಾಮದಲ್ಲಿ ಮಾತ್ರ ಮಳೆಯು ಮನೆಗಳಿಗೆ ಹಾನಿಮಾಡಿ ಮನೆಯ ಹೆಂಚುಗಳನ್ನು ಕಿತ್ತುಹಾಕಿದೆ ಶಿವರ ಗ್ರಾಮದ ಪೂಜಾರ್ ಹುಚ್ಚಯ್ಯನವರ ಮನೆಯ ಹೆಂಚುಗಳು ಮಳೆಗಾಳಿಗೆ ತುತ್ತಾಗಿ ಹೆಂಚುಗಳು ಗಾಳಿಯ ರಭಸಕ್ಕೆ ಕಿತ್ತುಹೋಗಿದ್ದು ಸಾಕಷ್ಟು ಹಾನಿಯನ್ನು ಮಾಡಿದೆ. ಅದಲ್ಲದೇ ಜಾನುವಾರುಗಳ ಮೇವಿಗಾಗಿ ಸಂಗ್ರಹಿಸಿದ್ದ ಹುಲ್ಲಿನ ಬವಣೆಯು ಸಹ ಗಾಳಿ ತುತ್ತಾಗಿದ್ದು ನಷ್ಟವನ್ನು ಉಂಟುಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ