ಮನೆಬಿಟ್ಟು ಹೊರಬರುವ ಮುನ್ನಎಚ್ಚರ ; ಕುಟುಂಬಕ್ಕೆ ನೀನೊಬ್ಬ ಅಮೂಲ್ಯ ರತ್ನ

 ತಿಪಟೂರು :

ನಗರಸಭೆ ಪೌರಾಯುಕ್ತರ ಸಮ್ಮುಖದಲ್ಲಿ ರುದ್ರಭೂಮಿಯಲ್ಲಿ ಪಿ.ಪಿ.ಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ಮಾಡಲು ತಯಾರಾಗಿರುವುದು.

     ಕಳೆದ ವಾರ 150 ಕ್ಕು ಹೆಚ್ಚು ಕೊರೋನಾ ಸೋಂಕಿತರು ಕಂಡುಬಂದಿದ್ದು ಈ ವಾರ 2 ದಿನದಲ್ಲೆ 150ಕ್ಕು ಹೆಚ್ಚು ಸೋಂಕಿತರು ಕಂಡುಬಂದಿದ್ದು ಸಾರ್ವಜನಿಕರು ಎಚ್ಚೆತ್ತುಕೊಳ್ಳದೆ ಇದ್ದರೆ ಕೊರೋನಾ ಸೋಂಕು ಕಟ್ಟಿಟ್ಟ ಬುತ್ತಿಯಾಗಿದೆ.

      ತಾಲ್ಲೂಕಿನಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು ಮಂಗಳವಾರ ಬರೋಬ್ಬರಿ 94 ಜನ ಸಂಕೋಕಿತರು ಕಂಡುಬಂದಿದ್ದು ಈ ರೀತಿ ತಾಲ್ಲೂಕಿ ನಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಬಗ್ಗೆ ಇಂದು ತಹಸೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರ ಸಮ್ಮುಖದಲ್ಲಿ ಎ.ಪಿ.ಎಂ.ಸಿ ತರಕಾರಿ ಮಾರುಕಟ್ಟೆಯ ವ್ಯಾಪಾರಿಗಳು ಹಾಗೂ ಮದುವೆ ಛತ್ರಗಳು, ಸಮುದಾಯ ಭವನಗಳ ಮಾಲೀಕರ ಜೊತೆ ಕೊರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ವ್ಯಾಪಾರಿಗಳಿಗೆ ತಿಳಿಸಿ ಛತ್ರದ ಮತ್ತು ಸಮುದಾಯ ಭವನಗಳ ಮಾಲೀಕರುಗಳಿಗೆ ಪ್ರತಿ ಸಮಾರಂಭ ಆದ ನಂತರ ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಬೇಕು ಹಾಗೂ ಸರ್ಕಾರದ ನಿಯಮದಂತೆ ಮದುವೆ ಸಮಾರಂಭಗಳಿಗೆ ಒಳಾಂಗಣದಲ್ಲಿ 100 ಹೊರಾಂಗಣದಲ್ಲಿ 200ಜನರು ಹಾಗು ಇನ್ನಿತರೆ ಸಮಾರಂಭಗಳಿಗೆ 25 ಹಾಗೂ 50 ಜನರಿಗೆ ಸೀಮಿತಗೊಳಿಸಿದ್ದು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಮಾರ್ಗದರ್ಶನವನ್ನು ಉಲ್ಲಂಘಿಸಿದರೆ ಕೊರೋನಾ ಹಾವಳಿ ನಿಲ್ಲುವವರೆಗೂ ಸೀಲ್ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ.

ನಂತರದ ಸಭೆಯಲ್ಲಿ ಪ್ರತಿಗ್ರಾಮ ಪಂಚಾಯಿತಿಗಳಿಗೂ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು ಕೋವಿಡ್ ದೃಢಪಟ್ಟವರು ಪತ್ತೆಯಾದ ತಕ್ಷಣ ಅವರ ಮಾಹಿತಿ ಪಡೆದು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಅವರನ್ನು ಹೋಮ್ ಐಸೋಲೇಷನ್‍ನಲಿ ್ಲಇರಿಸುವುದು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕುಟುಂಬಕ್ಕೆ ನೀನೊಬ್ಬ ಅಮೂಲ್ಯ ರತ್ನ

      ಸಾರ್ವಜನಿಕರ ಬೀದಿ ಗಿಳಿಯುವ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಒಂದು ವಾಕ್ಯವನ್ನು ಹಾಕಿದ್ದು ಅದು ಈ ರೀತಿ ಇದೆ.ಕೊರೋನಾಗೆ ನೀನೊಬ್ಬ ಜೀವಿ, ಸರ್ಕಾರಕ್ಕೆ ನೀನೊಬ್ಬ ಪ್ರಜೆ ಆದರೆ ನಿನ್ನ ಕುಟುಂಬಕ್ಕೆ ನೀನೊಬ್ಬ ಅಮೂಲ್ಯ ರತ್ನ ಆದ್ದರಿಂದ ನಿನ್ನ ಮತ್ತು ನಿನ್ನ ಮನೆಯವರ ಆರೋಗ್ಯ ನಿನ್ನ ಕೈನಲ್ಲೆ ಇದೆ ಎಂಬ ಸಂದೇಶ ವೈರಲ್ ಆಗಿದೆ ಇನ್ನೂ ತಾಲ್ಲೂಕಿನಲ್ಲಿ ಮೊದಲ ಅಲೆಗೆ 30 ಸಾವುಗಳು ಸಂಭವಿಸಿವೆ ಇನ್ನು 2ನೇ ಅಲೆಗೆ ಯಾವುದೇ ರೀತಿಯ ಸಾವುಗಳು ಸಂಭವಿಸಿಲ್ಲ ಇಂದು ಮೊದಲನೇ ಪ್ರಕರಣವಾಗಿ ವ್ಯಕ್ತ್ತಿಯೊಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು ಅವರನ್ನು ನಗರಸಭೆ ಪೌರಾಯುಕ್ತ ಉಮಾಕಾಂತ್ ಸಮ್ಮುಖದಲ್ಲಿ ರುದ್ರಭೂಮಿಯಲಿ ಅಂತ್ಯಸಂಸ್ಕಾರಮಾಡಲಾಗಿದೆ.

      ಕೊರೋನಾ ಜಾಗೃತಾ ಸಭೆಯಲ್ಲಿ ನಗರ ಸಭೆ ಅಧ್ಯಕ್ಷ ರಾಮ್‍ಮೋಹನ್ ಉಪಾಧ್ಯಕ್ಷ ಸೊಪ್ಪುಗಣೇಶ್, ವಿವಿದ ಇಲಾಖೆಯ ಅಧಿಕಾರಿಗಳು, ಛತ್ರದ ಮಾಲೀಕರು ತರಕಾರಿ ವರ್ತಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap