ತಿಪಟೂರು :
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರವಾಹಿಗೆ ಶುಭಕೋರಲು ಹಾಕಿದ್ದ ಫ್ಲೆಕ್ಸ್‍ಗೆ ಸಗಣಿ ಎರಚಿದ ಬಗ್ಗೆ ಕಿಬ್ಬನಹಳ್ಳಿ ಪೋಲೀಸ್‍ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಜಕ್ಕನಹಳ್ಳಿಯಲ್ಲಿ ಗ್ರಾಮಸ್ಥರು ಹಾಗೂ ತಾಲ್ಲೂಕಿನ ದಲಿಪರ ಸಂಘಟನೆಗಳ ಒಕ್ಕೂಟದವರು ಸಂವಿಧಾನಶಿಲ್ಪ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರವಿರುವ ಮಹಾನಾಯಕ ಧಾರವಾಹಿಯ ಫ್ಲೆಕ್ಸ್ ಹಾಕಿ ಅಭಿಮಾನ ತೋರಿ ಗೌರವ ಸಮರ್ಪಸಿದ್ದರು. ಆದರೆ ಇದನ್ನು ಸಹಿಸದ ಯಾರೋ ಕಿಡಿಗೇಡಿಗಳು ಫ್ಲೆಕ್ಸ್‍ಗೆ ಸಗಣಿ ಎರಚಿ ಅಪಮಾನಮಾಡಿದ್ದಾರೆ.
ಅಪಮಾನ ಮಾಡಿದ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ದಲಿತಪರ ಸಂಘಟನೆ ಮತ್ತು ಗ್ರಾಮಸ್ಥರು ಆರಕ್ಷಕರನ್ನು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ