ತಿಪಟೂರು :
ತಾಲ್ಲೂಕಿನಲ್ಲಿ ಮೇ ಮೊದಲ ಸೋಮವಾರ ಕೊರೋನಾ ಸುನಾಮಿ ಅಪ್ಪಳಿಸಿದ್ದು, ಒಂದೇ ದಿನ 389 ಸೋಂಕಿತರು ಪತ್ತೆಯಾಗಿವೆ. ತಿಪಟೂರು ತಾಲ್ಲೂಕಿನ ಸಾರ್ವಜನಿಕರ ಜಂಘಾ ಬಲವೆ ಮುದುಡಿ ಹೋಗಿದೆ. ಜನರು ಎಚ್ಚೆತ್ತು ಕೊಳ್ಳದಿದ್ದರೆ ಬೀದಿಯಲ್ಲಿ ಹೆಣ ಬೀಳುತ್ತವೆ. ಸ್ಮಶಾನದಲ್ಲಿ ಜಾಗವಿಲ್ಲ ಎಂದು ಕೇಳುತ್ತಿದ ಸುದ್ಧಿ ಕಣ್ಣಮುಂದೆಯೆ ಕಾಣುವುದರಲ್ಲಿ ಯಾವುದೆ ಅನುಮಾನವೆ ಇಲ್ಲ.
ಸುಮ್ಮನಿದ್ದರೆ ಮುಂದೆ ಆಗುವ ಅನಾಹುತಕ್ಕೆ ಸೂಚನೆ ಎಂಬಂತೆ ಶನಿವಾರ ಮತ್ತು ಭಾನುವಾರ ಕೇವಲ 13 ಜನ ಸೋಂಕಿತರು ಪತ್ತೆಯಾಗಿದ್ದಾರೆಂಬ ವರದಿಯಿಂದ ಸ್ವಲ್ಪ ಖುಷಿಯಾಗಿದ್ದ ಜನತೆಗೆ ಕೋವಿಡ್-19 2ನೇ ಅಲೆಯು ತಾಲ್ಲೂಕಿಗೆ ಸುನಾಮಿಯಂತೆ ಅಪ್ಪಳಿಸಿದೆ. ನಾಲ್ಕು ಶತಕದ ಸನಿಹವೆ ಸೋಂಕಿತರು ಕಂಡು ಬಂದಿದ್ದು. ಒಟ್ಟು 389 ಮಂದಿಗೆ ಕೊರೋನಾ ವಕ್ಕರಿಸಿದೆ. ಸೋಮವಾರ 120 ಜನರು ಸೋಂಕಿನಿಂದ ಮುಕ್ತವಾಗಿದ್ದು, ತಾಲ್ಲೂಕಿನಲ್ಲಿ ಒಟ್ಟು 717 ಕೊರೋನಾ ಸಕ್ರಿಯ ಪ್ರಕರಣಗಳಿವೆ.
ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ: ತಿಪಟೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದ್ದು, ಕೋವಿಡ್ ಪರೀಕ್ಷೆಗೆ ಎಲ್ಲರೂ ಸಹಕರಿಸುತ್ತಿದ್ದಾರೆ. ಅಲ್ಲದೆ ಆಸ್ಪತ್ರೆಯ ಸಿಬ್ಬಂದಿ ಕೊರೋನಾ ವಕ್ಕರಿಸುತ್ತಿದ್ದು, ಈಗಲಾದರು ಗುತ್ತಿಗೆಯ ಆಧಾರದ ಮೇಲೆ ಸಿಬಂದಿಯನ್ನು ನೇಮಿಸಿಕೊಂಡು ಚಿಕಿತ್ಸೆಯನ್ನು ಹೆಚ್ಚು ಜನರಿಗೆ ಸಿಗುವಂತೆ ಮಾಡಿ, ಜನರನ್ನು ಬದುಕಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆರಕ್ಷಕರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು :
ನಗರದಲ್ಲಿ ಎಲ್ಲರೂ ಏನಾದರೊಂದು ಸಬೂಬನ್ನು ಇಟ್ಟುಕೊಂಡು ಇಲ್ಲವೆ ಜೇಬಿನಲ್ಲಿ 4 ಮಾತ್ರೆಗಳನ್ನಾದರು ಇಟ್ಟುಕೊಂಡು ಓಡಾಡುತ್ತಿರುವುದು ಆರಕ್ಷಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ಆರಕ್ಷಕರು ನಿಜವಾದ ಆರೋಗ್ಯ ಸಿಬ್ಬಂದಿ ಎಲ್ಲರೂ ಐ.ಡಿ.ಕಾರ್ಡ್ ಇಟ್ಟುಕೊಂಡೆ ಸಂಚರಿಸುತ್ತಾರೆ. ಆದರೂ ನಿಲ್ಲಿಸಿ ಎಂದು ಹೇಳಿ, ಆರೋಗ್ಯ ಸಿಬ್ಬಂದಿ ಯೊಬ್ಬರನ್ನು ನಿಲ್ಲಿಸಿದ ಘಟನೆ ಕೆ.ಬಿ.ಕ್ರಾಸ್ ಠಾಣೆಯ ಸರಹದ್ದಿನಲ್ಲಿ ನಡೆದಿದೆ ಎಂದು ಆರೋಗ್ಯ ಸಿಬ್ಬಂದಿ ವಿಷಾದಿಸುತ್ತಾರೆ.
ಹಾಲಿನ ಅಂಗಡಿಗಳಾದ ಗುಟ್ಕಾ ಟೀ ಅಂಗಡಿಗಳು :
ನಗರದಲ್ಲಿ ರಸ್ತೆ ಬದಿಯ ಹೋಟೆಲ್ ಮತ್ತು ಟೀ ಅಂಗಡಿಗಳ ನಿಷೇಧಿಸಿ ಗುಟ್ಕಾ,ಸಿಗರೇಟ್‍ಗಳನ್ನು ನಿಷೇಧಿಸಲಾಯಿತು. ಆದರೆ ರಾಜ್ಯ ಸರ್ಕಾರ ಯಾವಾಗ ಬೆಳಗ್ಗೆ 6 ರಿಂದ ಸಂಜೆಯವರಗೂ ಹಾಲಿನ ಅಂಗಡಿಗಳನ್ನು ತೆರೆಯಬಹುದೆಂಬ ಆದೇಶ ಹೊರ ಬೀಳುತ್ತಿದ್ದಂತೆ ನಗರದ ರಸ್ತೆ ಬದಿಯ ಟೀ ಸ್ಟಾಲ್‍ಗಳು ಮತ್ತು ಗುಟ್ಕಾ ಸಿಗರೇಟ್ ಅಂಗಡಿಗಳು ನಂದಿನಿ ಹಾಲಿನ ಕೇಂದ್ರಗಳಾಗಿ ಮಾರ್ಪಟ್ಟು ಗುಟ್ಕಾ,ಸಿಗರೇಟ್‍ಗಳನ್ನು ಲಾಭದ ಆಸೆಗಾಗಿ ಮಾರಾಟ ಮಾಡಲು ಹೋಗಿ ಇನ್ನಷ್ಟು ಕೊರೋನಾವನ್ನು ಹರಡುಸುತ್ತಿದ್ದಾರೆ. ಇದರ ಬಗ್ಗೆ ಆರಕ್ಷಕ ಇಲಾಖೆ ಯವರು ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಹಾಗೂ ಯಾರು ನಂದಿನ ಹಾಲಿನ ಅಧಿಕೃತ ಹಾಲು ಮಾರಾಟಗಾರರು ಎಂಬುದನ್ನು ತಿಳಿದು ಅವರಿಗೆ ಮಾತ್ರ ಕೇವಲ ಹಾಲು ಮಾರಲು ಅವಕಾಶ ಕೊಡಿದ್ದರೆ ಮುಂದಿನ ದಿನಗಳು ಇನ್ನೂ ವಿಕೋಪಕ್ಕೆ ಹೋಗುತ್ತದೆ. ಇಷ್ಟೇ ಅಲ್ಲದೆ ತಾಲ್ಲೂಕು ಕಚೇರಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಕಾಂಪೌಂಡ್‍ಗೆ ಸೇರಿದಂತೆ ಮದ್ಯಭಾಗದಲ್ಲಿ ಒಂದು ಪೆಟ್ಟಿಗೆ ಅಂಗಡಿಯನ್ನು ಇಟ್ಟುಕೊಂಡಿದ್ದು, ಈ ಅಂಗಡಿಯಲ್ಲಿ ಕೇವಲ ಗುಟ್ಕಾ, ಸಿಗರೇಟ್, ಬಿಟ್ಟರೆ ಏನು ಇಲ್ಲ ಆದರೂ ದೈರ್ಯವಾಗಿ ಮಾರಾಟ ಮಾಡುತ್ತಿದ್ದರು ಸಹ ಯಾವುದೆ ಅಧಿಕಾರಿಗಳಿಗೆ ಕಾಣದಿರುವುದು ವಿಪರ್ಯಾಸ ವಾಗಿದೆ.
ಸಾವಿನ ಲೆಕ್ಕ ಊಹಾ-ಪೋಹಗಳಿಗೆ ತೆರೆ ಎಳೆಯುವುದೆ ಆರೋಗ್ಯ ಇಲಾಖೆ :
ತಾಲ್ಲೂಕಿನಲ್ಲಿ ಇದುವರೆಗೂ 4309 ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದು ಇದರಲ್ಲಿ 3562 ಜನರು ಸೋಂಕಿನಿಂದ ಗುಣಮುಖ ವಾಗಿದ್ದು, ಮೊದಲ ಅಲೆಯಲ್ಲಿ 30 ಜನರು ಮರಣ ಹೊಂದಿದ್ದು, ಬಿಟ್ಟರೆ ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 2ನೇ ಅಲೆಯಲ್ಲಿ ಯಾರು ಮರಣ ಹೊಂದಿಲ್ಲ ಕೊರೋನಾ 2ನೇ ಅಲೆ ಪ್ರಾರಂಭ ವಾದಾಗದಿಂದ ನಮ್ಮ ಮನೆ ಪಕ್ಕದವರು ಕೊರೋನಾಕ್ಕೆ ಬಲಿಯಾದರು ಭಾನುವಾರ ಅಧ್ಯಾಪಕರು ಕೊರೋನಾಕ್ಕೆ ಬಲಿಯಾಗಿದ್ದಾರೆ, ಮೊನ್ನೆ ಆರು ಜನ ಇಂದು ಎಂಟು ಜನ ಮರಣ.ಹೊಂದಿದ್ದಾರೆಂದು.ಮಾತನಾಡಿಕೊಳ್ಳುತ್ತಿದ್ದು. ಆರೋಗ್ಯ ಇಲಾಖೆಯ ವರಧಿಯ ಪ್ರಕಾರ 2ನೇ ಅಲೆಯಲ್ಲಿ ಯಾರೋಬ್ಬರು ಮರಣ ಹೊಂದಿಲ್ಲ ಎಂದಾದರೆ ದಿನನಿತ್ಯ ಬೀಳುತ್ತಿರುವ ಹೆಣಗಳು ಯಾವುದಕ್ಕೆ ಸಂಬಂಧಿಸಿವೆ ಎಂದು ಆರೋಗ್ಯ ಇಲಾಖೆ ತಿಳಿಸದೆ ಇರುವುದು ವಿಪರ್ಯಾಸವಾಗಿದೆ.
ಈಗಾಗಲೇ ಕೋವಿಡ್ ನಿಂದಾಗಿ ಆಸ್ಪತ್ರೆಗಳು ತುಂಬಿತುಳುಕುತ್ತಿವೆ, ಸಾರ್ವಜನಿಕರು ಈಗಲಾದರೂ ಎಚ್ಚೆತ್ತುಕೊಂಡು ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲೆಂದು ನಮ್ಮ ಮನೆಯರೂ ಚೆನ್ನಾಗಿರ ಬೇಕೆಂದರೆ ಎಲ್ಲರೂ ಏನಾದರೊಂದು ಕಾರಣ ಹೇಳಿಕೊಂಡು ಕೊರೋನಾ ಮುಗಿಯುವವರೆಗೂ ಯಾರಾದರೊಬ್ಬರು ಮನೆಯ ಹೊರಗಿನ ಕೆಲಸಗಳನ್ನು ಮಾಡಿಕೊಂಡು ಸ್ವಚ್ಛವಾಗಿ ಮನೆಯ ಒಳಗೆ ಹೋಗದಿದ್ದರೆ ಮನೆ ಮಂದಿಗೆಲ್ಲಾ ಅಪಾಯವಿದ್ದು, ಜನರು ಆದಷ್ಟು ಬೇಗ ಎಚ್ಚೆತ್ತು ಕೊಳ್ಳಬೇಕು.
ರಂಗನಾಥ್ ಪಾರ್ಥಸಾರಥಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ