ಹೊನ್ನವಳ್ಳಿ :
ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯಲ್ಲಿ ಮೇ.2 ರ ರಾತ್ರಿ ಚಿಕ್ಕಹೊನ್ನವಳ್ಳಿ ಗ್ರಾಮದ ಮಧುಚಂದ್ರ, ಮಧು ಹಾಗೂ ಟ್ರಾಕ್ಟರ್ ಮಾಲೀಕ ಮಲ್ಲಿಕಾರ್ಜುನ್ ಚಿಕ್ಕಹೊನ್ನವಳ್ಳಿ ಸಮೀಪವಿರುವ ಸರ್ಕಾರಿ ಹಳ್ಳದಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದ ಖಚಿತ ಮಾಹಿತಿಯನ್ನಾಧರಿಸಿ ಹೊನ್ನವಳ್ಳಿ ಪೊಲೀಸ್ ಠಾಣೆಯ ಎ.ಎಸ್.ಐ. ಸಾರ್ದಾರ್ ಸಾಬ್ ಸಿಬ್ಬಂದಿ ವರ್ಗ ದಾಳಿಮಾಡಿ ಆರೋಪಿ ಮತ್ತು ಟ್ರಾಕ್ಟರ್‍ನ್ನು ವಶಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಹೊನ್ನವಳ್ಳಿ ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ ಎಂದು ತಿಳಿಸಲಾಗಿದೆ.