ತಿಪಟೂರು :
ತಾಲ್ಲೂಕಿನಲ್ಲಿ ದಿನೆ ದಿನೆ ಸೋಂಕಿತರು ಹೆಚ್ಚಾಗುತ್ತಿದ್ದರು ಸಹ ಜನರು ಮಾತ್ರ ನಮಗೂ ಇದಕ್ಕೂ ಸಂಬಂಧವೆ ಇದಂತೆ ಅಂಗÀಡಿಗಳ ಮುಂದೆ ಸಾಲುಗಟ್ಟುತ್ತಿದ್ದು ಜನತಾ ಕಫ್ರ್ಯೂ ಇದೆಯೊ ಇಲ್ಲವೊ ಎಂಬತೆ ಬಾಸವಾಗುತ್ತಿದ್ದು. ಸೋಂಕು ಹೆಚ್ಚಲು ಕಾರಣವಾಗುತ್ತಿದ್ದಾರೆ. ಜನರು ಈಗಲೂ ಎಚ್ಚೆತ್ತುಕೊಳ್ಳದೆ ಇದ್ದರೆ ಮುಂದಿನ ದಿನಗಳನ್ನು ಊಹಿಸಲು ಸಾಧ್ಯವಾಗದ ಕ್ಲಿಷ್ಟ ಪರಿಸ್ಥಿತಿ ಊಂಟಾಗುವ ಮೊದಲೆ ಜನರು ಎಚ್ಚೆತ್ತುಕೊಳ್ಳಬೇಕು.
ತಿಪಟೂರು ನಗರದ ಹಳೇಪಾಳ್ಯ 65, ದೊಡ್ಡಯ್ಯನಪಾಳ್ಯ 36, ಶಾರದಾನಗರ 38, ಕೋಟೆ 24, ಕೆ.ಆರ್.ಬಡಾವಣೆ 18 ಸೋಂಕಿತರು ಕಂಡುಬಂದಿದ್ದು. ಈಗಾಗಲೇ ಹಾಟ್ ಸ್ಪಾಟ್‍ಗಳಾಗಿವೆ. ಇನ್ನು ತಾಲ್ಲೂಕಿನ ಬಿಳೀಗೆರೆ ಪಂಚಾಯಿತಿಗೆ ಸೇರಿದ ಕಿಬ್ಬನಹಳ್ಳಿ ಕ್ರಾಸ್ ಕೊರೋನಾ ಹೆಚ್ಚುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಕೆ.ಬಿ.ಕ್ರಾಸ್‍ನ ಒಂದು ಕಡೆ ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ತಿಪಟೂರಿಗೆ ಪ್ರಮುಖ ಸ್ಥಳವಾಗಿದ್ದು ದಿನನಿತ್ಯ ಸಾವಿರಾರು ಜನರು ಸಂಚರಿಸುತ್ತಿದ್ದಾರೆ ಮುಖ್ಯವಾಗಿ ತಿಪಟೂರು ತಾಲ್ಲೂಕಿನ ಬಿಳಿಗೆರೆ ಹಾಗೂ ಹಿಂಡಿಸ್ಕೆರೆ, ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರ, ತುರುವೇಕೆರೆ, ಬಾಣಸಂದ್ರ, ಗ್ರಾಮ ಪಂಚಾಯಿತಿಗಳು ಈಗಾಗಲೇ ಕೊರೋನಾ ಹಾಟ್ ಸ್ಪಾಟ್‍ಗಳಾಗಿದ್ದು ಕೆ.ಬಿ.ಕ್ರಾಸ್ ಇವೆಲ್ಲಕ್ಕೂ ಕೇಂದ್ರ ಸ್ಥಾನವಾಗಿದ್ದು ಕೊರೋನಾ ಹರಡುವ ಪ್ರಮುಖ ಪ್ರದೇಶಗಳಾಗಿವೆ.
ಮದುವೆ ಹಾಗೂ ರಂಜಾನ್‍ಗೆ ಬಟ್ಟೆ : ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಜನತಾ ಕಫ್ರ್ಯೂ ಇರುವಾಗಲೆ ಮೊದಲೆ ನಿಶ್ಚಯವಾಗಿದ್ದ ಮದುವೆಗಳು ಹಾಗೂ ಮುಸ್ಲಿಂ ಭಾಂದವರ ಪವಿತ್ರ ರಂಜಾನ್ ಹಬ್ಬವು ಬಂದಿರುವುದರಿಂದ ಮಕ್ಕಳಿಗೆ ಬಟ್ಟೆಯನ್ನು ಖರೀದಿಸಲು ಬೆಳಗಿನ ಜಾವವೆ ಅಂಗಡಿಯವರ ಮೊಬೈಲ್ ನಂಬರ್ ಇಟ್ಟುಕೊಂಡು ಕರೆಮಾಡಿ ಬರುತ್ತಿದ್ದು. ಅಂಗಡಿಯವರು ಕದ್ದುಮುಚ್ಚಿ ಅಂಗಡಿಯ ಒಳಗೆ ಗಿರಾಕಿಗಳನ್ನು ಸೇರಿಸಿಕೊಂಡು ವ್ಯಾಪಾರವನ್ನು ಮಾಡುತ್ತಿರುವುದು ಒಂದು ರೀತಿಯಲ್ಲಿ ಕೊರೋನಾ ಹರಡಲು ಕಾರಣವಾಗುತ್ತಿದ್ದಾರೆ.
ಸಂಪೂರ್ಣ ಲಾಕ್‍ಡೌನ್ ಮಾಡದೆ ಇರುವುದು ಕೊರೋನಾ ಹರಡಲು ಕಾರಣವಾಗಿದೆ :
ಸಂಪೂರ್ಣ ಲಾಕ್‍ಡೌನ್ ಮಾಡದೆ ಜನತಾ ಕಫ್ರ್ಯೂ ಆರಕ್ಷರಿಗೆ ತಲೇನೋವು ತಂದಿರುವುದಂತೂ ಸತ್ಯ ಮುಖ್ಯವಾಗಿ ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳನ್ನು ತೆರೆದು ಜನರನ್ನು ಹೊರಗೆ ಬರಬೇಡಿ ಎಂದರೆ ಹೇಗೆ ಸಂಪೂರ್ಣ ಲಾಕ್‍ಡೌನ್ ಇದ್ದಾಗ, ಆಸ್ಪತ್ರೆ ಮತ್ತು ಔಷಧಿಯ ನೆಪವನ್ನು ಇಟ್ಟುಕೊಂಡು ಹೊರಬರುತ್ತಿದ್ದರು. ಆದರೆ ಈಗ ನಾನು ಬ್ಯಾಂಕ್‍ಗೆ ಹೋಗುತ್ತೇನೆ ಎಂದು ದಿನಾಂಕ ಇಲ್ಲದ ಚೆಕ್, ಪಾಸ್‍ಬುಕ್, ಎಲ್.ಐ.ಸಿ ಗೆ ಹೋಗಬೇಕು, ಪಹಣೀ ತೆಗೆದುಕೊಳ್ಳಬೇಕು, ಎಂದು ಇಲ್ಲ ನಾನು ಕೆಲಸಕ್ಕೆ ಹೋಗುತ್ತಿದ್ದೇನೆಂದು ಗುರುತಿನ ಪತ್ರವನ್ನು ಇಟ್ಟುಕೊಂಡು ಓಡಾಡುತ್ತಿರುವುದರಿಂದ ಆರಕ್ಷಕರು ಎಷ್ಟು ಜನರನ್ನು ವಿಚಾರಿಸಿದರು 2-3 ಕಾರಣಗಳನ್ನು ಹೇಳುತ್ತಾರೆ. ಇದರಿಂದ ಆರಕ್ಷಕರು ಯಾರು ನಿಜ ಹೇಳುತ್ತಿದ್ದಾರೆ ಎಂಬುದು ವಿಚಾರಿಸಲು ಸಾಧ್ಯವಾಗದ ಸ್ಥಿತಿಗೆ ಬಂದು ನಿಂತಿದ್ದಾರೆ. ಆರಕ್ಷಕರೊಬ್ಬರು ಹೇಳುವ ಪ್ರಕಾರ ಬ್ಯಾಂಕ್, ಸರ್ಕಾರಿ ಕಚೇರಿಗಳನ್ನು ತೆರೆದು ಜನರನ್ನು ಬರಬೇಡಿ ಎಂದರೆ ಹೇಗೆ ಎನ್ನುತ್ತಾರೆ.
ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಕೊರೋನಾ ವಿಜೃಂಭಿಸಿ ಆಸ್ಪತ್ರೆಗಳು ತುಂಬುತ್ತಿವೆ, ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ಹೆಣಗಳೂ ಬೀಳುತ್ತಿದ್ದರು ಜನರು ಮಾತ್ರ ನಮಗೂ ಅದಕ್ಕೂ ಸಂಬಂಧವೆ ಇಲ್ಲದಂತೆ ನಡೆದು ಕೊಳ್ಳುತ್ತಿರುವುದು ತಪ್ಪು ನಮ್ಮ ಸುರಕ್ಷತೆಯಲ್ಲಿ ನಾವಿರಬೇಕು.
ರಂಗನಾಥ್ ಪಾರ್ಥಸಾರಥಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
