ಗಣವೇಷಧಾರಿಯಾದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ತಿಪಟೂರು :

      ನಗರದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪಥಸಂಚಲನದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸಾಮಾನ್ಯ ಆರ್‍ಎಸ್‍ಎಸ್ ಕಾರ್ಯಕರ್ತರಂತೆ ಗಣವೇಷಧಾರಿಯಾಗಿ ಹೆಜ್ಜೆ ಹಾಕಿದ್ದು ಸಾರ್ವಜನಿಕರ ಗಮನ ಸೆಳೆಯಿತು.

     ಶ್ರೀ ಗುರುಕುಲ ಶಿಕ್ಷಣ ಸಂಸ್ಥೆಯ ಸಮಕ್ಷಮದಲ್ಲಿ ಅ.17 ರಿಂದ 24 ರ ವರೆಗೆ ನಡೆಯುತ್ತಿರುವ ಜಿಲ್ಲಾ ಮಟ್ಟದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕ್ಯಾಂಪ್‍ನ ಕೊನೆಯ ದಿನ ಗಣವೇಷಧಾರಿಗಳ ಪಥಸಂಚಲನ ಕಾರ್ಯಕ್ರಮವು ಶನಿವಾರ ತಿಪಟೂರಿನ ರಾಜಬೀದಿಗಳಲ್ಲಿ ಸಾಗಿತು. ಈ ಸಂದರ್ಭದಲ್ಲಿ ಭಾರತಾಂಭೆಯ ಭಾವಚಿತ್ರವನ್ನು ವಿಶೇಷ ಪುಷ್ಪಾಲಂಕೃತ ವಾಹನದಲ್ಲಿ ಸಿಂಗರಿಸಿ ಮರೆವಣಿಗೆ ಮಾಡಲಾಯಿತು.

     ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಫ್ಲೆಕ್ಸ್ ಹಾಗೂ ಬಾವುಟಗಳನ್ನು ಕಟ್ಟಿದ್ದರಿಂದ ರಸ್ತೆಗಳು ಕೇಸರಿಮಯವಾಗಿದ್ದವು. ಪಥ ಸಂಚಲನ ಸಾಗುವ ವೇಳೆ ಸಾರ್ವಜನಿಕರು ಹಾಗೂ ರಸ್ತೆ ಇಕ್ಕೆಲಗಳ ಅಂಗಡಿಗಳ ಮಾಲೀಕರು ಗಣಧಾರಿಗಳ ಮೇಲೆ ಹೂಮಳೆ ಗರೆದರು.  

     ಪಥ ಸಂಚಲನದಲ್ಲಿ ನಗರಸಭೆ ಅಧ್ಯಕ್ಷ ಪಿ.ಜೆ.ರಾಮ್‍ಮೋಹನ್, ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್ ಭಾಗವಹಿಸಿದ್ದರು. ಪೊಲೀಸ್ ಇಲಾಖೆಯು ಯಾವುದೇ ಅವಗಡಗಳು ಸಂಭವಿಸದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link