ತಿಪಟೂರು:
ತಾಲ್ಲೋಕಿನ ಬಾಗುವಾಳ ಗೊಲ್ಲರಹಟ್ಟಿ ಗ್ರಾಮದಲ್ಲಿ ಹುಡುಗಿಯರನ್ನ ಚುಡಾಯಿಸಿದ ಪುಂಡನಿಗೆ ಬುದ್ದಿ ಹೇಳಿದವರಿಗೆ, ಗಲಾಟೆ ಮಾಡಿದ ಆರೋಪಿ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ತಾಲ್ಲೋಕಿನ ಗುಡಿಗೊಂಡನಹಳ್ಳಿ ಗ್ರಾಮದ ಕಾಂತರಾಜು ಎಂಬ ವ್ಯಕ್ತಿ ಬಾಗುವಾಳ ಗೊಲ್ಲರಹಟ್ಟಿ ಗ್ರಾಮದ ಹುಡುಗಿಯರನ್ನ ಅಸಭ್ಯವಾಗಿ ಚುಡಾಯಿಸಿದ್ದಾನೆ.ಗೊಲ್ಲರಹಟ್ಟಿ ಗ್ರಾಮಸ್ಥರು ಕಾಂತರಾಜುಗೆ ಬುದ್ದಿ ಹೇಳಿದ್ದಾರೆ.ಗ್ರಾಮಸ್ಥರ ಬುದ್ದಿ ಮಾತಿನಿಂದ ಕುಪಿತಗೊಂಡ ಕಾಂತರಾಜು ಗೊಲ್ಲರಹಟ್ಟಿ ಗ್ರಾಮದಲ್ಲಿ ಗಲಾಟೆ ಮಾಡಿ ಬಾಗುವಾಳ ಗೊಲ್ಲರಹಟ್ಟಿ ಗ್ರಾಮದ ಜಯಣ್ಣ 25 ವರ್ಷ ಹಾಗೂ ನಟರಾಜು 24 ವರ್ಷ ಇಬ್ಬರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದ್ದು, ಜಯಣ್ಣ ಎಂಬುವವರ ಸೊಂಟದ ಭಾಗಕ್ಕೆ ಹಾಗೂ ನಟರಾಜು ಕೈಗೆ ಚಾಕು ಇರಿತಕೊಳ್ಳಗಾಗಿದ್ದು,ತಕ್ಷಣ ಗಾಯಳುಗಳನ್ನ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿ ಕಾಂತರಾಜುನನ್ನು ದಸ್ತಗಿರಿ ಮಾಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
