ತಿಪಟೂರು :

ಹನಿಹನಿ ನೀರಿಗೂ ತಾತ್ವಾರಪಡುತ್ತಿರುವ ಹೊನ್ನವಳ್ಳಿ ಜನತೆ ನಾವೆಲ್ಲಾ ಒಂದೇ ಮತ್ತೆ ನೀರು ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು, ಹಾಗೂ ನಮ್ಮ ಒಗ್ಗಟ್ಟನ್ನು ಎಂದು ಒಡೆಯಲು ಸಾಧ್ಯವಿಲ್ಲವೆಂದು ಪಕ್ಷಾತೀತವಾಗಿ ಹೊನ್ನವಳ್ಳಿ ಬಂದ್ ಮಾಡಿದರು.
ತಾಲ್ಲೂಕಿನಲ್ಲಿ ಅತಿಹೆಚ್ಚು ಬರಗಾಲ ಪೀಡಿತ ಪ್ರದೇಶವೆಂದು ಕುಖ್ಯಾತಿಪಡೆದಿರುವ ಹೊನ್ನವಳ್ಳಿಯ ಜನರು ರಾಜಮಹಾರಾಜರ ಕಾಲದಿಂದಲೂ ನೀರಿಗಾಗಿ ಪರಿತಪಿಸುತ್ತಿದ್ದು ಇದಕ್ಕೆ ಉದಾಹಣೆ ಎಂಬಂತೆ ಸುಮಾರು 70 ದಶಕಗಳ ಹಿಂದೆ ನೀರಿಗಾಗಿ ಮೈಸೂರು ಮಹಾರಾಜರಿಗೆ ಬರೆದಿದ್ದ ಪತ್ರ ವೈರಲ್ ಆಗಿತ್ತು. ಇದೇ ಸಂದರ್ಭದಲ್ಲಿ ನೀರಿಗಾಗಿ ಹೊನ್ನವಳ್ಳಿ ಗ್ರಾಮ ಪಂಚಾಯ್ತಿ ಚುನಾವಣೆ ಹಾಗೂ ನಂದಿನ ಹಾಲು ಉತ್ಪಾದಕರ ಸಂಘದ ಚುನಾವಣೆಯನ್ನು ಬಹಿಷ್ಕರಿಸಿದರು ಜನಪತಿನಿಧಿಗಳು ತಿರುಗಿಯೂ ನೀಡದೇ ಸಮಸ್ಯೆಗಳನ್ನು ನೋಡದೇ ಇದ್ದರಿಂದ ಮತ್ತೆ ಫೆಬ್ರವರಿ 1ರಂದು ನೀರಿಗಾಗಿ ಹೊನ್ನವಳ್ಳಿ ಸಂಪೂರ್ಣವಾಗಿ ಬಂದ್ ಮಾಡಿದ್ದಲ್ಲದೇ ನೀರಿಲ್ಲದ ಕೆರೆಗಳಿಗೆ ಕಾಲಿಕೊಡಗಳೊಂದಿಗೆ ಮಹಿಳೆಯರು ಸೇರಿದಂತೆ ನೂರಾರುಜನರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೀರಿನ ಅಭಾವವನ್ನು ತಿಳಿಸಿದರು.
ಹೊನ್ನವಳ್ಳಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ ನಮ್ಮ ಹೊನ್ನವಳ್ಳಿ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದು ಸಾವಿರಾರು ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ.್ಲ ಇಂತಹ ಪರಿಸ್ಥಿತಿಯಲ್ಲಿ ಜನ, ಜಾನುವಾರುಗಳಿಗೆ ನೀರಿಗೆ ತುಂಬಾ ಅಭಾವವಾಗಿದೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳು ಬರುತ್ತಾರೆ. ಅವರಿಗೆ ಜನರ ಮತ ಬೇಕು ಆದರೆ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲವೇ ಎಂದು ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು.
96 ಕೆರೆಗಳನ್ನು ಬಹಿರಂಗ ಪಡಿಸಲಿ
200 ಕೋಟಿ ರೂ ಅನುದಾನತಂದಿದ್ದೇನೆಂದು ಹೇಳುತ್ತಿರುವ ಶಾಸಕರು ಆ ಅನುದಾನದಲ್ಲಿ ನೀರು ಹರಿಸುವ ಕೆರೆಗಳಾವುವು ಎಂದು ಬಹಿರಂಗಪಡಿಸಲಿ ಎಂದು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಹಸಿರುಸೇನೆ ತಾಲೂಕು ಅಧ್ಯಕ್ಷ ತಿಮ್ಲಾಪುರ ದೇವರಾಜು, ಪರಮೇಶ್ ಮಾಗೇನಹಳ್ಳಿ, ಮಾಜಿ ತಾ.ಪಂ.ಅಧ್ಯಕ್ಷ, ದೊಡ್ಡೇಗೌಡ, ಭೈರನಾಯಕನಹಳ್ಳಿ ಲೋಕೇಶ್, ನರಸಿಂಹಮೂರ್ತಿ, ಸಿದ್ದಲಿಂಗಮೂರ್ತಿ.ಬಿ.ಬಿ. ಸೇರಿದಂತೆ ನೂರಾರು ಗ್ರಾಮಸ್ಥರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








