ಮಡಿಕೇರಿ : ಇಂದು ಬೆಳ್ಳಿಗೆ 7:41ಕ್ಕೆ ಕಾವೇರಿ ತೀರ್ಥೋದ್ಭವ

ಮಡಿಕೇರಿ

    ಸಹಸ್ರಾರು ಭಕ್ತರ ಕಾತರದ ಕಾಯುವಿಕೆ ಕೊನೆಗೂ ಆ ಸಂಭ್ರಮದ ಕ್ಷಣದೊಂದಿಗೆ ಮುಕ್ತಾಯವಾಯಿತು. ಕೊಡಗು ಜಿಲ್ಲೆಯ ಮಡಿಕೇರಿಯ ಭಾಗಮಂಡಲದಲ್ಲಿ ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಜೀವ ನದಿ ಕಾವೇರಿ ಗುರುವಾರ ಬೆಳಗ್ಗೆ 7. 41 ‌ನಿಮಿಷಕ್ಕೆ ಸರಿಯಾಗಿ ತೀರ್ಥ ರೂಪಿಣಿಯಾಗಿ ಉಕ್ಕಿ ಹರಿದಳು.

    ತೀರ್ಥೋದ್ಭವದ ವೇಳೆ ಭಕ್ತರ ಜಯಘೋಷ, ಅರ್ಚಕರ ವೇದ ಮಂತ್ರಘೋಷಗಳು ಮುಗಿಲುಮುಟ್ಟಿದವು. ತೀರ್ಥ ಉಕ್ಕುತ್ತಿದ್ದಂತೆಯೇ ಮೊದಲ ತೀರ್ಥಥವನ್ನು ಬ್ರಹ್ಮ ದೇವನಿಗೆ ಅರ್ಪಣೆ ಮಾಡಲಾಯಿತು. ಬಳಿಕ ಅರ್ಚಕ ವೃಂದಕ್ಕೆ ತೀರ್ಥ ಪ್ರೋಕ್ಷಣೆ ಮಾಡಲಾಯಿತು. ನಂತರ ಭಕ್ತವೃಂದ ತೀರ್ಥ‌ಸ್ನಾನಕ್ಕೆ ಕಲ್ಯಾಣಿಗೆ ಮುಗಿಬಿದ್ದಿತು. ಬಿಂದಿಗೆ, ಕೊಡಗಳಲ್ಲಿ ತೀರ್ಥ ಸಂಗ್ರಹ ಮಾಡುತ್ತಿರುವುದು ಕಂಡುಬಂತು.

Recent Articles

spot_img

Related Stories

Share via
Copy link